ಚಿಕ್ಕೋಡಿ

ಬಿಜೆಪಿ ಸರ್ಕಾರ ಉ .ಕ 15 ಏತ ನೀರಾವರಿ ಯೋಜನೆ ಮಂಜೂರು ಮಾಡುವ ಮೂಲಕ 5700 ಕೋಟಿ ರೂ ಅನುದಾನ ಬಿಡುಗಡೆ ಮಾಡಿದ : ಸಚಿವ ಗೋವಿಂದ ಕಾರಜೋಳ

ಬಿಜೆಪಿ ಸರ್ಕಾರ ಉ .ಕ 15 ಏತ ನೀರಾವರಿ ಯೋಜನೆ ಮಂಜೂರು ಮಾಡುವ ಮೂಲಕ 5700 ಕೋಟಿ ರೂ ಅನುದಾನ ಬಿಡುಗಡೆ ಮಾಡಿದ : ಸಚಿವ ಗೋವಿಂದ ಕಾರಜೋಳ

ಲೋಕದರ್ಶನ ವರದಿ

 ಮಾಂಜರಿ 28:  ಕಳೆದ 60 ವರ್ಷದಿಂದ ನೀರಾವರಿಯಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದ್ದು ನಿಜ, ಅದನ್ನು ಸರಿಪಡಿಸಲು ಬಿಜೆಪಿ ಸರ್ಕಾರ ಉತ್ತರ ಕರ್ನಾಟಕದ ಪ್ರಮುಖ 15 ಏತ ನೀರಾವರಿ ಯೋಜನೆ ಮಂಜೂರು ಮಾಡುವ ಮೂಲಕ 5700 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ. ಈ ಎಲ್ಲ ಯೋಜನೆಗಳು ಬರುವ ಒಂದು ವರ್ಷದ ಅವಧಿಯಲ್ಲಿ ಮುಕ್ತಾಯಗೊಳ್ಳಲಿವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

      ರಾಯಬಾಗ ವಿಧಾನಸಭೆ ಕ್ಣೇತ್ರದ ಚಿಕ್ಕೋಡಿ ತಾಲೂಕಿನ 14 ಗ್ರಾಮಗಳ ಸುಮಾರು 8390 ಹೆಕ್ಟರ ಜಮೀಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕರಗಾಂವ ಏತ ನೀರಾವರಿ ಯೋಜನೆಯ 567 ಕೋಟಿ ರೂ ಮೊತ್ತದ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಅನೇಕ ವರ್ಷದ ಬೇಡಿಕೆ ಕರಗಾಂವ ಏತ ನೀರಾವರಿ ಯೋಜನೆ ಅನುಷ್ಟಾನ ಮಾಡಲು ಬೇಡಿಕೆ ಇತ್ತು. 15 ಹಳ್ಳಿಯ ರೈತರ ಬದುಕು ಹಸನಾಗಲು ಈ ಯೋಜನೆ ಸಾಕಾರವಾಗಲಿದೆ. ಒಂದು ವರ್ಷದ ಅವಧಿಯಲ್ಲಿ ರೈತರ ಜಮೀನುಗಳಿಗೆ ನೀರು ಹರಿಯಲಿದೆ. ನೀರಾವರಿಯಲ್ಲಿ ಉತ್ತರ ಕರ್ನಾ ಟಕಕ್ಕೆ ಅನ್ಯಾಯ ಆಗಿರುವುದು ಸತ್ಯೆ. 60 ವರ್ಷದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ಮಾಡಿದರೂ ನೀರಾವರಿ ಕ್ಷೇತ್ರಕ್ಕೆ ಆಧ್ಯತೆ ನೀಡಲಿಲ್ಲ, ರೈತರ ಬದುಕು ಹಸನಾಗಲು ಬಿಜೆಪಿ ಸರ್ಕಾರ ರೈತಪರ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ ಎಂದರು. ಆಲಮಟ್ಟಿ ಡ್ಯಾಂ ಎತ್ತರಿಸಿ ಇನ್ನೂ ಹಲವು ನೀರಾವರಿ ಯೋಜನೆ ಅನುಷ್ಠಾನ ಮಾಡುವುದು ಸರ್ಕಾರದ ಮುಂದೆ ಸವಾಲು ಇದೆ. ಆದರೆ ನ್ಯಾಯಾಲಯದ ತೊಡಕು ಇದ್ದು, ಅದನ್ನು ಬಗೆಹರಿಸಿ ಮುಂದುಹೋಗಬೇಕಿದೆ. ಇನ್ನೂ 66 ಲಕ್ಷ ಹೆಕ್ಟರ ಪ್ರದೇಶ ನೀರಾವರಿ ಮಾಡಲು ಅವಕಾಶ ಇದೆ. ಕಳೆದ ಮೂರುವರೆ ವರ್ಷದಲ್ಲಿ ಬಿಜೆಪಿ ಸರಕಾರ  75 ಸಾವಿರ ಕೋಟಿ ರೂ ಅನುದಾನ ವಿನಿಯೋಗ ಮಾಡಿದೆ. ಸಿಎಂ ಬೊಮ್ಮಾಯಿ ಅವರು 5700 ಕೋಟಿ ರೂ ಉತ್ತರ ಕರ್ನಾಟಕದ ಸಮಗ್ರ ನೀರಾವರಿಗೆ ಅನುದಾನ ಕೊಟ್ಟಿದ್ದಾರೆ. 

  ಬಹುನಿರೀಕ್ಷಿತ 150 ಕೋಟಿ ರೂ ಮೋತ್ತದ ರಾಯಬಾಗ ತಾಲೂಕಿನ ಶಿವಶಕ್ರಿ ಯೋಜನೆಯನ್ನು ಶೀಘ್ರದಲ್ಲಿ ಮಂಜೂರಾತಿ ನೀಡಲಾಗುವುದು. ಮುಂಬರುವ ದಿನಗಳಲ್ಲಿ ಚಿಕ್ಕೋಡಿ ತಾಲೂಕಿನ ಹನುಮಾನ ಏತ ನೀರಾವರಿ ಮತ್ತು ರಾಯಬಾಗ ತಾಲೂಕಿನ ಬೆಂಡವಾಡ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಲಾಗುವುದು ಎಂದು ಭರವಸೆ ನೀಡಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ಬರಪೀಡಿತ ಪ್ರದೇಶದಲ್ಲಿ ನೀರಾವರಿ ಆಗುವುದರಿಂದ ರೈತರ ಆರ್ಥಿಕ ಪ್ರಗತಿ ಸಾಧಿಸುತ್ತಾರೆ. ನೀರಾವರಿ ಇದು ಜನರ ಜೀವಾಳವಾಗಿದೆ. ನೀರು ಹೋಗುವ ಕಾಮಗಾರಿಗೆ ರೈತರು ಸಹಕಾರ ಮಾಡಬೇಕು. ನೀರಾವರಿ ಇಲಾಖೆ ಎಲ್ಲ ರೈತರಿಗೆ ನೀರು ಸಿಗುವ ಹಾಗೇ ಸಮರ್ಪಕ ಸರ್ವೆ  ಮಾಡಬೇಕು ಎಂದರು.ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ. ಜನರ ಕಳಕಳಿಗೆ ಸ್ಪಂದಿಸಿ ರೈತರ ಪ್ರಗತಿ ಸಾಧಿಸಿರುವ ಐಹೊಳೆ ಅವರ ಕಾರ್ಯ ಶ್ಲಾಘನೀಯ ಎಂದರು. ರಾಜ್ಯಸಭೆ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಮಾತನಾಡಿ. ಉತ್ತರ ಕರ್ನಾಟಕಕ್ಕೆ ನೀರಾವರಿ ಯೋಜನೆಗೆ ಅನ್ಯಾಯ ಆಗಿರುವುದನ್ನು ಮುಖ್ಯಮಂತ್ರಿ ಸರಿಪಡಿಸಿದ್ದಾರೆ. ಉತ್ತರ ಕರ್ನಾಟಕದ ನೀರಾವರಿಗೆ 5 ಸಾವಿರ ಕೋಟಿ ರೂ ಮೀಸಲಿಟ್ಟಿರುವುದು ಅಭಿನಂದನವಾಗಿದೆ. ಚಿಕ್ಕೋಡಿ ತಾಲೂಕಿನ ಮಹಾಲಕ್ಷ್ನೀ ಏತ ನೀರಾವರಿ ಯೋಜನೆ ಆಗಬೇಕು. ರಾಯಬಾಗ ತಾಲೂಕು ಶಿವಶಕ್ತಿ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಲು ಕಾರಜೋಳ ಅವರು ಪ್ರಯತ್ನಿಸಬೇಕು ಎಂದರು.

   ಅಧ್ಯಕ್ಷತೆಯನ್ನು ಶಾಸಕ ದುರ್ಯೋ ಧನ ಐಹೊಳೆ ಮಾತನಾಡಿ ಕಳೆದ 15 ವರ್ಷದ ಹೋರಾಟ ಫಲವಾಗಿ ಇಂದು ಶಂಕು ಸ್ಥಾಪನೆಗೊಂಡ ಕರಗಾಂವ ಏತ ನೀರಾವರಿ ಯೋಜನೆ ಮಂಜೂರು ಮಾಡುವುದು ನನ್ನ ಕನಸಾಗಿತ್ತು. ಅದು ಇಂದು ಸಾಕಾರಗೊಂಡು ಜನರ ಋಣ ತೀರಿಸಲು ಸಾಧ್ಯವಾಗಿದೆ. ಉಳಿದ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಲು ಪ್ರಯತ್ನಿಸುತ್ತೇನೆ ಎಂದರು.ವೇದಿಕೆ ಮೇಲೆ ಶಾಸಕ ಪಿ.ರಾಜೀವ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪವನ ಕತ್ತಿ. ಬಿಜೆಪಿ ರೈತ ಮೋರ್ಚಾ  ಉಪಾಧ್ಯಕ್ಷ ದುಂಡಪ್ಪ. ಬೆಂಡವಾಡೆ. ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ. ಸುರೇಶ ಬೆಲ್ಲದ. ಮಹಾಲಿಂಗ ಹಂಜಿ. ದಾನಪ್ಪ ಕೊಟಬಾಗಿ. ಹೈಕೋರ್ಟ್  ನಿವೃತ್ತ ನ್ಯಾಯಾಧೀಶ ಎ.ಎಸ್.ಪಾಶ್ಚಾಪೂರೆ. ಸದಾಶಿವ ಘೋರ್ಪಡೆ. ಅಣ್ಣಾಸಾಹೇಬ ಖೇಮಲಾಪೂರೆ. ಸತೀಶ ಅಪ್ಪಾಜಿಗೋಳ. ಅರುಣ ಐಹೊಳೆ. ವ್ಹಿ.ಬಿ.ಈಟಿ. ಲಕ್ಷ್ಮಣ ಪೂಜೇರಿ ಮುಂತಾದವರು ಇದ್ದರು 

ಸುದ್ದಿ ಓದಿ