ರಾಣೆಬೆನ್ನೂರ

ನಿಟಪಳ್ಳಿಯಲ್ಲಿ ವಿಜ್ರಂಬಿಸಿದ ಸಾಂಸ್ಕೃತಿಕ ವೈಭವ ಕಲೆ, ಕಲಾವಿದರು ಈ ದೇಶದ ಸಂಸ್ಕೃತಿಯ ಹರಿಕಾರರು: ಪಾಟೀಲ

ನಿಟಪಳ್ಳಿಯಲ್ಲಿ ವಿಜ್ರಂಬಿಸಿದ ಸಾಂಸ್ಕೃತಿಕ ವೈಭವ ಕಲೆ, ಕಲಾವಿದರು ಈ ದೇಶದ ಸಂಸ್ಕೃತಿಯ ಹರಿಕಾರರು:  ಪಾಟೀಲ

ರಾಣೇಬೆನ್ನೂರು 06:  ಕಲೆ ಮತ್ತು ಕಲಾವಿದರು ಈ ದೇಶದ ಸಂಸ್ಕೃತಿ ಹರಿಕಾರರು, ಪಾಚ್ಚಿ ಮಾತ್ಯ  ಸಂಸ್ಕೃತಿಯ ಭರಾಟೆಯಲ್ಲಿ ನಮ್ಮ ನೈಜ ಕಲೆ ಮತ್ತು ಕಲಾವಿದರು ನೇಪತ್ಯಕ್ಕೆ ಸರಿಯುವಂದತಾಗಿದೆ. ಎಂದು ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ ಸಂತೋಷ್ ಕುಮಾರ್ ಪಾಟೀಲ್ ವಿಷಾದಿಸಿದರು.

 ತಾಲೂಕಿನ ನಿಟಪಳ್ಳಿ ಗ್ರಾಮದಲ್ಲಿ ನಡೆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ಮತ್ತು  ಅನುಪಲ್ಲವಿ ಸಂಗೀತ ಕಲಾ ಸಂಸ್ಥೆ ಆಯೋಜಿಸಿದ್ದ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಇತಿಹಾಸದಲ್ಲಿ ನಮ್ಮ ಪೂರ್ವಜರು ಕಲಾವಿಧಾರಿಗೆ ರಾಜಶ್ರೀಯ ನೀಡುವುದರ ಮೂಲಕ ಕಲೆಯನ್ನು ಪ್ರೋತ್ಸಾಹಿಸಿ, ಗ್ರಾಮೀಣ ಸಂಸ್ಕೃತಿಯ ಕಲಾ ಪರಂಪರೆಯನ್ನು ವಿಜೃಂಭಿಸುತ್ತಿದ್ದರು  ಆದರೆ ಕಾಲಘಟ್ಟದಲ್ಲಿ ಇವೆಲ್ಲವೂ ನಶಿಸುತ್ತಿರುವುದು ಈ ದೇಶದ ಸಂಸ್ಕೃತಿಯು ನೇಪತ್ಯಕ್ಕೆ ಸರಿಯುವಂತಾಗಿದೆ ಎಂದು ವಿಷಾದಿಸಿದರು. ಲಿಂಗದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರಗೌಡ ಎಂ. ಎಡಚಿ ಅವರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶೀಲಾ ಶಿವಪ್ಪ ಹರಿಹರ, ಮಾಜಿ ಅಧ್ಯಕ್ಷ ಸಿದ್ದನಗೌಡ ಉಜ್ಜನಗೌಡ್ರು,ಸದಸ್ಯ ಗಿರಿಜಮ್ಮ ಕಡೆಮನಿ, ದೀಪಾ ಆನ್ವೇರಿ, ಚಂದ್ರಪ್ಪ ಬಾಕರ್ಿ, ಕೊಟ್ರೇಶಪ್ಪ ಎಮ್ಮೆರ, ಕಲಾವಿದ ಗಣೇಶ್ ಗುಡುಗುಡಿ  ಸೇರಿದಂತೆ ಗ್ರಾಮದ ಮುಖಂಡರು, ಯುವಕರು ಪಾಲ್ಗೊಂಡಿದ್ದರು. ನಂತರ ನಡೆಡೆ ಗುರುರಾಜ ಕುಸುಗೂರ ತಂಡದವರ ಸುಗಮ ಸಂಗೀತ, ಬಸವರಾಜ ಸಾವ ಕ್ಕನವರ್ ಸಾಕ್ಷೊಫೋನ್, ಮತ್ತು ಜನನಿ ಕಲಾ ಸಂಸ್ಥೆಯ ಜಾನಪದ ಗೀತೆಗಳು ಗ್ರಾಮೀಣ ನಾಗರಿಕರ ಗಮನ ಸೆಳೆದವು 

ಸುದ್ದಿ ಓದಿ