ಅಂಬೇಡ್ಕರ ಪುತ್ಥಳಿ ನಿರ್ಮಾಣಕ್ಕೆ ಶೀಘ್ರ ಚಾಲನೆಗೆ ಮನವಿ
ಶಿಗ್ಗಾವಿ: ಪಟ್ಟಣದ ಹಳೆ ತಹಶೀಲ್ದಾರ ಕಚೇರಿ ಆವರಣದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪನೆಗೆ ಜಿಲ್ಲಾಧಿಕಾರಿಗಳು ನಿಗದಿಪಡಿಸಿದ ಸ್ಥಳದಲ್ಲಿ ಎಪ್ರೀಲ್ 14 ರಂದು ನಡೆಯುವ ಅಂಬೇಡ್ಕರ ಜಯಂತಿಯ ಒಳಗಾಗಿ ಆದಷ್ಟು ಬೇಗ ಪುತ್ಥಳಿ ಅನಾವರಣ ಮಾಡಬೇಕು ಎಂದು ತಾಲೂಕಿನ ವಿವಿಧ ದಲಿತ ಸಂಘಟನೆಗಳು ಪಟ್ಟಣದ ಪೊಸ್ಟ್ ಆಪೀಸ್ ಸರ್ಕಲ್ನಿಂದ ಪುರಸಭೆ ಕಾರ್ಯಾಲಯದವರೆಗೆ ಪಾದಯಾತ್ರೆ ನಡೆಸಿ ಪ್ರಭಾರಿ ತಹಶೀಲ್ದಾರ ಎಸ್.ಬಿ.ಹೊಂಕಣದ ಹಾಗೂ ಪುರಸಭೆ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಮತ್ತು ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಪಟ್ಟಣದ ಪೊಸ್ಟ್ ಆಪೀಸ್ ಸರ್ಕಲ್ನಿಂದ ಪುರಸಭೆ ಕಾರ್ಯಾಲಯದವರೆಗೆ ಪಾದಯಾತ್ರೆ ನಡೆಸಿದರು ಮನವಿಯಲ್ಲಿ ಹಾವೇರಿ ಜಿಲ್ಲಾಧಿಕಾರಿಗಳು ಫೆ.4 ರಂದು ಡಾ: ಬಿ.ಆರ್.ಅಂಬೇಡ್ಕರ ಅವರ ಪುತ್ಥಳಿಯನ್ನು ಪ್ರತಿಷ್ಠಾಪಿಸಲು ಸ್ಥಳ ನಿಗದಿಗೊಳಿಸಿ ಆದೇಶ ಮಾಡಿರುತ್ತಾರೆ. ಸದರಿ ಆದೇಶದ ಪ್ರಕಾರ ಅಂಬೇಡ್ಕರ ಅವರ ಮೂರ್ತಿಯನ್ನು ಕಚೇರಿ ಓಣಿಯಲ್ಲಿರುವ ಹಳೆ ತಹಶೀಲ್ದಾರ ಕಚೇರಿ ಆವರಣದಲ್ಲಿ ನಿರ್ಮಾಣಗೊಂಡಿರುವ ಕಚೇರಿಗಳ ಸಂಕೀರ್ಣಗಳ ಆವರಣದಲ್ಲಿ ಪ್ರತಿಷ್ಠಾಪನೆಗೊಳ್ಳಬೇಕೆಂದು ಆದೇಶ ಮಾಡಿದೆ. ಜಿಲ್ಲಾಧಿಕಾರಿಗಳು ಸೂಚಿಸಿದ ಸ್ಥಳದಲ್ಲಿ ಭೂಮಿ ಪೂಜೆ ನೆರವೇರಿಸಿ ಎಪ್ರೀಲ್ 14 ರಂದು ನಡೆಯುವ ಅಂಬೇಡ್ಕರ ಜಯಂತಿಯ ಒಳಗಾಗಿ ಆದಷ್ಟು ಬೇಗ ಪುತ್ಥಳಿ ಅನಾವರಣ ಮಾಡಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಮಾಜಿ ಜಿ ಪಂ ಅಧ್ಯಕ್ಷ ಡಾ. ಮಲ್ಲೇಶಪ್ಪ ಹರಿಜನ, ಎ.ಪಿ.ಎಂ.ಸಿ ಅಧ್ಯಕ್ಷ ಹರ್ಜಪ್ಪ ಲಮಾಣಿ ಪುರಸಭೆ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ರಾಜ್ಯ ದಲಿತ ಮುಖಂಡ ಡಿ.ಎಸ್.ಮಾಳಗಿ, ಡಿ.ಎಸ್.ಎಸ್. ತಾಲೂಕಾ ಅಧ್ಯಕ್ಷ ಹನಮಂತಪ್ಪ ಮಾದರ, ಕರಿಯಪ್ಪ ಕಟ್ಟಿಮನಿ, ಬಸವರಾಜ ಕಟ್ಟಿಮನಿ, ಅಶೋಕ ಕಾಳೆ, ಮಲ್ಲೇಶಪ್ಪ ದೊಡ್ಡಮನಿ, ನಾಗರಾಜ ಹಾವೇರಿ, ಫಕ್ಕಿರೇಶ ಶಿಗ್ಗಾವಿ, ಬೀಮಣ್ಣ ಹೊಟ್ಟುರ, ಸಂತೋಷ ದೊಡ್ಡಮನಿ, ಮಂಜುನಾಥ ಇಂಗಳಗಿ, ಸುರೇಶ ಹರಿಜನ, ಯಲ್ಲಪ್ಪ ಹರಿಜನ, ಮಂಜುನಾಥ ಕಂಕಣವಾಡ, ನೀಲಮ್ಮ ಕಾಲವಾಡ, ಷಣ್ಮುಖ ಮಾದರ, ನಿಂಗಪ್ಪ ಹರಿಜನ, ಅರ್ಜುನಪ್ಪ ಸಂದಿಮನಿ, ಬಸವರಾಜ ಹಳೆ ಬಂಕಾಪೂರ, ಮನೋಜ ಕಟ್ಟಿಮನಿ, ವಿರೂಪಾಕ್ಷಪ್ಪ ಹುಲಸೋಗಿ, ಪ್ರವೀಣ ಕಟ್ಟಿಮನಿ, ನೀಲಪ್ಪ ಅತ್ತಿಗೇರಿ, ಗಂಗಾಧರ ಅಂದಲಗಿ, ಯಲ್ಲಪ್ಪ ಅಂದಲಗಿ, ಮಂಜುನಾಥ ಭಜಂತ್ರಿ, ಬಸಪ್ಪ ನಿಡಗುಂದಿ, ಸಿದ್ದಪ್ಪ ಮಣಕಟ್ಟಿ, ನೀಪ್ಪ ಬನ್ನೂರ, ಬೀಮಪ್ಪ ಗೋಟಗೋಡಿ, ಪ್ರಮೋದ ಚಲವಾದಿ, ಶರೀಫ ಮಾಕಪ್ಪನವರ, ಎಸ್.ಎಫ್,ಹಾಗಲೂರ, ಶೇಖಪ್ಪ ಮಣಕಟ್ಟಿ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.