ಶಿಕ್ಷಣ ಆರೋಗ್ಯವು ದೇಶದ ಅಭಿವೃದ್ಧಿಗೆ ಪೂರಕ: ಶಾಸಕ ಬಳ್ಳಾರಿ
ಬ್ಯಾಡಗಿ 21: ಶಿಕ್ಷಣ ಮತ್ತು ಆರೋಗ್ಯವು ದೇಶದ ಅಭಿವೃದ್ಧಿಗೆ ಪೂರಕವಾಗಿವೆ. ಅವುಗಳನ್ನು ನೀಡುವಲ್ಲಿ ರಾಜ್ಯ ಸರಕಾರವು ಮುಂದಾಗಿದ್ದು, ವಿದ್ಯಾರ್ಥಿಗಳು ಉತ್ತಮ ಶಿಕ್ಷ ಣ ಪಡೆಯುವ ಮೂಲಕ ದೇಶದ ಉನ್ನತಿಗೆ ಕೈ ಜೋಡಿಸುವಂತೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮನವಿ ಮಾಡಿದರು.
ತಾಲೂಕಿನ ಸುಣ್ಣಕಲ್ಲಬಿದರಿ ಗ್ರಾಮದಲ್ಲಿ 135 ಲಕ್ಷ ರೂ.ಗಳಅನುದಾನದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಂಪೌಂಡ ನಿರ್ಮಾಣಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಈ ಶತಮಾನವು ಗುಣಮಟ್ಟದ ಶಿಕ್ಷಣದ ಶತಮಾನವಾಗಿದೆ. ಆದ್ದರಿಂದ ಶಿಕ್ಷ ಣ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಗುಣಮಟ್ಟವನ್ನು ಕಾಪಾಡಬೇಕಾಗಿದೆ. ಶಿಕ್ಷ ಣದ ಜೊತೆಗೆ ಕ್ರೀಡೆಗೂ ಹೆಚ್ಚಿನ ಆದ್ಯತೆಯನ್ನು ವಿದ್ಯಾರ್ಥಿಗಳು ನೀಡಬೇಕಾಗಿದ್ದು ಅದಕ್ಕೆ ಸಂಬಂಧಿಸಿದಂತೆ ಶಿಕ್ಷ ಕರು ಮತ್ತು ಪಾಲಕರು ಸಹ ಪ್ರೊತ್ಸಾಹ ನೀಡಬೇಕಾಗಿದೆ ಎಂದರು.ಗ್ರಾಮ ಪಂಚಾಯತ ಅಧ್ಯಕ್ಷ ಮಹದೇವಗೌಡ್ರ ಜಾಪಾಳಿ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಉತ್ತಮ ಸಾಧನೆ ಮಾಡುವ ಗುರಿ ಇರಬೇಕು. ಜತೆಗೆ ಹಿಂದೆ ಗುರು ಇರಬೇಕು. ಪ್ರಾಮಾಣಿಕ ಪ್ರಯತ್ನದಿಂದ ಶೈಕ್ಷಣಿಕವಾಗಿ ಗುರಿ ತಲುಪಲು ಸಾಧ್ಯವಾಗುತ್ತದೆ. ಇತ್ತೀಚೆಗೆ ಸುಣ್ಣಕಲ್ಲಬಿದರಿ ಗ್ರಾಮವು ಶಿಕ್ಷಣ ಕೇಂದ್ರವಾಗುವತ್ತ ಸಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನಷ್ಟು ಶೈಕ್ಷಣಿಕ ಸಂಸ್ಥೆಗಳು ಆರಂಭವಾಗುವ ಮೂಲಕ ಕಲಿಕೆಯ ಗುಣಮಟ್ಟದಲ್ಲಿ ಸುಧಾರಣೆ ಕಂಡು ಬರಲಿದೆ ಎಂದರು.ಈ ಸಂದರ್ಭದಲ್ಲಿ ಕೆಸಿಸಿ ಬ್ಯಾಂಕ ನಿರ್ದೇಶಕ ಶಿವಾನಂದ ಸಂಗಾಪುರ, ಮಂಜಣ್ಣ ಲಿಂಗದಹಳ್ಳಿ, ಶಿವಾನಂದ ವಗ್ಗರಣಿ, ಬಸಣ್ಣ ನಾರಜ್ಜಿ, ಪ್ರಾಚಾರ್ಯ ನಾಗರಾಜ, ಗುತ್ತಿಗೆದಾರ ಖಾದರ ಕನವಳ್ಳಿ ಇದ್ದರು