ಉಪಾಧ್ಯಕ್ಷ ತಾತ್ಯಾಸಾಹೇಬ್ ಕಾಟೆ ಸನ್ಮಾನ
ಮಾಂಜರಿ30: ರೈತರಿಗೆ ಕಾರ್ಖಾನೆಯಿಂದ ಸಿಗುವ ಸವಲತ್ತುಗಳನ್ನು ರೈತರಿಗೆ ಮುಟ್ಟುವಂತ ವ್ಯವಸ್ಥೆ ಮಾಡುತ್ತೇನೆ ಎಂದು ನೂತನ ಚಿದಾನಂದ ಬಸವಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ತಾತ್ಯಾಸಾಹೇಬ್ ಕಾಟೆ ಹೇಳಿದರು.
ಅವರು ಇಂದು ಸಮೀಪದ ಭಾವನ ಸೌದತ್ತಿ ಗ್ರಾಮದಲ್ಲಿ ಚಿದಾನಂದ ಬಸವಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷರಾಗಿ ಅಯ್ಕೆಯಾದ ಹಿನ್ನೆಲೆ ಇಂದು ವಿವಿಧ ಸಂಘಟನೆಗಳಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು.
ರೈತರು ಆಧುನಿಕ ಪದ್ಧತಿಯಿಂದ ಕಬ್ಬು ನಾಟಿಯನ್ನು ಮಾಡಬೇಕು. ಆದರಿಂದ ರೈತರ ಇಳುವರಿ ಹೆಚ್ಚಾಗುತ್ತದೆ, ರೈತರ ಆದಾಯ ಕೂಡ ಹೆಚ್ಚಿಸುತ್ತದೆ. ಎಲ್ಲ ರೈತರು ಕಬ್ಬಿನ ಬೆಳೆಯ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಬೇಕು. ಕಾರ್ಖಾನೆಯಿಂದ ಏನು ಸೌಲಭ್ಯಗಳು ಇವೆ ಅವು ರೈತರಿಗೆ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯತ್ ಸದಸ್ಯ ಅಜಿತ್ ಖೆಮಲಾಪುರೆ, ಅನೀಲ ಹಂಜೆಜ, ಬಾಳಸಾಹೇಬ್ ಚೌಗುಲೆ, ಪಾಂಡುರಂಗ ದೇಸಾಯಿ, ರಾಹುಸಾಹೇಬ್ ದೇಸಾಯಿ, ಮದನ ಜಾಧವ, ಬಾಳಾಸಾಹೇಬ ದೇಸಾಯಿ, ದಾದಾಸಾಹೇಬ ಜಾಧವ, ಕುಮಾರ ಮಾನೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿದ್ದರು.