ಅಕ್ರಮವಾಗಿ ಸಾಗಿಸುತ್ತಿದ್ದ ಸಿಂಸಂ ತುಂಡುಗಳ ವಶ
ಯಲ್ಲಾಪುರ: ಅಕ್ರಮವಾಗಿ ವಾಹನದಲ್ಲಿ ಸಿಂಸಂ ತುಂಡುಗಳನ್ನು ಸಾಗಿಸುತ್ತಿದ್ದ ಆರೋಪಿಯ ಮೇಲೆ ದಾಳಿ ನಡೆಸಿದ ಯಲ್ಲಾಪುರ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆರೋಪಿ ಸಮೇತ ಮಾಲನ್ನು ವಶಪಡಿಸಿಕೊಂಡ ಘಟನೆ ತಾಲೂಕಿನ ಹುತ್ಕಂಡ ಸಮೀಪದ ರವಿವಾರ ತಡರಾತ್ರಿ ನಡೆದಿದೆ.
ತಾಲೂಕಿನ ಹುತ್ಕಂಡ ನಿವಾಸಿ ಆಪೋಲಿನ್ ಫ್ರಾನ್ಸಿಸ್ ಫನರ್ಾಂಡಿಸ್ ಬಂಧಿತ ಆರೋಪಿ. ಈತನು ಚಂದಗುಳಿ ಗ್ರಾ.ಪಂ ವ್ಯಾಪ್ತಿಯ ಹುತ್ಕಂಡ ಸಮೀಪದ ಕಬ್ಬಿನಗದ್ದೆ ಅರಣ್ಯ ಪ್ರದೇಶದಿಂದ ತನ್ನ ಟಾಟಾ ಎಸ್ ವಾಹನ (ಕೆ.ಎ.31 9677) ಮೂಲಕ 5 ಸಿಸಂ ತುಂಡುಗಳನ್ನು ಸಾಗಿಸುತ್ತಿರುವಾಗ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.