ಬ್ಯಾಡ್ಗಿ

ರೈತರ ಜಮೀನು ಕಾರಿಡಾರ ಯೋಜನೆಯಿಂದ ಕೈಬಿಡಲಾಗಿದೆ: ಶಾಸಕ ಬಳ್ಳಾರಿ

ರೈತರ ಜಮೀನು ಕಾರಿಡಾರ ಯೋಜನೆಯಿಂದ ಕೈಬಿಡಲಾಗಿದೆ:  ಶಾಸಕ ಬಳ್ಳಾರಿ

ಬ್ಯಾಡಗಿ: ನಾನೊಬ್ಬ ರೈತನ ಮಗ ರೈತರ ಮೇಲೆ ಅಪಾರ ಗೌರವ ಹೊಂದಿದ್ದೆನೆ. ಈ ಕಾರಣಕ್ಕಾಗಿ ಕಾರಿಡಾರ್ಖ್ಯ ಯೋಜನೆಗೆ ಒಳಪಡಿಸಲಾಗಿದ್ದ ರೈತರ ಭೂಮಿಯನ್ನು ಹಿಂಡೆಯುವಂಯತೆ  ಮಂತ್ರಿಗಳೊಂದಿಗೆ ಮನವಿ ಮಾಡಿಕೊಂಡಿದ್ದು, ಮುಖ್ಯ ಮಂತ್ರಿಗಳು ಮನವಿಗೆ ಒಪ್ಟೇಪಿಕೊಂಡು ಮೋಟೆಬೆನ್ನೂರ, ಅಳಲಗೇರಿ  ಹಾಗೂ ಅರಬಗೊಂಡ ಗ್ರಾಮದ 1017 ಎಕರೆ ರೈತರ ಜಮೀನು ಕಾರಿಡಾರ ಯೋಜನೆಯಿಂದ ಕೈಬಿಡಲಾಗಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಜೆ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ನಾನು ಯಾವತ್ತಿಗೂ ರೈತರೊಂದಿಗೆ ಇರುವೆ.  ಕಾರಿಡಾರ್ ಯೋಜನೆಯನ್ನು ಕೈಬಿಡಲು ಮುಖ್ಯ ಮಂತ್ರಿಗಳು ಒಪ್ಪಿದ್ದರಿಂದ ಕ್ಷೇತ್ರದ ರೈತಬಾಂದವರ ಪರವಾಗಿ ಅವರಿಗೆ ಹಾಗೂ ನನಗೆ ಸಹಕರಿಸಿದ ಎಲ್ಲ ರೈತ ಸಂಘಟನೆಗಳಿಗೆ ಕ್ರತಜ್ಞತೆ ಸಲ್ಲಿಸುತ್ತೆನೆ.ಮುಖ್ಯ ರಸ್ತೆ ಅಗಲೀಕರಣದ ಕಾರ್ಯವು ಪ್ರಾರಂಭವಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ರಸ್ತೆಯು ಅಭಿವೃದ್ಧಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ಮುಖಂಡರು ರಾಜಕಾರಣದಲ್ಲಿ  ನನಗಿಂತ  ಅನುಭವಸ್ತರಿದ್ದು,  ಅಭಿವೃದ್ಧಿ ವಿಚಾರದಲ್ಲಿ ಬಾಯಿಗೆ ಬಂದತೆ ಮಾತನಾಡುವುದನ್ನು ಕೈಬಿಡಬೇಕು. ಅವರಂತೆ ನಮಗೂ ಮಾತನಾಡಲು ಬರುತ್ತದೆ ಎಂಬುದನ್ನು ಅರಿಯಬೇಕು ಎಂದರು.ಈ ಸಂದರ್ಭದಲ್ಲಿ ವಿರೇಂದ್ರ ಶೆಟ್ಟರ, ಸುರೇಶ ಉದ್ಯೋಗಣ್ಣನವರ, ಸುರೇಶ ಯತ್ನಳ್ಳಿ, ಸುರೇಶ ಆಷಾದಿ, ವಿಷ್ಣುಕಾಂತ ಬೆನ್ನೂರ,  ಶೇಖರಗೌಡ ಗೌಡ್ರ, ವಿ.ವಿ.ಹಿರೇಮಠ, ವಿಜಯಭರತ ಬಳ್ಳಾರಿ,  ಸಹಾಯಕ ಬಸವರಾಜ ಕುಲಕರ್ಣಿ ಸೇರಿದಂತೆ ಇನ್ನಿತರರು ಇದ್ದರು. 

ಸುದ್ದಿ ಓದಿ