ಯರಗಟ್ಟಿ

ಸಂಕಷ್ಟದಲ್ಲಿ ರಂಗಭೂಮಿ ಕಲಾವಿದರ ಬದುಕು

ಸಂಕಷ್ಟದಲ್ಲಿ ರಂಗಭೂಮಿ ಕಲಾವಿದರ ಬದುಕು

ಲೋಕದರ್ಶನ ವರದಿ

ಯರಗಟ್ಟಿ 07:  ನಾಟಕ ಒಂದು ಜೀವಂತ ಕಲೆ, ಅದು ಸದಭಿರುಚಿಯ ಸಂಸ್ಕೃತ ಕಲೆಯಾಗಿರುವದರಿಂದ ಅದನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವುದು ಅನಿವಾರ್ಯ ಎಂದು ಸವದತ್ತಿ ಕಾಂಗ್ರೇಸ್ ಮುಖಂಡ ಪಂಚನಗೌಡರ ದ್ಯಾಮನಗೌಡರ ಹೇಳಿದರು.

ಅವರು ಸಮೀಪದ ಮುಗಳಿಹಾಳ ಗ್ರಾಮದಲ್ಲಿ  ಬಸವೇಶ್ವರ ಜಾತ್ರೆ ಪ್ರಯುಕ್ತ ಸಿಡಿದೆದ್ದ ಶಿವಶಕ್ತಿ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಭಾಗದ ಜನರ ಬದುಕು ಹಾಗೂ ಸಂಸ್ಕೃತಿಯನ್ನು ರಂಗಕಲೆಯ ಮೂಲಕ ಸಾರ್ವಜನಿಕರಿಗೆ ತೋರಿಸುತ್ತಿರುವ ಕಲಾವಿದರ ಬದುಕು ಇಂದು ಸಂಕಷ್ಟಕ್ಕೆ ಸಿಲುಕಿದ್ದು ಪ್ರತಿಭಾವಂತ ಕಲಾವಿದರನ್ನು ಪ್ರೋತ್ಸಾಹಿಸಿ ರಂಗ ಕಲೆಯನ್ನು ಉಳಿಸಿ ಬೆಳೆಸಬೇಕಾದ ಅವಶ್ಯಕತೆ ಇದೆ. ನಾಟಕ ಮನುಷ್ಯನಾಗಿ ಬದುಕಬೇಕೆಂದು ತೋರಿಸುತ್ತದೆ ಎಂದರು.

ಬಂಗಾರೆಪ್ಪ ಹರಳಿ, ಗೋವಿಂದಪ್ಪ ಮುರಗಟ್ಟಿ, ಶಂಕರ ಇಟ್ನಾಳ, ರಾಮಣ್ಣ ದಳವಾಯಿ, ಗೋಪಾಲಗೌಡ ಗಂಗರೆಡ್ಡಿ, ವಿಠ್ಠಲ ದಳವಾಯಿ, ಲಕ್ಷ್ಮಣ ಪಾಟೀಲ, ಬಸವರಾಜ ದಳವಾಯಿ, ಗ್ರಾಮದ ಹಿರಿಯರು, ಮುಖಂಡರು, ಜಾತ್ರಾ ಕಮೀಟಿಯ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಸುದ್ದಿ ಓದಿ