ಬ್ಯಾಡ್ಗಿ

ಬ್ಯಾಡಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ: ಬಳ್ಳಾರಿ

ಬ್ಯಾಡಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ: ಬಳ್ಳಾರಿ

ಬ್ಯಾಡಗಿ: ತಾವು ಶಾಸಕರಾಗಿ ಆಯ್ಕೆಯಾದ ನಂತರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸುಮಾರು ಎರಡು ಸಾವಿರ ಕೋಟಿಗೂ ಅಧಿಕ ಅನುದಾನವನ್ನು ತಂದು ಅಭಿವೃದ್ಧಿಯನ್ನು ಸಾಧಿಸಿರುವ ಬಗ್ಗೆ ತೃಪ್ತಿ ತಂದಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.ಲೋಕೋಪಯೋಗಿ ಇಲಾಖೆಯ ವತಿಯಿಂದ 4ಕೋಟಿರೂ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಅರಬಗೊಂಡ - ಅಳಲಗೇರಿ ಛತ್ರ ರಸ್ತೆ ಮತ್ತು 3ಕೋಟಿರೂ ವೆಚ್ಚದಲ್ಲಿ ಬ್ಯಾಡಗಿ- ಕಾಕೋಳ ಹೊನ್ನತ್ತಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿಯೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಬಿಜೆಪಿ ವರಿಷ್ಠರು ತಮಗೆ ಮತ್ತೊಮ್ಮೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರೆ ಎಲ್ಲಾ ಮತದಾರರು ಆಶೀರ್ವದಿಸುವ ಮೂಲಕ ಸತತ ಎರಡನೇ ಬಾರಿಗೆ ಶಾಸಕರಾಗಿ ಸೇವೆ ಸಲ್ಲಿಸಲು ಸಹಕಾರ ನೀಡಬೇಕೆಂದು ಕೋರಿದರು.ಮುಖಂಡರಾದ ವಿ.ವಿ.ಹಿರೇಮಠ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಬ್ಯಾಡಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಕೆರೆ ತುಂಬಿಸುವ ನೀರಾವರಿ ಯೋಜನೆ, ಜೆಜೆಎಂ ಮೂಲಕ ಕುಡಿಯುವ ನೀರಿನ ಯೋಜನೆಯ ಅನುಷ್ಠಾನ ಸೇರಿದಂತೆ ಹಲವು ಅಭಿವೃಧ್ದಿ ಕಾಮಗಾರಿಗಳನ್ನು ಕೈಗೊಳ್ಳಲು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರು ಅವಿರತವಾಗಿ ಶ್ರಮಿಸಿ ಕ್ಷೇತ್ರದ ಜನರ ಮನದಲ್ಲಿ ಮಿಂಚಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೇ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಲು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಬುಡುಪನಹಳ್ಳಿ ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಮೋಟೆಬೆನ್ನೂರ, ಸದಸ್ಯರಾದ ಶಿವಪ್ಪ ಪೋಟೆರ, ಹನುಮಂತಪ್ಪ ಓಲೇಕಾರ, ಮಹದೇವಯ್ಯ ಹಿರೇಮಠ, ಪಿಡಿಓ ಪರಶುರಾಮ ಅಗಸನಹಳ್ಳಿ, ಕಾಕೋಳ ಗ್ರಾಪಂ ಅಧ್ಯಕ್ಷ ಜಗದೀಶ ಚಪ್ಪರದ,  ಸದಸ್ಯರಾದ ನೀಲಪ್ಪ ಮೋಟೆಬೆನ್ನೂರ, ಸೇವಾಲಾಲ್ ಕುದರಿಹಾಳ, ಜಯಣ್ಣ ಶಿಡಗನಾಳ, ತಿರಕಪ್ಪ ಬುಡುಪನಹಳ್ಳಿ, ಸುರೇಶ ಉದ್ಯೋಗಣ್ಣನವರ, ಹುಚ್ಚಪ್ಪ ಮಾಳಗಿ, ಎನ್.ಬಿ.ಹೊನ್ನತ್ತಿ, ಗುತ್ತಿಗೆದಾರರಾದ ಸಂತೋಷ ಹಿರೇಮಠ, ಪಿ.ಡಿ.ಪೂಜಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸುದ್ದಿ ಓದಿ