ಟಿಪ್ಪರ ನಿರ್ಲಕ್ಷ್ಯದಿಂದ ಅಪಘಾತ: ಆರೋಪ
ಲೋಕದರ್ಶನ ವರದಿ
ಬ್ಯಾಡಗಿ 06: ಪಟ್ಟಣದ ಮುಖ್ಯ ರಸ್ತೆಯಲ್ಲಿ ಶನಿವಾರ ರಾತ್ರಿ ಟಿಪ್ಪರೊಂದು ಮೆಣಸಿನಕಾಯಿ ವರ್ತಕರ ಕಾರಿಗೆ ಡಿಕ್ಕಿಯಾಗಿ, ಕಾರನ್ನು ಟಿಪ್ಪರ ವಾಹನ ಸ್ವಲ್ಪ ದೂರ ಎಳೆದುಕೊಂಡ ಹೋದ ಘಟನೆ ಹಿನ್ನಲೆಯಲ್ಲಿ ಸಾರ್ವಜನಿಕರು ಮುಕ್ಯ ರಸ್ತೆಯನ್ನು ಎರಡು ತಾಸು ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದ ಘಟನೆ ನಡೆಯಿತು. ಟಿಪ್ಪರ ನಿರ್ಲಕ್ಯದಿಂದ ಬಹಳ ವೇಗವಾಗಿ ಚಲಿಸಿದ್ದು ಅಪಘಾತವಾಗಲು ಕಾರಣವೆಂದು ಸಾರ್ವಜನಿಕರು ಆರೋಪಿಸಿದರು. ಟಿಪ್ಪರ ವಾಹನಗಳು ಮುಖ್ಯ ರಸ್ತೆಯಲ್ಲಿ ಭಯಂಕರವಾಗಿ ಕರ್ಕಶ ಶಬ್ಧ ಮಾಡುತ್ತಾ ಬಹಳ ವೇಗವಾಗಿ ಚಲಿಸುವ ಮೂಲಕ ಸಾರ್ವಜನಿಕರಿಗೆ ಜೀವ ಭಯ ತರುತ್ತಿವೆ. ಟಿಪ್ಪರಗಳು ಮುಖ್ಯ ರಸ್ತೆಯಲ್ಲಿ ಒಡಾಡಬಾರದು ಎಂದು ಬೇಡಿಕೆ ಇಟ್ಟು ಜನರು ಪ್ರತಿಭಟಿಸಿದರು. ಸುದ್ದಿ ತಿಳಿದು ಪೊಲೀಸರೊಂದಿಗೆ ಆಗಮಿಸಿದ ಸಿಪಿಐ ಬಸವರಾಜಪ್ಪ ಟಿಪ್ಪರ ಚಾಲಕನ ಮೇಲೆ ಸೂಕ್ತವಾದ ಕ್ರಮ ಜರುಗಿಸುವದಾಗಿ ಭರವಸೆ ನೀಡಿದರೂ ಸಹ ಸಾರ್ವಜನಿಕರು ಕೇಳಲು ಸಿದ್ಧರಿರಲಿಲ್ಲ. ಕೊನೆಗೆ ಅವರು ಎಲ್ಲಾ ಟಿಪ್ಪರಗಳ ಮಾಲೀಕರ ಹಾಗೂ ಚಾಲಕರ ಸಭೆಯನ್ನು ಪೊಲೀಸ್ ಠಾಣೆಯಲ್ಲಿ ಕರೆಯುವ ಮೂಲಕ ಸೂಕ್ತವಾದ ಕ್ರಮ ತೆಗೆದುಕೊಳ್ಳುವದಾಗಿ ಭರವಸೆ ನೀಡಿದ ನಂತರ ಜನರು ರಸ್ತೆ ತಡೆ ನಿಲ್ಲಿಸಿದರು.