ಚಿಕ್ಕೋಡಿ

ಇಂದು ಬಸ್ ಯಾತ್ರೆ ಮೂಲಕ ಪ್ರಜಾಧ್ವನಿ ಸಮಾವೇಶ

ಇಂದು ಬಸ್ ಯಾತ್ರೆ ಮೂಲಕ ಪ್ರಜಾಧ್ವನಿ ಸಮಾವೇಶ
ಚಿಕ್ಕೋಡಿಯಲ್ಲಿ ನಡೆಯಲಿರುವ ಪ್ರಜಾಧ್ವನಿ ಯಾತ್ರೆ ಕುರಿತು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮಾಹಿತಿ ನೀಡ

ಚಿಕ್ಕೋಡಿ: ಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಬೇಕು ಎನ್ನುವ ನಿಟ್ಟಿನಲ್ಲಿ ಬುಧವಾರ ದಿ.11 ರಂದು ಬಸ್ ಯಾತ್ರೆ ಮೂಲಕ ಪ್ರಜಾಧ್ವನಿ ಸಮಾವೇಶ ಚಿಕ್ಕೋಡಿಯಲ್ಲಿ ನಡೆಯಲಿದೆ ಎಂದು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ತಿಳಿಸಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಜ.11ರಂದು ಬೆಳಗಾವಿ ಕಾಂಗ್ರೆಸ್ ಭಾವಿ ಹತ್ತಿರ ಧ್ವಜಾರೋಹನ ನೇರವೇರಿಸಿ ಬಸ್ ಯಾತ್ರೆಗೆ ಚಾಲನೆ ನೀಡಲಾಗುತ್ತಿದೆ. ಈ ಯಾತ್ರೆಗೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವುಕುಮಾರ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಉಸ್ತುವಾರಿ ರಣಜೀತಸಿಂಗ ಸುರಜೇವಾಲ್ ಸೇರಿದಂತೆ ಎಲ್ಲ ಕೆಪಿಸಿಸಿ ಕಾರ್ಯಾಧ್ಯಕ್ಷರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಸ್ ಯಾತ್ರೆ ಮೂಲಕ ಚಿಕ್ಕೋಡಿ ನಗರದ ಆರ್.ಡಿ.ಕಾಲೇಜಿನ ಮೈಧಾನದಲ್ಲಿ ನಡೆಯುವ ಪ್ರಜಾಧ್ವನಿ ಯಾತ್ರೆ ಸಮಾವೇಶ ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಚಿಕ್ಕೋಡಿ ಲೋಕಸಭೆ ಮತಕ್ಷೇತ್ರದ ಎಂಟು ವಿಧಾನಸಭೆ ಕ್ಷೇತ್ರದ ಸುಮಾರು 50 ಸಾವಿರ ಜನ ಸೇರಲಿದ್ದಾರೆ ಎಂದು ತಿಳಿಸಿದರು.

ಈಗ ನಡೆಯುವ ಬಸ್ ಯಾತ್ರೆಯು ಆರಂಭದಲ್ಲಿ ರಾಜ್ಯದ 28 ಲೋಕಸಭೆ ಕ್ಷೇತ್ರದಲ್ಲಿ ನಡೆಯಲಿದ್ದು, ನಂತರ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಯಾತ್ರೆ ನಡೆಯಲಿದೆ. ಡಿ.ಕೆ.ಶಿವುಕುಮಾರ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಅದ್ದೂರಿಯಾಗಿ ಪ್ರಜಾಧ್ವನಿ ಯಾತ್ರೆ ನಡೆಯಲಿದೆ. ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮೀಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮನವಿ ಮಾಡಿದರು.

ಶಾಸಕ ಗಣೇಶ ಹುಕ್ಕೇರಿ, ಮಾಜಿ ಶಾಸಕರಾದ ವೀರಕುಮಾರ ಪಾಟೀಲ, ಎ.ಬಿ.ಪಾಟೀಲ, ಕಾಕಾಸಾಹೇಬ ಪಾಟೀಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ  ಮಹಾವೀರ ಮೋಹಿತೆ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಎಚ್.ಎಸ್.ನಸಲಾಪೂರೆ, ಗಜಾನನ ಮಂಗಸೂಳೆ, ಕೆಪಿಸಿಸಿ ಸದಸ್ಯ ರಾಜಕುಮಾರ ಕೊಟಗಿ, ಮಹೇಂದ್ರ ತಮ್ಮನ್ನವರ, ಶಂಕರಗೌಡ ಪಾಟೀಲ ಮುಂತಾದವರು ಇದ್ದರು. 



ಸುದ್ದಿ ಓದಿ