ರಾಮ ನಗರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಲೋಕದರ್ಶನ ಸುದ್ದಿ:
ಉಚಿತ ಆರೋಗ್ಯ ತಥಾಸನ ಶಿಬಿರದಿಂದ ಆಥರ್ಿಕ ಹೊರೆ ಕಡಿಮೆಯಾಗುತ್ತದೆ. ವಸಂತ ಆಕರ್ಾಚಾರ್ ಹೇಳಿಕೆ,
ಧಾರವಾಡ 30 ರಂದು ಶನಿವಾರ ನಗರದ ರಾಮ ನಗರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಾರಾಕೋಟ್ರಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಬಿರವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ನಾಗರಿಕ ಆರೋಗ್ಯ ಸಂರಕ್ಷಣಾ ಸಮಿತಿ ಅಧ್ಯಕ್ಷರಾದ ವಸಂತ ಅಕರ್ಾಚಾರ್ ಮಾತನಾಡಿ ಹವಮಾನದ ಏರುಪೇರುನಿಂದ ವೈತಿರಿಕ್ತ ಪರಿಣಾಮದಿಂದ ನಾಗರಿಕರಲ್ಲಿ ಹೆಚ್ಚು ಅನಾರೋಗ್ಯ ಕಂಡು ಬರುತ್ತಿದ್ದನ್ನು, ಗಮನಿಸಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದವರು ಸಾರ್ವಜನಿಕರ ಅಪೇಕ್ಷೆ ಮೇರೆಗೆ ಈ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯವರು ಸಾಕಷ್ಟು ಜನಪರ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅದರ ಪ್ರಯೋಜನವನ್ನು ಸಾರ್ವಜನಿಕರು ಪಡೆಯಬೇಕು ಇಂತಹ ಶಿಬಿರದಿಂದ ಮಧ್ಯಮ ಮತ್ತು ಕೆಳವರ್ಗದ ಜನರಲ್ಲಿ ಆಥರ್ಿಕವಾಗಿ ತೊಂದರೆಯಲ್ಲಿರುವಂತವರಿಗೆ ಈ ಯೋಜನೆ ಬಹಳ ಸದೂಪಯೋಗವಾಗುತ್ತದೆ ಎಂದು ಹೇಳಿದರು.
ಇಲ್ಲಿ ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿರುವ ರೋಗಿಗಳನ್ನು ಗುರುತಿಸಿ ಸಂಬಂಧ ಪಟ್ಟ ಕಾಯಿಲೆಗಳಿಗೆ ಉಚಿತವಾಗಿ ಔಷದೋಪಚಾರವನ್ನು ನೀಡುವುದರ ಜೊತೆಗೆ ರೋಗಿಗಳ ಜೊತೆ ಸಂವಾದವನ್ನು ಏರ್ಪಡಿಸಿ ಆರೋಗ್ಯ ಕಾಪಾಡಿಕೊಳ್ಳುವುದರ ಬಗ್ಗೆ ತಿಳುವಳಿಕೆ ನೀಡುವುದಲ್ಲದೆ, ದೊಡ್ಡ ದೊಡ್ಡ ರೋಗಗಳಿಗೆ ಸರಕಾರದ ಆಸ್ಪತ್ರೆಯಲ್ಲಿ ಯಾವ ರೀತಿ ಉಪಚಾರವನ್ನು ಪಡೆಯಬೇಕೆಂಬವುದನ್ನು ತಿಳಿ ಹೇಳಿದರು. ಈ ಸಮಯದಲ್ಲಿ 390 ರೋಗಿಗಳನ್ನು ಪರಿಕ್ಷಿಸಿ ಅವರಿಗೆ ಉಚಿತವಾಗಿ ಸಕರ್ಾರದಿಂದ ಅದೀಕೃತವಾಗಿ ಮುದ್ರಿಸಿದ ಔಷದಿಗಳನ್ನು ಕೂಡ ಕೊಡಲಾಯಿತು. ಈ ಶಿಬಿರಕ್ಕೆ ಶ್ರಮಿಸಿದ ಈ ಭಾಗದ ಹರಿಯರಾದ ಅಶೋಕ ಧಾರವಾಡ ಮತ್ತು ಮುತ್ತು ಬೆಳವಂಕಿ ತುಂಬ ಸಹಕಾರವನ್ನು ನೀಡಿದರು.
ಶಿಬಿರದ ನೇತೃತ್ವ ವಹಿಸಿದಂತಹ ಡಾ. ಸುರೇಶ ಪಿ.ಜಿ.ಸಿ.ಎನ್. ಮತ್ತು ಡಾ. ಗಾಯತ್ರಿ ಕರ್ಜಗಿ ಅಲ್ಲದೇ ಜಿಲ್ಲಾ ಆರೋಗ್ಯ ಕೇಂದ್ರ ಸಿ.ಟಿ.ಎಮ್ ಭಾಗವಹಿಸಿದ್ದರು ಸಿಸ್ಟರ್ ಪುತ್ತು ಅವರ ಸಿಬ್ಬಂದಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.