ಧಾರವಾಡ - ಹುಬ್ಬಳ್ಳಿ

ಕೇಂದ್ರ ಕಾರಾಗೃಹದಲ್ಲಿ ಆಪ್ತಸಮಾಲೋಚನಾ ಕೇಂದ್ರ ಉದ್ಘಾಟನೆ

ಕೇಂದ್ರ ಕಾರಾಗೃಹದಲ್ಲಿ ಆಪ್ತಸಮಾಲೋಚನಾ ಕೇಂದ್ರ ಉದ್ಘಾಟನೆ


ಧಾರವಾಡ 06;  ಇಲ್ಲಿನ ಕೇಂದ್ರ ಕಾರಾಗೃಹದ ಆಸ್ಪತ್ರೆ ವಿಭಾಗದಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಆಪ್ತ ಸಮಾಲೋಚನಾ ಕೇಂದ್ರವನ್ನು  ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ತನುಜಾ ಕೆ.ಎನ್  ಅವರು ಗುರುವಾರ ಉದ್ಘಾಟಿಸಿದರು.  

  ಕೇಂದ್ರ ಕಾರಗೃಹದ  ಅಧೀಕ್ಷಕರಾದ ಡಾ. ಅನಿತಾ ಆರ್ ಮಾತನಾಡಿ, ಬಂಧಿಗಳು ತಮಗೆ ಏಡ್ಸ್ ಅಥವಾ ಕ್ಷಯ ರೋಗದ ಲಕ್ಷಣಗಳು ಕಂಡು ಬಂದರೆ ಸಕಾಲದಲ್ಲಿ ಯಾರಿಂದಲೂ ಸಲಹೆ ಪಡೆಯಲು ಸಾಧ್ಯವಾಗದೇ ಮಾನಸಿವಾಗಿ ಕುಗ್ಗಿ ಹೋಗುತ್ತಾರೆ. ಅಂತಹ ಸದಂರ್ಭಗಳಲ್ಲಿ ವೈಯಕ್ತಿಕವಾಗಿ ಸಮಾಲೋಚನೆ ನೆಡಸಲು ಅನುಕೂಲವಾಗುವಂತೆ ಈ ಸಂಸ್ಥೆಯಲ್ಲಿ ಆಪ್ತ ಸಮಾಲೋಚನಾ ಕೇಂದ್ರವನ್ನು ಆರಂಭಿಸಲಾಗಿರುತ್ತದೆ ಎಂದರು.

  ಇದೇ ಸಂದರ್ಭದಲ್ಲಿ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಘಟಕ ಹಾಗೂ  ಕಿಮ್ಸ್ ಆಸ್ಪತ್ರೆಯ ಸಹಯೋಗದಲ್ಲಿ ಸಂಸ್ಥೆಯ ಸಿಬ್ಬಂದಿಗಳಿಗಾಗಿ ಕ್ಷಯ ರೋಗ ನಿಯಂತ್ರಣ ಮಾಹಿತಿ ಕಾರ್ಯಕ್ರಮ ಜರುಗಿತು.

ಸುದ್ದಿ ಓದಿ