ಬಸವರಾಜ ಹೊರಟ್ಟಿಯವರಿಗೆ ಅಭಿನಂದನೆ
ಶಿಗ್ಗಾವಿ : ಕರ್ನಾಟಕ ವಿಧಾನ ಪರಿಷತ್ಗೆ ನೂತನ ಸಭಾಪತಿಯಾಗಿ ಆಯ್ಕೆಯಾದ ಬಸವರಾಜ ಹೊರಟ್ಟಿ ಅವರನ್ನು ದಾಸನೂರ ಸಮೂಹ ಸಂಸ್ಥೆ ಹಾಗೂ ಉತ್ಸವ ರಾಕ್ ಗಾರ್ಡನ್ ಸಮಿತಿ ವತಿಯಿಂದ ತಾಲೂಕಿನ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ನಲ್ಲಿ ಶುಕ್ರವಾರ ಸನ್ಮಾನಿಸಿ ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿ ಅವರು, ಉತ್ಸವ ರಾಕ್ ಗಾರ್ಡನ್ ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ-ಶೈಕ್ಷಣಿಕ ಪ್ರವಾಸಿ ಕೇಂದ್ರವಾಗಿದೆ. ಇದರ ಕೀರ್ತಿ ಮತ್ತಷ್ಟು ಹೆಚ್ಚಲಿ ಎಂದು ಶುಭ ಹಾರೈಸಿದರು. ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಕಾಶ ದಾಸನೂರ, ನವಲಗುಂದ ಮಾಜಿ ಶಾಸಕ ಎನ್.ಎಚ್.ಕೊನರೆಡ್ಡಿ, ವಸಂತ ಹೊರಟ್ಟಿ, ಶಿಗ್ಗಾವಿ ಎಪಿಎಂಸಿ ಮಾಜಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ, ಗಾರ್ಡನ್ನ ವ್ಯವಸ್ಥಾಪಕ ಬಸವರಾಜ ಮಡಿವಾಳರ, ಅಶೋಕ ಬಾಳಿ, ಆನಂದಗೌಡ ಪಾಟೀಲ್ ಮತ್ತಿತರರು ಇದ್ದರು.