ಬ್ಯಾಡ್ಗಿ

ಬ್ಯಾಡಗಿ ಕ್ಷೇತ್ರದ ಅಭಿವೃದ್ಧಿಗೆ 50ಕೋಟಿ ವಿಶೇಷ ಅನುದಾನ: ಶಾಸಕ

ಬ್ಯಾಡಗಿ ಕ್ಷೇತ್ರದ ಅಭಿವೃದ್ಧಿಗೆ 50ಕೋಟಿ ವಿಶೇಷ ಅನುದಾನ: ಶಾಸಕ

ಬ್ಯಾಡಗಿ : ರಾಜ್ಯದ ಮುಖ್ಯಮಂತ್ರಿಗಳಿಂದ 50ಕೋಟಿ ವಿಶೇಷ ಅನುದಾನವನ್ನು ಪಡೆದುಕೊಂಡು ಕ್ಷೇತ್ರದಲ್ಲಿ ವಿವಿಧ ಅಭಿವೃಧ್ದಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.

ತಾಲೂಕಿನ ಚಿಕ್ಕಬಾಸೂರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ 5ಕೋಟಿ ರೂಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಚಿಕ್ಕಬಾಸೂರ -ಕಬ್ಬೂರ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ತಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಪಡೆದಿರುವ ವಿಶೇಷ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಗೆ 33ಕೋಟಿ, ಪಂಚಾಯತರಾಜ್ ಇಲಾಖೆಗೆ 10ಕೋಟಿ ರೂಗಳನ್ನು ವಿವಿಧ ರಸ್ತೆಗಳ ಅಭಿವೃದ್ಧಿಗೆ ನೀಡಿ ಗ್ರಾಮಾಂತರ ಭಾಗದ ಎಲ್ಲ ಸಂಪರ್ಕ ರಸ್ತೆಗಳನ್ನು ಗುಣಮಟ್ಟದಲ್ಲಿ ನಿಮರ್ಿಸಲು ಪ್ರಾಶಸ್ತ್ಯವನ್ನು ನೀಡಲಾಗಿದೆ. ಅಲ್ಲದೇ, ಕ್ಷೇತ್ರದಲ್ಲಿ ತಲಾ 50ಲಕ್ಷ ರೂಗಳಂತೆ 14ಸಮುದಾಯ ಭವನಗಳನ್ನು ನಿಮರ್ಿಸಲು ನಿಮರ್ಿತಿ ಕೇಂದ್ರಕ್ಕೆ 7ಕೋಟಿ ರೂಗಳ ಅನುದಾನವನ್ನು ಒದಗಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷರುಗಳಾದ ವೀರಭದ್ರಪ್ಪ ಗೊಡಚಿ, ಜಗದೀಶ ಕಣಗಲಭಾವಿ, ತಾಪಂ ಮಾಜಿ ಅಧ್ಯಕ್ಷ ಹನುಮಗೌಡ ಪಾಟೀಲ, ಗ್ರಾಪಂ ಸದಸ್ಯ ತಬರೇಜ್, ಮುಖಂಡರಾದ ಶಿವಾನಂದ ಕಡಗಿ, ಗಣೇಶಪ್ಪ ತುಮರಿಕೊಪ್ಪ, ಉಮೇಶ ರಟ್ಟಿಹಳ್ಳಿ, ಇಂಜನೀಯರ್ ಎ.ಎಸ್.ಪಾಟೀಲ, ಗುತ್ತಿಗೆದಾರ ಮಹೇಶ ಹಾವೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸುದ್ದಿ ಓದಿ