ಕಾರವಾರ

ಎರಡನೇ ಅಲೆ ಹಳ್ಳಿಗಳಲ್ಲಿ ರಣ ಕೇಕೆ

ಎರಡನೇ ಅಲೆ ಹಳ್ಳಿಗಳಲ್ಲಿ ರಣ ಕೇಕೆ

ಸುಧೀರ ನಾಯರ್

ಬನವಾಸಿ:  ಔಷಧಿ ಅಂಗಡಿಗಳು, ಆರ್ಎಮ್ಪಿ ಆಸ್ಪತ್ರೆಗಳ ಮುಂದೆ ಸರತಿಯಲ್ಲಿ ನಿಂತಿರುವ ದೃಶ್ಯ.. ಇದು ಎಲ್ಲ ಹಳ್ಳಿಗಳಲ್ಲಿ ಕಂಡು ಬರುವ ಇತ್ತಿಚಿನ ನೈಜ ಚಿತ್ರಗಳು ಕೊರೊನಾ ಒಂದನೇ ಅಲೆಯಲ್ಲಿ ಜಾಗೃತಗೊಂಡಿದ್ದ ನಮ್ಮ ಹಳ್ಳಿಯ ಜನರು, ಈಗ ಎರಡನೇ ಅಲೆಯಲ್ಲಿ ಸ್ವಲ್ಪ ಯಾಮಾರಿದಂತೆ ಕಾಣಿಸುತ್ತೆ... ಹೌದು ಕೋವಿಡ್ ಎರಡನೇ ಅಲೆ ಕೆಲ ಹಳ್ಳಿಗಳಲ್ಲಿ ರಣ ಕೇಕೆ ಹಾಕುತ್ತಿದೆ. ದಿನ ಕಳೆದಂತೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಈ ತುತರ್ು ಪರಿಸ್ಥಿಯಲ್ಲಿ ಜನರು ತಮ್ಮವರನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಹಳ್ಳಿಗಳಲ್ಲಿ ಆಪತ್ಭಾಂಧವರಾಗಿರುವ ಸ್ಥಳೀಯ ವೈದ್ಯರು ದಿನಾಲು ಕನಿಷ್ಠ 100 ರಿಂದ ಗರಿಷ್ಠ 200ಕ್ಕಿಂತ ಹೆಚ್ಚು ರೋಗಿಗಳನ್ನು ನೋಡುತ್ತಿದ್ದಾರೆ. ಸಣ್ಣ ಸಣ್ಣ ಗ್ರಾಮಗಳಲ್ಲಿ ವೈದ್ಯಕೀಯ ಉಪಕರಣಗಳಿಗೆ, ಔಷಧಿಗಳಿಗೆ, ಔಷಧಿ ಅಂಗಡಿಗಳ ಮುಂದೆ ಗಂಟೆಗಳ ಕಾಲ ಸರತಿಯಲ್ಲಿ ನಿಂತುಕೊಳ್ಳುವ ಪರಿಸ್ಥಿತಿ ನಿಮರ್ಾಣವಾಗಿದೆ. 

ಕೊರೋನಾ ಸೋಂಕು ಹೆಚ್ಚಳವಾಗುತ್ತಿದ್ದು ಗ್ರಾಮೀಣ ಭಾಗದ ಜನರಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದಕ್ಕೆ ಪ್ರಮುಖ ಕಾರಣ ಹಳ್ಳಿಗಳಲ್ಲಿ ಸರಿಯಾದ ಮಾಸ್ಕ್ ಧಾರಣೆ ಹಾಗೂ ಸಾಮಾಜಿಕ ಅಚಿತರದ ಬಗ್ಗೆ ಜಾಗೃತಿ ಇಲ್ಲವಾಗಿರುವುದು ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಗ್ರಾಮೀಣ ಭಾಗದಲ್ಲಿ ಎಮ್ಬಿಬಿಎಸ್ ಕಲಿಕೆಯ ತಜ್ಞ ವೈದ್ಯರು ಸಿಗದೇ ಜನರು ಬಿಎಎಮ್ಎಸ್ ಆರ್ಎಮ್ಪಿ ವೈದ್ಯರ ಮೊರೆ ಹೋಗುತ್ತಿದ್ದು ಈ ವೈದ್ಯರುಗಳು ಸಹ ಕೋವಿಡ್ಗೆ ಸಂಬಂಧಿಸಿದ  ಔಷದೋಪಾಚಾರಗಳನ್ನು ಬರೆದುಕೊಡುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದ ಜನರು ಕೋವಿಡಗೆ ಭಯ ಪಡದೇ ಚಿಕ್ಕ ಡಾಕ್ಟರುಗಳ ಮೊರೆ ಹೋಗುತ್ತಿರುವುದರಿಂದ ಹಳ್ಳಿಗಳಲ್ಲಿ ಹೆಚ್ಚು ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಜನರಿಗೆ ಸರಿಯಾದ ತಿಳುವಳಿಕೆ ಇಲ್ಲದ ಕಾರಣ ಗ್ರಾಮೀಣ ಭಾಗಗಳಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು ಆತಂಕದ ವಾತಾವರಣ ನಿಮರ್ಾಣವಾಗಿದೆ. 

ಗ್ರಾಮೀಣ ಪ್ರದೇಶದ ಕೋವಿಡ್ ಸೋಂಕಿತರ ಮನೆಗೆ ಆರೋಗ್ಯ ವಿಚಾರಿಸಲು ಜನ ಆಗಮಿಸುವುದು ಹಾಗೂ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಮನೆಯಲ್ಲಿ ಅಸುನಿಗಿದರೇ ಸೋಂಕಿತರ ಅಂತ್ಯಸಂಸ್ಕಾರದಲ್ಲಿ ಹೆಚ್ಚೆಚ್ಚು ಜನರು ಪಾಲ್ಗೊಳ್ಳುತ್ತಿರುವದರಿಂದಲೂ ಸೋಂಕಿನ ಪ್ರಮಾಣ ಹೆಚ್ಚಾಗಲೂ ಕಾರಣವಾಗಿದೆ. ತಾಲೂಕಾಡಳಿತದಿಂದ ಜನರಿಗೆ ಕೊರೋನಾ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಪ್ರಜ್ಞಾವಂತ ನಾಗರಿಕರ ಅನಿಸಿಕೆಯಾಗಿದೆ.ನಗರ ಪ್ರದೇಶಗಳಲ್ಲಿ ಮಾತ್ರ ಅರ್ಭಟಿಸುತ್ತಿದ್ದ ಕೊರೊನಾ ಮಹಾಮಾರಿ ಈಗ ಹಳ್ಳಿ ಹಳ್ಳಿಗಳಲ್ಲಿಯೂ ತನ್ನ ರಣಕೇಕೆ ಆರಂಭಿಸಿದೆ. ನಾವೆಲ್ಲರೂ ಜಾಗರೂಕರಾಗಿ ರೋಗದ ವಿರುದ್ದ ಹೋರಾಡಬೇಕಾಗಿದೆ. ಅಧಿಕಾರಿಗಳು ಮತ್ತು ಸಾರ್ವಜನಿಕರು ಹಳ್ಳಿ ಹಳ್ಳಿಗಳಲ್ಲಿ ಕೊರೊನಾ ನಿಯಾಮಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕಾಗಿದೆ. 


ಸುದ್ದಿ ಓದಿ