ಬುಡಕಟ್ಟು ಗ್ರಾಮ ಕೆಗದಾಳಕ್ಕೆ ನೆಹರೂ ಯುವಕ ಕೇಂದ್ರದ ಯುವಕರ ಭೇಟಿ
ಕಾರವಾರ 22: ರಾಷ್ಟ್ರೀಯ ಯುವ ಸಪ್ತಾಹ ಅಂಗವಾಗಿ ಕಾರವಾರದ ನೆಹರೂ ಯುವಕೇಂದ್ರದವರು ದಾಂಡೇಲಿಯ ಅಂಬಿಕಾನಗರದ ಕುಗ್ರಾಮವಾದ ಕೆಗದಾಲ್ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಬುಡಕಟ್ಟು ಜನಾಂಗ ವಾಗಿರುವ ಸಿದ್ಧಿ ಸಮೂಹವನ್ನು ಭೇಟಿಯಾದರು. ಅವರ ಸಾಮಾಜಿಕ ,ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳನ್ನು ತಿಳಿದುಕೊಂಡರು. ಅವರ ದಿನಚರಿ, ಆಚಾರ,ವಿಚಾರಗಳು,ಆಹಾರ, ಸಂಸ್ಕ್ರತಿ, ಭಾಷೆ, ಕಾಡಿನ ಉತ್ಪನ್ನಗಳ ಬಳಕೆ ,ಮುಂತಾದ ಎಲ್ಲ ವಿಚಾರಗಳನ್ನು ಅವರ ಜೊತೆ ಚರ್ಚಿಸಲಾಯಿತು. ಮನೆಯ ಹಾಗೂ ಗ್ರಾಮದ ಸ್ಥಿತಿಗತಿಗಳು ವೀಕ್ಷಿಸಲಾಯಿತು. ಹಾಗೂ ಅಲ್ಲಿಯ ಯುವಕರನ್ನು ಸಂಪರ್ಕಿಸಿ ಯುವ ಮಂಡಳಿಯನ್ನು ಸಂಘಟಿಸಲು ತಿಳಿಸಲಾಯಿತು. ಫಾದರ್ ಲಾರೆನ್ಸ್ ಫನಾರ್ಂಡಿಸ್ ಅವರ ಮಾರ್ಗದರ್ಶನದಲ್ಲಿ ಸಿದ್ದಿ ಮುಂದಾಳು ಅಗಸ್ಟಿನ್ ಅವರ ಮುಂದಾಳತ್ವದಲ್ಲಿ ಕೆಗದಾಳ ಗ್ರಾಮದ ಸಿದ್ದಿ ಸಮುದಾಯವನ್ನು ಸಂಪರ್ಕಿಸಲಾಯಿತು. ಮುಂದೆಯೂ ಆ ಗ್ರಾಮಕ್ಕೆ ಭೇಟಿ ನೀಡಿ ನೆಹರು ಯುವ ಕೇಂದ್ರದ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಯಿತು.ಈ ಕಾರ್ಯಕ್ರಮದಲ್ಲಿ ನೆಹರೂ ಯುವ ಕೇಂದ್ರದ ಯುವ ಅಧಿಕಾರಿ ಯಶವಂತ ಯಾದವ್ , ಲೆಕ್ಕಾಧಿಕಾರಿ ಮೀರಾ ನಾಯ್ಕ್ ಮತ್ತು ನೆಹರೂ ಯುವ ಕೇಂದ್ರದ ಯುವ ಕಾರ್ಯಕರ್ತರು,ಹಾಗೂ ಕಡಲಸಿರಿ ಯುವ ಮಂಡಲದ ಸದಸ್ಯರು ಪಾಲ್ಗೊಂಡಿದ್ದರು.
ಅಂತೆಯೇ ನೆಹರೂ ಯುವ ಕೇಂದ್ರದ ತಂಡ ಗಣೇಶ ಗುಡಿಯ ಹಿನ್ನೀರಿನ ಸಾಹಸ ಕೇಂದ್ರಕ್ಕೆ ಭೇಟಿ ನೀಡಿ ಸಾಹಸ ಕಾರ್ಯಕ್ರಮ ವನ್ನು ನಡೆಸಲಾಯಿತು.