ಸಿಎಂ, ಮಾಜಿ ಸಿಎಂ ಬೇಗ ಗುಣಮುಖರಾಗಲೆಂದು ಪ್ರಾಥರ್ಿಸಿ ಪೂಜೆ
ಗಂಗಾವತಿ ಆಗಸ್ಟ್ 07: ಮಾಜಿ ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ, ನಮ್ಮ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಕೊರೊನಾದಿಂದ ಬೇಗ ಗುಣಮುಖರಾಗಲಿ ಹಾಗೂ ರಾಜ್ಯದ 75 ಸಾವಿರ ಸೋಂಕಿತರು ಬೇಗ ಗುಣಮುಖರಾಗಲಿ, ಕರೋನಾ ರೋಗ ರಾಜ್ಯದಿಂದ ನಿಮರ್ೂಲನೆ ಆಗಲಿ ಎಂದು ಪ್ರಾಥರ್ಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಇಂದು ಗಂಗಾವತಿಯ ಆರಾಧ್ಯ ದೈವ ಶ್ರೀ ಚನ್ನಬಸವ ತಾತನ ಮತ್ತು ಗ್ರಾಮದೇವತೆ ಶ್ರೀ ದುಗರ್ಾದೇವಿ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಮರೇಶಪ್ಪ ಗೋನಾಳ ಮಾತನಾಡಿ, ಸಕರ್ಾರದ ವೈಫಲ್ಯಗಳನ್ನು ಎತ್ತಿತೋರಿಸಲು ಸಿದ್ದರಾಮಯ್ಯನವರ ಅವಶ್ಯಕತೆ ತುಂಬಾ ಇದೆ, ಸಿದ್ದರಾಮಯ್ಯನವರು ಸೇರಿದಂತೆ ರಾಜ್ಯದ ಎಲ್ಲಾ ಕೊರೊನಾ ಸೋಂಕಿತರು ಬೇಗ ಗುಣಮುಖರಾಗಲಿ. ಕೊರೋನಾ ರೋಗದಿಂದ ರಾಜ್ಯವನ್ನು ಮುಕ್ತವಾಗಿ ಮಾಡುವಲ್ಲಿ ಎಲ್ಲರ ಸಹಾಯ, ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿದರ್ೇಶಕರಾದ ವಿಶ್ವನಾಥ ಮಾಲಿಪಾಟೀಲ ಕೇಸರಹಟ್ಟಿ ಮಾತನಾಡಿ, ಕೊರೋನಾ ರೋಗ ಇದೊಂದು ಭಯಾನಕ ರೋಗವಲ್ಲ. ಇದಕ್ಕೆ ಯಾರೂ ಭಯಭೀತರಾಗುವ ಅವಶ್ಯಕತೆಯಿಲ್ಲ. ಇದರ ಬಗ್ಗೆ ಸೂಕ್ತ ಮುಂಜಾಗ್ರತೆ ವಹಿಸಿದರೆ, ಕೊರೋನಾ ತಡೆಗಟ್ಟುವಲ್ಲಿ ಸಫಲರಾಗಬಹುದು. ಸಾರ್ವಜನಿಕರು ಧೈರ್ಯವಾಗಿದ್ದುಕೊಂಡು, ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ಕೊರೋನಾವನ್ನು ಹೋಗಲಾಡಿಸಲು ಶಪಥ ಮಾಡಬೇಕಿದೆ ಎಂದು ಕರೆಕೊಟ್ಟರು.
ನಗರಸಭೆ ಸದಸ್ಯರಾದ ಮನೋಹರ ಸ್ವಾಮಿ ಹಿರೇಮಠ್, ಮೌಲಾಸಾಬ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರು ಬೇಗ ಕೊರೋನಾದಿಂದ ಗುಣಮುಖರಾಗಲಿ ಎಂದು ಹಾರೈಸಿ, ಕೊರೊನಾ ನಿಯಂತ್ರಣಕ್ಕೆ ಸಕರ್ಾರ ಇನ್ನೂ ಅನೇಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ ಹಾಗೂ ಸಾರ್ವಜನಿಕರೂ ಕೂಡ ಸಕರ್ಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಕೊರೋನಾವನ್ನು ಹೋಗಲಾಡಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯರಾದ ಅಮರಜೋತಿ ನರಸಪ್ಪ, ಆನಂದ್ ಹಸಲಕರ, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಸುರೇಶ್ ಗೌರಪ್ಪ, ಕೆ. ವಿಶ್ವನಾಥ್, ಗುರು, ನಾಗರಾಜ್ ಬರಗೂರು, ಕೆ .ಅಂಬಣ್ಣ, ಶಿವಣ್ಣ ಇತರರು ಉಪಸ್ಥಿತರಿದ್ದರು.