ಬ್ಯಾಡ್ಗಿ

ಶುದ್ಧ ಕುಡಿಯುವ ನೀರನ್ನು ಪೂರೈಸುವ ಕಾಮಗಾರಿಗೆ ಶಾಸಕ ಬಳ್ಳಾರಿ ಶಂಕುಸ್ಥಾಪನೆ

ಶುದ್ಧ ಕುಡಿಯುವ ನೀರನ್ನು ಪೂರೈಸುವ ಕಾಮಗಾರಿಗೆ ಶಾಸಕ ಬಳ್ಳಾರಿ ಶಂಕುಸ್ಥಾಪನೆ

ಬ್ಯಾಡಗಿ: ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ 118 ಗ್ರಾಮಗಳಲ್ಲಿ ಜಲಜೀವನ ಯೋಜನೆಯಡಿ 170 ಕೋಟಿ ರೂಗಳ ಅನುದಾನದ ವೆಚ್ಚದಲ್ಲಿ ಪ್ರತಿಯೊಂದು ಕುಟುಂಬಕ್ಕೂ ಶುದ್ಧ ಕುಡಿಯುವ ನೀರನ್ನು ಪೂರೈಸುವ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ಬ್ಯಾಡಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕುಳೇನೂರ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಜೆಜೆಎಂ ಹಾಗೂ ಮನೆಮನೆಗೆ ಗಂಗೆ ಯೋಜನೆಯಡಿ 1.84ಕೋಟಿ ರೂಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

 ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಜಾರಿಗೊಂಡಿರುವ ಈ ಯೋಜನೆಯ ಮೂಲಕ ಪ್ರತಿಯೊಬ್ಬ ವ್ಯಕ್ತಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸುವ ಸದುದ್ದೇಶವನ್ನು ಹೊಂದಲಾಗಿದೆ ಎಂದರಲ್ಲದೇ, ಗ್ರಾಮದಲ್ಲಿ ಬಸವೇಶ್ವರ ಸಮುದಾಯ ಭವನಕ್ಕೆ 50ಲಕ್ಷ, ವಾಲ್ಮೀಕಿ ಭವನದ ನಿಮರ್ಾಣಕ್ಕೆ 20ಲಕ್ಷ ಅನುದಾನ ಒದಗಿಸುತ್ತಿದ್ದು, ಶೀಘ್ರದಲ್ಲಿಯೇ ಈ ಎರಡೂ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.

ಇಂಜನೀಯರ್ ಕೆ.ನವೀನಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಮದಲ್ಲಿ ಯೋಜನೆಯ ಅನುಷ್ಠಾನದ ಕುರಿತು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ನಿರ್ಮಲಾ ಹೊನ್ನತ್ತಿ ವಹಿಸಿದ್ದರು. ಉಪಾಧ್ಯಕ್ಷೆ ಪ್ರೇಮಾ ಲಮಾಣಿ, ವೇ.ಗುರುಶಾಂತಯ್ಯ ಶಾಸ್ತ್ರಿಗಳು, ನೀಲಮ್ಮ ಕೆಂಗೊಂಡ, ಗೌರಮ್ಮ ನೆಲ್ಲೂರು, ಚಂದ್ರು ನೆಗಳೂರ, ಚಂದ್ರು ವರ್ದಿ , ಸತೀಶ ಸಂದಿಮನಿ, ಎಂ.ಬಿ.ಹೊನ್ನತ್ತಿ, ಮಲ್ಲೇಶಪ್ಪ ಮತ್ತೀಹಳ್ಳಿ, ರಾಜು ಹೊಸಕೇರಿ, ಪಿಡಿಓ ಬಿ.ಎಸ್.ಹೊನ್ನತ್ತಿ, ಗುತ್ತಿಗೆದಾರ ಪ್ರಭುರಾಜ ವರ್ದಿ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು 

ಸುದ್ದಿ ಓದಿ