ಹೂವಿನ ಹಡಗಲಿ

ಹೂವಿನಹಡಗಲಿ: ಅಂಗನವಾಡಿಯಲ್ಲಿ ಎಲ್ಕೆಜಿ/ಯುಕೆಜಿ ಆರಂಭಿಸಲು ಒತ್ತಾಯ

ಹೂವಿನಹಡಗಲಿ: ಅಂಗನವಾಡಿಯಲ್ಲಿ ಎಲ್ಕೆಜಿ/ಯುಕೆಜಿ ಆರಂಭಿಸಲು ಒತ್ತಾಯ

ಲೋಕದರ್ಶನ ವರದಿ

ಹೂವಿನಹಡಗಲಿ 05: ಅಂಗನವಾಡಿಯಲ್ಲಿ ಎಲ್ಕೆಜಿ/ಯುಕೆಜಿ ಆರಂಭಿಸಲು ಒತ್ತಾಯಿಸಿ ಇಲ್ಲಿನ ಅಂಗನವಾಡಿ ಕಾರ್ಯಕತರ್ೆಯರ ಮತ್ತು ಸಹಾಯಕಿಯರ ಫೆಡರೇಷನ್ ಮತ್ತು ಎಐಟಿಯುಸಿ ಸಂಘಟನೆಯಿಂದ ಶುಕ್ರವಾರ-ಶನಿವಾರ ತಾಲೂಕು ಕಚೇರಿಗೆ ಎದುರು ಅಹೋ ರಾತ್ರಿ ಧರಣಿಯನ್ನು ಪ್ರತಿಭಟನೆ ನಡೆಸಿದರು.

ಅಂಗನವಾಡಿ ಕಾರ್ಯಕರ್ತೆಯರ ಫೆಡರೇಷನ್ ಅಧ್ಯಕ್ಷೆ ಎನ್.ಮಂಜುಳಾ ಮಾತನಾಡಿಸರ್ಕಾರಿ  ಪ್ರಾಥಮಿಕ ಶಾಲೆಗಳಲ್ಲಿ ಎಲ್ಕೆಜಿ/ಯುಕೆಜಿ ಆರಂಭಿಸಲಾಗಿದ್ದು ಇದರಿಂದ ಅಂಗನವಾಡಿಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ ಮುಂದಿನ ದಿನದಲ್ಲಿ ಅಂಗನವಾಡಿ ಕೇಂದ್ರಗಳನ್ನು ಮುಚ್ಚುವ ಹುನ್ನಾರ ನಡೆದಿದೆ ಎಂದು ಆರೋಪಿಸಿದ ಅವರು ಕೂಡಲೇ ಸರ್ಕಾರ  ತಮ್ಮ ನಿಧರ್ಾರ ಕೈಬಿಟ್ಟು ಅಂಗನವಾಡಿಯಲ್ಲಿ ಎಲ್ಕೆಜಿ/ಯುಕೆಜಿ ಬೋಧನೆ ಮಾಡುವ ಶಕ್ತಿ ಕಾರ್ಯಕತರ್ೆಯರಿಗೆ ಇದೆ ಎಂದ ಅವರು ಅಂಗನವಾಡಿ ಕೇಂದ್ರಗಳನ್ನು ಇಂಗ್ಲೀಷ ಕಾನ್ವೆಂಟ್ಗಳನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು.

ಅಂಗನವಾಡಿ ಕಾರ್ಯಕತರ್ೆಯರ ಫೆಡರೇಷನ್ ಪ್ರಧಾನ ಕಾರ್ಯದಶರ್ಿ ಬಿ.ಕಮಲಾಕ್ಷಿ ಮಾತನಾಡಿ ಕಾರ್ಯಕರ್ತರು/ಸಹಾಯಕಿಯರು ನಿವೃತ್ತಿಯಾದರು ಇಡಿಗಂಟಿನ ಹಣ 50,000 ಮತ್ತು 30,000 ಹಾಗೂ ಎನ್ಪಿಎಸ್ ಹಣ ನೀಡಬೇಕು ಜತೆಗೆ ಗೋವಾ ಸಕರ್ಾರ ಕೊಡುತ್ತಿರುವ ಸೇವಾ ಅವಧಿಯ ಆಧಾರದ ಮೇಲೆ ಸಂಬಳ ಕೊಡಬೇಕ,60ವರ್ಷ ನಿವೃತ್ತಿಯಾದವರೆಗೆ 6000 ಪಿಂಚಣಿಯನ್ನು ಕೊಡಲು ಸಕರ್ಾರ ಪ್ರಣಾಳಿಕೆಯಲ್ಲಿ ಘೋಷಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕೊಟ್ರಮ್ಮ, ಜಯಾಬಾಯಿ,ಜೆ.ಇಂದಿರಾ, ಶಾಂತಿಬಾಯಿ, ದಾಕ್ಷಾಯಣಿ, ನಾಗರತ್ನ, ಎಸ್.ವಿಜಯ, ವೀರಮ್ಮ, ಸುನಂದಾ,ಲತಾ, ಹೇಮಾವತಿ, ಲಕ್ಷ್ಮವ್ವ, ಪಾರ್ವತಿ, ಹೇಮಾವತಿ,ಶೈಲಜಾ, ದ್ರಕ್ಷಾಯಣಿ, ಗಂಗಮ್ಮ, ಲೀಲಾವತಿ, ಪ್ರೇಮಾ, ಚನ್ನಮ್ಮ,ಜಾನಮ್ಮ, ಕೆ.ನೀಲಮ್ಮ, ಜಯಲಕ್ಷ್ಮಿ, ವಿನೋಧ,ಎಐಟಿಯುಸಿ ಶಾಂತರಾಜ ಜೈನ್, ಸುರೇಶ ಹಲಗಿ ಸೇರಿದಂತೆ ತಾಲೂಕಿನ ನೂರಾರು ಅಂಗನವಾಡಿ ಕಾರ್ಯಕತರ್ೆಯರು ಭಾಗವಹಿಸಿದ್ದರು.


ಸುದ್ದಿ ಓದಿ