ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ರಾಣೀಬೆನ್ನೂರು.ನವೆಂಬರ್ 5 ಇಲ್ಲಿನ ಹುಣಸಿಕಟ್ಟಿ ರಸ್ತೆಯ ಖನ್ನೂರು ವಿದ್ಯಾನಿಕೇತನ ಶಾಲಾ ಆವರಣದಲ್ಲಿ ಇತ್ತೀಚೆಗೆ ನಡೆದ ಭಾರತೀಯ ವೈದ್ಯಕೀಯ ಸಂಘದ ನೂತನ ಅಧ್ಯಕ್ಷ-ಕಾರ್ಯದರ್ಶಿ-ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ನೂತನ ಅಧ್ಯಕ್ಷ ಡಾ.ಪ್ರವೀಣ ಖನ್ನೂರ, ಕಾರ್ಯದರ್ಶಿ ಡಾ.ವಿರುಪಾಕ್ಷಪ್ಪ ಸೇರಿದಂತೆ ಮತ್ತಿತರ ಪದಾಧಿಕಾರಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಡಾ.ರವಿ ಕುಲಕರ್ಣಿ, ದಾವಣಗೆರೆಯ ಡಾ.ಎನ್.ಕೆ.ಕಾಳಪ್ಪನವರ, ಡಾ.ನಾಗರಾಜ ದೊಡ್ಮನಿ, ಡಾ.ನಮಿತಾ ಖನ್ನೂರು, ಡಾ.ಶೈಲಶ್ರೀ ಖನ್ನೂರ, ಡಾ.ಬಿ.ಆರ್.ಸಾವಕಾರ, ಡಾ.ಎಂ.ಎಂ.ಅನಂತರಡ್ಡಿ, ಡಾ.ಬಿ.ಎಸ್.ಅಂಗಡಿ, ಡಾ.ನಿರಂಜನ ಮಿರ್ಜಿ, ಡಾ.ಎನ್.ಬಿ.ಶೆಟ್ಟಿಕೇರಿ, ಡಾ.ಮೇನಕಾ ಸಾವಕಾರ, ಡಾ.ಜ್ಯೋತಿ ತಂಡಿ, ಡಾ.ಶಿವಪ್ರಕಾಶ ತಂಡಿ, ಡಾ.ಹೇಮಾ ಪಾಟೀಲ, ಡಾ.ಪ್ರತಿಭಾ ನಾಯಕ, ಡಾ.ವೈಜಯಂತಿ ದೇಶಪಾಂಡೆ, ಡಾ.ನಳೀನಿ ಸಾಲಮನಿ, ಡಾ.ಎಚ್.ಎಸ್.ಬೆಳವಿಗಿ, ಡಾ.ಮೋಹನ ಹಂಡೆ, ಡಾ.ವಿದ್ಯಾ ಕೇಲಗಾರ ಸೇರಿದಂತೆ ಸಂಘದ ಅನೇಕ ಸದಸ್ಯರು ಗಣ್ಯಮಾನ್ಯರು ವೈದ್ಯರು ಪಾಲ್ಗೊಂಡಿದ್ದರು.