ಜಮಖಂಡಿ

ವೈದ್ಯಕೀಯ ಮಹಾವಿದ್ಯಾಲಯಕ್ಕೆ ಅಣ್ಣಪ್ಪ ದೇಹದಾನ

ವೈದ್ಯಕೀಯ ಮಹಾವಿದ್ಯಾಲಯಕ್ಕೆ ಅಣ್ಣಪ್ಪ ದೇಹದಾನ

ಲೋಕದರ್ಶನ ವರದಿ,

ಜಮಖಂಡಿ  28: ಹುಬ್ಬಳ್ಳಿಯ ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮೀಜಿಗಳು ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದೇಹದಾನವನ್ನು ನಗರದ ನಿವಾಸಿ ಅಣ್ಣಪ್ಪ ಮಲ್ಲೇಶಪ್ಪ ಖಪಲಿ (88) ಇತ್ತೀಚೆಗೆ ನಿಧನರಾಗಿದ್ದರು.

ಮೃತರ ಅಂತಿಮ ಇಚ್ಚೆಯಂತೆ ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ  ವತಿಯಿಂದ ಹುಬ್ಬಳ್ಳಿಯ ಗಬ್ಬೂರ ಕ್ರಾಸ್ನ ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮೀಜಿಗಳು ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ವಿದ್ಯಾಥರ್ಿಗಳಿಗೆ ವಿದ್ಯಾರ್ಜನೆಗೆ ದೇಹವನ್ನು ದಾನವಾಗಿ ನೀಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ದೇಹದಾನ ಮಾಡಿದ ಖಪಲಿ ಕುಟುಂಬದವರಿಗೆ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಜಿ. ಹಿರೇಮಠ, ಡಾ.ವಿ.ಡಿ.ಪಾಟೀಲ, ಡಾ. ರಾಮಣ್ಣವರ ಚಾರಿಟಬಲ್ ಟ್ರಸ್ಟ್ ಕಾರ್ಯದಶರ್ಿ ಡಾ. ಮಹಾಂತೇಶ ರಾಮಣ್ಣವರ ಕೃತಜ್ಞತೆ ಸಲ್ಲಿಸಿದ್ದಾರೆ. ಮೃತರಿಗೆ ಓರ್ವ ಪುತ್ರ ವಕೀಲ ಬಸವರಾಜ ಖಪಲಿ, ಇಬ್ಬರು ಪುತ್ರಿಯರು  ಹಾಗೂ ಅಪಾರ ಬಂಧು ಬಳಗವಿದೆ. ಅಂಗಾಂಗ ದಾನ ಹಾಗೂ ದೇಹದಾನದ ಹೆಚ್ಚಿನ ಮಾಹಿತಿಗೆ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ 9242496497 ಮೋಬೈಲ್ಗೆ ಸಂಪಕರ್ಿಸಲು ಟ್ರಸ್ಟ್ ಪ್ರಕಟಣೆಯಲ್ಲಿ ಕೋರಿಕೊಂಡಿದೆ. 



ಸುದ್ದಿ ಓದಿ