ಲೈನ್ಮನ್ಗಳಿಗೆ ಜೆಸಿಐ ಸಂಸ್ಥೆ ಸೆಲ್ಯೂಟ್ ಸೈಲೆಂಟ್ ವರ್ಕರ್ ಎಂಬ ಬಿರುದು
ಶಿಗ್ಗಾವಿ : ಜೆಸಿಐ ಸಂಸ್ಥೆ ಶಿಗ್ಗಾವಿ ಜನಪದ ವಲಯ 24 ನೇತೃತ್ವದಲ್ಲಿ ಹುಬ್ಬಳ್ಳಿ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಸಂಸ್ಥೆಯಲ್ಲಿ ಕೊರೊನಾ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ 11 ಜನ ಲೈನ್ಮನ್ಗಳಿಗೆ ಜೆಸಿಐ ಸಂಸ್ಥೆ ಸೆಲ್ಯೂಟ್ ಸೈಲೆಂಟ್ ವರ್ಕರ್ ಎಂಬ ಬಿರುದು ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.ಜೆ.ಸಿ ಅಧ್ಯಕ್ಷ ಪ್ರಕಾಶ ಔಂಧಕರ ಸನ್ಮಾನಿಸಿ ಮಾತನಾಡಿ ಕೊರೊನಾ ಸಂದರ್ಭದಲ್ಲಿ ಎಲ್ಲರಂತೆ ಇವರು ಸಹಿತ ಅವಿನಿರತವಾಗಿ ಸೇವೆಯನ್ನು ಸಲ್ಲಿಸಿದರು ಅತಿ ಹೆಚ್ಚು ಅಪಾಯದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಕಾರ್ಯನಿರ್ವಹಿಸುವ ಇವರ ಸೇವೆಯನ್ನು ಪರಿಗಣಿಸಿ ಜೆ.ಸಿ.ಐ ಸಂಸ್ಥೆಯಿಂದ ಸನ್ಮಾನ ಕಾರ್ಯಕ್ರಮ ಮಾಡಿ ಅಭಿನಂದಿಸಲಾಯಿತು.
ಹೆಸ್ಕಾಂ ಎಇ ವಿನುತಾ ಮಾತನಾಡಿ ನಮ್ಮ ಇಲಾಖೆಯ ಸಿಬ್ಬಂದಿಗಳನ್ನು ಸಹಿತ ಪರಿಗಣನೆಗೆ ತೆಗೆದುಕೊಂಡು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸುತ್ತಿರುವುದು ಹೆಮ್ಮೆಯ ವಿಷಯ ಅದರಲ್ಲಿ ಜೆಸಿಐ ಸಂಸ್ಥೆ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಸೆಕ್ಷನ್ ಅಧಿಕಾರಿ ನಾಗರಾಜ ಬಂಡಿವಡ್ಡರ, ಉಪ ಪ್ರಾಚಾರ್ಯ ಜಿ.ಎನ್.ಯಲಿಗಾರ, ಗುರುರಾಜ ಹುಚ್ಚಣ್ಣನವರ ಡಾ.ಕುಮಾರಗೌಡ ಪಾಟೀಲ, ರಾಘವೇಂದ್ರ ದೇಶಪಾಂಡೆ, ಕೆ.ಬಿ.ಚನ್ನಪ್ಪ, ಎಸ್.ಎಫ್.ಜಂಗ್ಲೇಪ್ಪನವರ, ಪವನ ಕೌಜಲಗಿ, ತೋಟಗೇರ,ಕೆ.ಎಸ್.ದಳವಾಯಿ, ಸೇರಿದಂತೆ ವಿ.ಗು.ರಾ.ಸ.ಸದಸ್ಯ ಮಂಜುನಾಥ ಮಣ್ಣಣ್ಣವರ ಹಾಗೂ ಜೆ.ಸಿ.ಐ ಮತ್ತು ಹೆಸ್ಕಾಂ ಬಂಧುಗಳು ಉಪಸ್ಥಿತರಿದ್ದರು.