ಮುಂಡರಗಿ

74ನೇ ಗಣರಾಜ್ಯೋತ್ಸವದ ಧ್ವಜಾರೋಹಣ

74ನೇ ಗಣರಾಜ್ಯೋತ್ಸವದ ಧ್ವಜಾರೋಹಣ

ಮುಂಡರಗಿ 26:  ದೇಶದ ಸರ್ವ ಜನರ ಏಳ್ಗೆಗಾಗಾಗಿ ಶಾಂತಿ ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಅಭಿವೃದ್ಧಿಯ ದೃಷ್ಠಿಯನ್ನುಟ್ಟಿಕೊಂಡು ರಚನೆಗೊಂಡ ನಮ್ಮ ಭಾರತೀಯ ಸಂವಿಧಾನ ಎಲ್ಲಾ ದೇಶದ ಲಿಖಿತ ಸಂವಿಧಾನಕ್ಕಿಂತ ದೀರ್ಘವಾದುದು ಹಾಗೂ ಸಮಗ್ರವಾದುದು ಎಂಬುದು ಹೆಮ್ಮೆಯ ಸಂಗತಿ ಎಂದು ತಹಶಿಲ್ದಾರ ಶೃತಿ ಮಳ್ಳಪ್ಪಗೌಡರ ಹೇಳಿದರು.

    ಜಗದ್ಗುರು ಅನ್ನದಾನೀಶ್ವರ ಸರಕಾರಿ ಕ್ರೀಡಾಂಗಣದಲ್ಲಿ ತಾಲೂಕ ಆಡಳಿತದಿಂದ ಹಮ್ಮಿಕೊಂಡಿರುವ 74ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಮನುಷ್ಯನಿಗೆ ಮೂಲಭೂತವಾಗಿ ಬೇಕಾದ ಸ್ವಚ್ಛವಾದ ಗಾಳಿ, ನೀರು ಹಾಗೂ ಉತ್ತಮ ಪರಿಸರದ ಮೇಲೆ ಅತಿಕ್ರಮಣ ಮಾಡುತ್ತಾ, ಗಿಡ ಮರಗಳನ್ನು ಕಡಿದು ಜೀವ ಸಂಕುಲದ ಮೇಲೆ ಅಪಚಾರ ಮಾಡಿದರೇ ಬದುಕು ದುಸ್ತರವಾಗುತ್ತದೆ. ಅಲ್ಲದೇ ರೋಗ ರುಜಿನಗಳು ಹೆಚ್ಚಾಗುತ್ತವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೈಗೊಂಡ ಕಾರ್ಯಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಾ ಎಲ್ಲರೂ ಒಗ್ಗೂಡಿ ಕಾರ್ಯಮಾಡಬೇಕು. ಲೋಕಲ್ ಟು ಓಕಲ್ ತತ್ವವನ್ನು ಅನುಸರಿಸುವ ಮೂಲಕ ಪ್ರಧಾನಿಯವರ ಆತ್ಮ ನಿರ್ಭರ ಭಾರತದ ಕನಸು ನನಸಾಗಬೇಕಾಗಿದೆ. ಯುವ ಶಕ್ತಿ ದೇಶದ ಶಕ್ತಿಯಾಗಿದ್ದು ಪ್ರತಿಯೊಬ್ಬರೂ  ಸ್ವಾವಲಂಬಿ ಬದುಕಿನತ್ತ ಹೆಜ್ಜೆ ಇರಿಸಬೇಕು ಎಂದರು.

ಸಂವಿಧಾನ ನಮಗೆ ಹಕ್ಕು ಹಾಗೂ ಕರ್ತವ್ಯಗಳನ್ನು ಕೊಟ್ಟಿದೆ. ಈ ಸಂವಿಧಾನಾತ್ಮಕ ಹಕ್ಕು ಬಾಧ್ಯತೆಗಳ ಬಗ್ಗೆ ತಿಳುದುಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಸುಭದ್ರ, ಸುವ್ಯವಸ್ಥಿತ ದೇಶ ನಿಮರ್ಾಣಕ್ಕೆ ಉತ್ತಮ ಪ್ರಜಾಭುತ್ವದ ಎಂದರೆ ನಿಮರ್ಾಣದ ನಿಜವಾದ ಅರಿವು ನಮಗಾಗಬೇಕು. ಪ್ರಜಾಪ್ರಭುತ್ವ ಪ್ರಜೆಗಳು, ಪ್ರಜೆಗಳಿಂದ ಪ್ರಜೆಗಳಿಗಾಗಿ ನಿಮರ್ಿಸಲಾದ ಒಂದು ವ್ಯವಸ್ಥೆ ಪ್ರಜಾಪ್ರಭುತ್ವಕ್ಕೆ ಅರ್ಥ ಬರಬೇಕೆಂದರೆ, ಪ್ರತಿಯೊಬ್ಬ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತುಕೊಳ್ಳಬೇಕು. ಮತದಾನ ಮಾಡುವದೂ ನಮ್ಮ ಹಕ್ಕು. ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕು ಚಲಾಯಿಸಬೇಕು ಎಂದು ಹೇಳಿದರು.

     ಜಗದ್ಗುರು ಡಾ.ನಾಡೋಜ ಅನ್ನದಾನೀಶ್ವರ ಮಹಾಶಿವಯೋಗಿಗಳವರು ಸಾನಿಧ್ಯ ವಹಿಸಿ ಮಾತನಾಡಿ, ದೇಶ ಕಾಯಕ ತತ್ವದಡಿ ಕರ್ತವ್ಯ ನಿರ್ವಹಿಸಬೇಕು. ದೇಶ ಕಾಯುವ ಸೈನಿಕ ಪಾತ್ರ ಬಹಳಷ್ಟು ಮುಖ್ಯವಾಗಿದ್ದು ದೇಶದ ಅಭಿವೃದ್ದಿ ಅನ್ನದಾತ ರೈತನಾಗಿದ್ದು ರೈತನ ಮಹತ್ವದ ಅರಿವಿನೊಂದಿಗೆ ಪ್ರತಿಯೊಬ್ಬರೂ ಬದುಕಿನಲ್ಲಿ ಪ್ರಾಮಾಣಿಕತೆ, ಶ್ರಮಜೀವನ ಕಾಯಕ ವೃತ್ತಿಯಿಂದ ಬದುಕಬೇಕೆಂದರು.

ಧ್ವಜಾರೋಹಣ ನೇರವೇರಿಸಿದ ನಂತರ ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ಜೊತೆಗೆ ಕರಾಟೆ ಪ್ರದರ್ಶನ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು,

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಶ್ರೀಮತಿ ಕವಿತಾ ಉಳ್ಳಾಗಡ್ಡಿ, ತಾ.ಪಂ.ಅಧಿಕಾರಿ ವಿಶ್ವನಾಥ ಹೊಸಮನಿ, ಬಿಇಓ ಎಂ.ಎಫ್.ಬಾಕರ್ಿ, ಸಿಪಿಐ ವೀರಣ್ಣ ಹಳ್ಳಿ, ಮುಖ್ಯಾಧಿಕಾರಿ ಎಂ.ಎ.ನೂರುಲ್ಲಾಖಾನ, ನೌಕರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ, ಹೆಸ್ಕಾಂ ಎಇಇ ಪಾಂಡುರಂಗ, ಸಿಡಿಪಿಒ ಮಹಾದೇವಪ್ಪ ಇರಸನಾಳ, ಡಾ.ನಿಂಗು ಸೊಲಗಿ, ಬಸವರಾಜ ಬೆನಾಳ,ಎಸ್.ಎಸ್.ಬಿಚ್ಚಾಲಿ, ಗಂಗಾಧರ ಅಣ್ಣಿಗೇರಿ, ಲಕ್ಷ್ಮಣ ತಗಡಿನಮನಿ, ಮಂಜುನಾಥ ಮುಧೋಳ, ಅಡಿವೆಪ್ಪ ಚಲವಾದಿ, ಜೆ.ಬಿ.ಅಮಾತಿ, ಸೇರಿದಂತೆ ಇತರರು ಪಾಲ್ಗೂಂಡಿದ್ದರು.

  ಎಸ್.ಡಿ.ಬಸೇಗೌಡ್ರ ಕಾರ್ಯಕ್ರಮ ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆ ನಿದರ್ೇಶಕ ಉದಯಕುಮಾರ ಯಲಿವಾಳ ಸ್ವಾಗತಿಸಿದರು. 


ಸುದ್ದಿ ಓದಿ