ಬ್ಯಾಡ್ಗಿ

ಬಿಜೆಪಿ ಪಕ್ಷದಿಂದ ನಾನು ಕೂಡಾ ಪ್ರಭಲ ಆಕಾಂಕ್ಷಿ: ಶೆಟ್ಟರ್

ಬಿಜೆಪಿ ಪಕ್ಷದಿಂದ  ನಾನು ಕೂಡಾ ಪ್ರಭಲ ಆಕಾಂಕ್ಷಿ: ಶೆಟ್ಟರ್

ಬ್ಯಾಡಗಿ: ಬ್ಯಾಡಗಿ ವಿಧಾನಸಭಾ ಮತಕ್ಷೇತ್ರಕ್ಕೆ ಬಿಜೆಪಿ ಪಕ್ಷದ ವತಿಯಿಂದ ನಾನು ಕೂಡಾ ಪ್ರಭಲ ಆಕಾಂಕ್ಷಿಯಾಗಿದ್ದೇನೆಂದು ಪುರಸಭಾ ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ್ ಹೇಳಿದರು.

ಅವರು ಶುಕ್ರವಾರ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ 30 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದು, ತಾಲ್ಲೂಕಿನಲ್ಲಿ ಬಿಜೆಪಿ ಪಕ್ಷವನ್ನು ತಳ ಮಟ್ಟದಿಂದ ಕಟ್ಟಲು ಶ್ರಮಿಸಿದ್ದೇನೆ. ಈ ಹಿಂದೆ ಹಲವಾರು ಬಾರಿ ಸ್ಥಳೀಯ ವಿಧಾನಸಭಾ ಮತಕ್ಷೇತ್ರದಿಂದ ಸ್ಪರ್ಧಿಸಿದಾಗ ಪಕ್ಷದ ಹಿರಿಯರು ನನಗೆ ಹಲವಾರು ಬುದ್ಧಿಮಾತುಗಳನ್ನು ಹೇಳಿ ಹಿಂಪಡೆಯುವಂತೆ ಒತ್ತಾಯಿಸಿ ತೆರವುಗೊಳಿಸಿದ್ದಾರೆಂದು ಆರೋಪಿಸಿದರು. ನಾನು ಸುಮಾರು 25 ವರ್ಷಗಳಿಂದ ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಒಪ್ಪಿ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಅದರೊಂದಿಗೆ ಪುರಸಭಾ ಅಧ್ಯಕ್ಷನಾಗಿ, 18 ವರ್ಷಗಳ ಕಾಲ ತಾಲೂಕಾ ಬಿಜೆಪಿ ಘಟಕದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಜಿಲ್ಲೆಯ ಬಿಜೆಪಿಯ ವಿವಿಧ ಘಟಕದ ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದು, ಸಾಮಾಜಿಕವಾಗಿ ಅನುಭವ ಹೊಂದಿರುವ ಹಿನ್ನೆಲೆಯಲ್ಲಿ ನನಗೆ ಪಕ್ಷದ ಹೈಕಮಾಂಡ್ ಈ ಬಾರಿ ಬಿಜೆಪಿ ಪಕ್ಷದ ಟಿಕೆಟ್ ಕೊಡಲೇಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಪಕ್ಷದ ಧುರೀಣರಾದ ಮೃತ್ಯುಂಜಯ ಕಡೇಮನಿ, ಮಂಜಣ್ಣ ತಳಮನಿ, ವೀರಣ್ಣ ಸಂಕಣ್ಣನವರ ಇದ್ದರು.

ಸುದ್ದಿ ಓದಿ