ಇಂದಿನ ಮಕ್ಕಳಲ್ಲಿ ರಾಷ್ಟ್ರೀಯತೆಯ ಅರಿವು ಮೂಡಿಸುವುದಗತ್ಯ
ಖ್ಯಾತ ಉಪನ್ಯಾಸಕ ರಾಘವೇಂದ್ರ ಕುಲಕರ್ಣಿ ಅಭಿಪ್ರಾಯ: ಪ್ರಶಸ್ತಿ ಪ್ರದಾನ, ಗೊಮ್ಮಟೋತ್ಸವ ಸಮಾರೋಪ
ಮಾಂಜರಿ 24: ಭಾರತ ವಿಶ್ವಗುರು ಆಗುತ್ತಿದೆ ಎನ್ನುವ ಹೊತ್ತಲ್ಲಿ ನಾನಾ ಆಂತರಿಕ ಸಾಮಾಜಿಕ ಸಮಸ್ಯೆಗಳು ಉಲ್ಪಣಿಸುತ್ತಿವೆ. ಇಂದಿನ ಮಕ್ಕಳಲ್ಲಿ ರಾಷ್ಟ್ರೀಯತೆಯ ಅರಿವು ಮೂಡಿಸಿದಲ್ಲಿ ಭವಿಷ್ಯದ ಸುಂದರ ಭಾರತ ಸಾಧ್ಯ ಎಂದು ಖ್ಯಾತ ಉಪನ್ಯಾಸಕ ರಾಘವೇಂದ್ರ ಕುಲಕರ್ಣಿ ಅಭಿಪ್ರಾಯ ಪಟ್ಟರು.
ಅವರು ಇಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಗೋಮಟೇಶ ಶಿಕ್ಷಣ ಸಂಸ್ಥೆಯ ಡಾ ಮಗದುಮ್ ಸಿ ಬಿ ಎಸ್ ಸಿ ಶಾಲೆಯ ವಿದ್ಯಾರ್ಥಿಗಳ ಪ್ರಶಸ್ತಿ ಪುರಸ್ಕಾರ ಸಮಾರಂಭ ಮತ್ತು ಗೊಮ್ಮಟೋತ್ಸವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಪಾಲ್ಗೊಂಡು ಮಾತನಾಡಿದರು.
ಇಂದಿನ ಮಕ್ಕಳ ಮೇಲೆ ಬಹಳ ಒತ್ತಡವಿದೆ. ಪೋಷಕರು ಮತ್ತು ಶಿಕ್ಷಕರ ಮಹದಾಸೆ ನೆರವೇರಿಸುವ, ಕನಸು ನನಸು ಮಾಡುವ ಜವಾಬ್ಧಾರಿಗಳಿವೆ. ಆದರೆ ಪೂರಕ ವಾತಾವರಣ ಇಲ್ಲ. ಕಲಿಕೆಯ ಒತ್ತಡದೊಳಗೆ ಸಾಮಾಜಿಕ ಅರಿವು, ದೇಶ ಪ್ರಜ್ಞೆಯ ಕೊರತೆ ಎದ್ದು ಕಾಣುತ್ತಿದೆ. ಸಹಜ ಸ್ವಾತಂತ್ರ್ಯ ಇಲ್ಲದೇ ನಿಯಮಗಳೊಳಗೆ ಭವಿಷ್ಯ ಕಟ್ಟಿಕೊಳ್ಳುವ ಆತುರದಲ್ಲಿ ಎಲ್ಲವನ್ನೂ ಕಳೆದುಕೊಳ್ಳುವ ಬೀತಿ ಇದೆ. ಇಂದು ಕುಟುಂಬದ ಎಲ್ಲರೂ ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸುವ ಹಂತದಲ್ಲಿ ಮಕ್ಕಳಲ್ಲಿ ಬಂಧಿಯಾಗಿರುವ ಭಾವನೆಗಳು ಮನಸ್ಸಿನೊಳಗೆ ಕುಳಿತು ಮುಂದಿನ ದಿನಗಳಲ್ಲಿ ಬೇರೆ ರೀತಿಯಲ್ಲಿ ಪ್ರಕಟಿಸುವ ಅಪಾಯಗಳ ಬಗ್ಗೆ ನಾವು ಎಚ್ಚರವಹಿಸಬೇಕಾದ್ದು ತೀರಾ ಅನಿವಾರ್ಯ. ನಮ್ಮ ಕನಸುಗಳ ಸಕಾರಕ್ಕಾಗಿ ಮಕ್ಕಳ ಭವಿಷ್ಯಕ್ಕೆ ಪೆಟ್ಟು ಬೀಳುವ ಬಗ್ಗೆ ಪೋಷಕರು ಚಿಂತಿಸಬೇಕಾದ್ದು ತೀರಾ ಅಗತ್ಯ ಎಂದ ಅವರು ಮಕ್ಕಳಲ್ಲಿ ಸದ್ಗುಣಗಳ ಜೊತೆಗೆ ಸಾಮಾಜಿಕ ಪ್ರಜ್ಞೆ ಮತ್ತು ಜವಾಬ್ಧಾರಿ ಮೂಡಿಸಿ, ಭವಿಷ್ಯದ ಒಳ್ಳೆಯ ಪ್ರಜೆಗಳಾಗಿ ರೂಪಿಸುವ ಮೂಲಕ ಭವ್ಯ ಭಾರತದ ಕನಸು ನನಸು ಮಾಡಬೇಕೆಂದರು.
ಸಮಾಜದಲ್ಲಿ ಈಗ ಸ್ವಾರ್ಥ, ಅವಕಾಶವಾದಿತನಗಳು ಹೆಚ್ಚಿವೆ. ಸಮಾಜದಿಂದ ಏನೆಲ್ಲಾ ಪಡೆದ ನಾವು ಹಿಂತಿರುಗಿಸುವ ಮನೋಭಾವದಿಂದ ವಂಚಿತರಾಗುತ್ತಿದ್ದೇವೆ. ಎಂದಿಗೂ ಕೃತಜ್ಞತಾ ಮನೋಭಾವ ಶ್ರೇಯಸ್ಕರ ಎಂಬ ಸಾಮಾನ್ಯ ಜ್ಞಾನ ನಮ್ಮಲ್ಲಿರಬೇಕು. ಸಮಾಜದ ಪ್ರತಿ ಆಗುಹೋಗುಗಳಿಗೆ ಸ್ಪಂದಿಸಬೇಕು ಎಂದ ಅವರು ಸಾಧನೆಗೆ ಸುಲಭವಾದ, ಅಡ್ಡವಾದ ಯಾವುದೇ ಮಾರ್ಗಗಳಿಲ್ಲ. ಪರಿಶ್ರಮ ಸರಳೀಕರಣಕ್ಕೆ ಪಯರ್ಾಯವಿಲ್ಲ, ಸಾಧನೆಯ ಮಾರ್ಗದ ವಿಫಲತೆಗೆ ಕ್ಷಮೆ ಇಲ್ಲ. ಅರ್ಥತ್ ಸತತ ಪರಿಶ್ರಮ, ತ್ಯಾಗ, ಸತತ ಪ್ರಯತ್ನದ ಮೂಲಕ ಗುರಿ ಸಾಧಿಸಲೇ ಬೇಕು. ಆಗ ಮಾತ್ರ ಯಶಸ್ಸು, ಸನ್ಮಾನ ನಮ್ಮ ಹುಡುಕಿ ಬರುತ್ತದೆ ಎಂದು ಮಂಗಳೂರಿನ ಖ್ಯಾತ ಉಪನ್ಯಾಸಕ ಮತ್ತು ಸದ್ಯ ಅಮೇರಿಕಾದಲ್ಲಿ ವಾಸಿಸುವ ನಿತ್ಯಾನಂದ ಶೆಟ್ಟಿ ಹೇಳಿದರು.
ಸಂಸ್ಥೆಯ ಅಧ್ಯಕ್ಷ ಡಾ ಏನ್ ಎ ಮಗದುಮ್ ಸಂಸ್ಥೆಯ ಪ್ರಗತಿ ಬಗ್ಗೆ ಸವಿವರವಾದ ವರದಿ ಓದಿ, ಶಾಲೆಯಲ್ಲಿ ಶೈಕ್ಷಣಿಕ ಪ್ರಗತಿ ಜೊತೆಗೆ ಮಕ್ಕಳ ಸವಾರ್ಂಗೀಣ ಬೆಳವಣಿಗೆಗೆ ಸಾಕಷ್ಟು ಒತ್ತುಕೊಟ್ಟು ಶಕ್ತಿ ಮೀರಿ ಪ್ರಗತಿ ಸಾಧಿಸಲಾಗಿದೆ. ಮಕ್ಕಳಲ್ಲಿ ಪಠ್ಯ, ಪಠ್ಯೇತರ ಚಟುವಟಿಕೆ ಜೊತೆಗೆ ಸಾಮಾಜಿಕ ಸೇವಾಕಾರ್ಯಗಳ ಪರಿಚಯ ಮಾಡಿಕೊಡಲಾಗಿದೆ ಎಂದ ಅವರು ಹತ್ತು ವರ್ಷಗಳಲ್ಲಿ ಶಾಲೆ ಮಹತ್ತರ ಹೆಜ್ಹೆಗಳನ್ನು ಇಟ್ಟು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುವಲ್ಲಿ ಪೋಷಕರು, ಹಿತೈಷಿಗಳ ಸಹಕಾರ, ಪ್ರೋತ್ಸಾಹ ಅವಿಸ್ಮರಣೀಯವಾದುದು ಎಂದು ಶ್ಲಾಘಿಸಿದ ಅವರು ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಈ ವೇಳೆ ಸುರೇಶ್ ಚೌಗುಲಾ ಹರ್ಷವರ್ಧನ್ ಮಗದುಮ್ ಲಲಿತಾ ಮಗದುಮ ಪ್ರಾಚಾರ್ಯ ಏನ್ ಎಸ್ ನಿಡುಗುಂದೆ ಹಾಜರಿದ್ದರ