ತಾಳಿಕೋಟಿ

ಐತಿಹಾಸಿಕ ಭೀಮನ ಭಾವಿ ಸ್ವಚ್ಚತೆ

ಐತಿಹಾಸಿಕ ಭೀಮನ ಭಾವಿ ಸ್ವಚ್ಚತೆ
ತಾಳಿಕೋಟೆ ಪಟ್ಟಣದ ಐತಿಹಾಸಿಕ ಭೀಮನ ಭಾವಿಯನ್ನು ಯುವಕರು ಸ್ವಚ್ಚತೆಯನ್ನು ಕೈಕೊಂಡರು.

ತಾಳಿಕೋಟೆ04: ಪಟ್ಟಣದ ಆರಾಧ್ಯ ದೈವ ಖಾಸ್ಗತೇಶ್ವರ ಮಠದ ಜಾತ್ರೆಯ ಹಿನ್ನಲೆಯಲ್ಲಿ ರವಿವಾರ ರಾಜವಾಡೆಯಲ್ಲಿಯಲ್ಲಿರುವ ಐತಿಹಾಸಿಕ ಪುರಾತನ ಭೀಮನಭಾವಿ ಸ್ವಚ್ಛತಾ ಕಾರ್ಯವನ್ನು ನೂರಾರು ಯುವಕರ ಕೈಕೊಂಡರು. 

ಪಟ್ಟಣದಲ್ಲಿ ವಿವಿಧ ಜಾತ್ರೆ, ಉತ್ಸವಗಳಾಗಲಿ ಅಥವಾ ವೈಯಕ್ತಿಕ ಮದುವೆ, ಇನ್ನೀತರ ಕಾರ್ಯಕ್ರಮಗಳಿಗೆ ಯೋಗ್ಯವಾಗಿರುವ ಪುರಾತನ ಭೀಮನಭಾವಿಯು ಬಹಳ ವರ್ಷಗಳಿಂದ ಸ್ವಚ್ಛತೆ ಕಾಣದೆ ಹಾಗೆಯೇ ಉಳಿದುಕೊಂಡಿತ್ತು. ಪಟ್ಟಣದ ಆರಾಧ್ಯ ದೈವ ಖಾಸ್ಗತೇಶ್ವರ ಮಠದ ಜಾತ್ರೆ ಹಿನ್ನಲೆಯಲ್ಲಿ ಗಂಗಸ್ಥಳವನ್ನು ಕೈಕೊಳ್ಳಲು ಭಾವಿ ಸ್ವಚ್ಚತಾ ಕಾರ್ಯವನ್ನು ಕೈಕೊಳ್ಳಲು ತಿರ್ಮಾನಿಸಲಾಯಿತು. ಹೆಮ್ಮೆಯ ಭೀಮನಭಾವಿಯನ್ನು ಸ್ವಚ್ಛತೆಗೊಳಿಸಲು ವಿವಿಧ ರೀತಿಯ ತಂಡಗಳನ್ನು ರಚಿಸಿಕೊಂಡು ಸಂಪೂರ್ಣ ಸ್ವಚ್ಛತೆಯನ್ನು ಕೈಕೊಳ್ಳಲಾಯಿತು. ಕಳೆದ 3 ವರ್ಷಗಳಿಂದ ಕೊರೊನಾ ಕಾರಣದಿಂದ ಖಾಸತೇಶ್ವರ ಜಾತ್ರಾ ಮಹೋತ್ಸವವು ನಡೆಯದೆ ಇರುವದರಿಂದ ಈ ಸಲ ಖಾಸ್ಗತೇಶ್ವರ ಜಾತ್ರಾ ಮಹೋತ್ಸವವು ಸೋಮವಾರ  ಪ್ರಾರಂಭಗೊಳ್ಳಲಿದ್ದು ಜಾತ್ರೆಯನ್ನು ಅದ್ದೂರಿಯಾಗಿ ವೈಭವವಾಗಿ ಆಚರಿಸಲು ಎಲ್ಲ ರೀತಿಯ ತಯಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ರವಿವಾರ ಖಾಸ್ಗತೇಶ್ವರ ಮಠದ ಪಿಠಾಧಿಪತಿ ಸಿದ್ದಲಿಂಗ ದೇವರ ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯ ನಡೆಯಿತು. ಬೆಳಗಿನಿಂದಲೇ ಪ್ರಾರಂಭವಾದ ಭೀಮನಭಾವಿ ಸ್ವಚ್ಚತಾ ಕಾರ್ಯಕ್ಕೆ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರಾದಿಯಾಗಿ ಮತ್ತು  ಸರ್ವ ಧರ್ಮದ ಯುವಕರು ಪಾಲ್ಗೊಂಡು ಈ ಸ್ವಚ್ಚತಾ ಕಾರ್ಯದಲ್ಲಿ ಕೈಜೋಡಿಸಿದ್ದರು. 

ಪುರಸಭೆ ಸದಸ್ಯರಾದ ಜೈಸಿಂಗ ಮೂಲಿಮನಿ, ಮುದಕಪ್ಪ ಬಡಿಗೇರ, ಅಣ್ಣಪ್ಪ ಜಗತಾಪ, ಡಿ.ವಿ.ಪಾಟೀಲ, ಶಿವಾಜಿ ಶೇವಳಕರ, ಬಸ್ಸು ಮಾಲಿಪಾಟೀಲ, ಕಾಶಿನಾತ ಪಾಟೀಲ, ರಾಹುಲ ಸಜ್ಜನ, ಈಶ್ವರ ಹೂಗಾರ, ಅಲ್ಲಾಭಕ್ಷ ಚಳ್ಳಿಗಿಡ, ರಾಘವೇಂದ್ರ ಮಾನೆ, ನಾಗರಾಜ ಬಳಗಾರ ಸೇರಿದಂತೆ ನೂರಾರು ಯುವಕರು ಪಾಲ್ಗೋಂಡಿದ್ದರು. 

ಸುದ್ದಿ ಓದಿ