ಬೈಲಹೊಂಗಲ

ಯುವ ಜನಾಂಗ ಜಲಮೂಲಗಳನ್ನು ಹೆಚ್ಚಿಸಲು ಪ್ರಯತ್ನಿಸಬೇಕು: ಜಡಿಸಿದ್ದೇಶ್ವರ ಸ್ವಾಮೀಜಿ

ಯುವ ಜನಾಂಗ ಜಲಮೂಲಗಳನ್ನು ಹೆಚ್ಚಿಸಲು ಪ್ರಯತ್ನಿಸಬೇಕು: ಜಡಿಸಿದ್ದೇಶ್ವರ ಸ್ವಾಮೀಜಿ

ಬೈಲಹೊಂಗಲ 08: ರಾಜ್ಯದ ಪ್ರತಿ ಗ್ರಾಮಗಳು ಸೌಂಧಯರ್ೀಕರಣಗೊಳ್ಳಬೇಕಾದರೆ ಕೆರೆ, ಹಳ್ಳಗಳ ಪಾತ್ರ ಅತ್ಯವಶ್ಯವಾಗಿದ್ದು ಅವುಗಳನ್ನು ಯುವ ಜನಾಂಗ ಉಳಿಸಿಕೊಂಡು ಜಲಮೂಲಗಳನ್ನು ಹೆಚ್ಚಿಸಲು ಪ್ರಯತ್ನಿಸಬೇಕೆಂದು ತಾಲೂಕಿನ ದೊಡವಾಡ ಗ್ರಾಮದ ಶ್ರೀ ಹಿರೇಮಠದ ಜಡಿಸಿದ್ದೇಶ್ವರ ಸ್ವಾಮೀಜಿ ಹೇಳಿದರು. 

ಅವರು ಬೈಲಹೊಂಗಲದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಿ.ಸಿ.ಟ್ರಸ್ಟ, ಬುಡರಕಟ್ಟಿ ಗ್ರಾ.ಪಂ ಕಾಯರ್ಾಲಯ ಹಾಗೂ ಬಿದರಗಡ್ಡಿ ಗ್ರಾಮದ ಕೆರೆ ಅಭಿವೃದ್ದಿ ಸಮೀತಿ ಆಶ್ರಯದಲ್ಲಿ ಬಿದರಗಡ್ಡಿಯ ಶ್ರೀ ಭೀರಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿದ ಪುನಶ್ಚೇತನಗೊಳಿಸಿದ 539 ನೇಯ ನಮ್ಮೂರು ನಮ್ಮ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಜಲ ಮೂಲಕ್ಕೆ ಆಧಾರವಾಗಿರುವ ಕೆರೆಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಸಂಸ್ಥೆಯು ಅಭಿವೃದ್ದಿ ಮಾಡಿ ಆ ಮೂಲಕ ಸಾಮಾಜಿಕ ಕಳಕಳಿ ಮೆರೆಯುತ್ತಿರುವದು ಶ್ಲಾಘಣೀಯವೆಂದರು.

ಸಭೆಯ ಅಧ್ಯಕ್ಷತೆ ವಹಿಸಿದ ಶಾಸಕ ಮಹಾಂತೇಶ ಕೌಜಲಗಿ ಕೆರೆಗೆ ಭಾಗಿನ ಅಪರ್ಿಸಿ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ರಾಜ್ಯ ಸರಕಾರ ಜಾರಿ ಮಾಡಿದ್ದು ಅನಾಧರಕೊಳಗಾದ ಕೆರೆಗಳನ್ನು ಸಮುದಾಯದ ಮಡಿಲಿಗೆ ನೀಡಿ ಹಲವಾರು ಸಂಕಷ್ಟಕ್ಕೆ ಪರಿಹಾರ ಕಲ್ಪಿಸುತ್ತಿರುವ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆ ಬೈಲಹೊಂಗಲ ತಾಲೂಕಿನಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಧಾರವಾಡದ ಗ್ರಾಮಾಭಿವೃದ್ದಿ ಯೋಜನೆಯ ಪ್ರಾಧೇಶಿಕ ನಿಧರ್ೇಶಕ ವಸಂತ ಸಾಲಿಯಾನ್ ಅವರು ಕೆರೆ ಹಸ್ತಾಂತರಿಸಿ ಮಾತನಾಡಿದರು. ತಾ.ಪಂ. ಕಾರ್ಯನಿವರ್ಾಹಕಾಧಿಕಾರಿ ಸುಭಾಶ ಸಂಪಗಾಂವಿ, ಅಖಿಲ ಕನರ್ಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಸವರಾಜ ಸೊಪ್ಪಿಮಠ, ಮಾಜಿ ಜಿಲ್ಲಾಧ್ಯಕ್ಷ ವಿಠಲ ಪಿಸೆ, ಬುಡರಕಟ್ಟಿ ಗ್ರಾ.ಪಂ. ಪಿಡಿಓ ಭಾಗ್ಯಶ್ರೀ ಬ್ಯಾಹಟ್ಟಿ, ಕೆರೆ ಅಭಿವೃದ್ದಿ ಸಮೀತಿ ಗೌರವಾಧ್ಯಕ್ಷ ಮಹಾದೇವ ಮುಳಕೂರ, ಜಿಲ್ಲಾ ನಿಧರ್ೇಶಕ ಸತೀಶ ನಾಯ್ಕ, ಕೆರೆ ಅಭಿವೃದ್ದಿ ಸಮೀತಿ ಅಧ್ಯಕ್ಷ ಶಿವಪ್ಪ ಕುರಿ, ಗ್ರಾ.ಪಂ.ಅಧ್ಯಕ್ಷ್ಯೆ ಜನ್ನತಬಿ ಭಾವನ್ನವರ, ಉಪಾಧ್ಯಕ್ಷ ವೀರಭಧ್ರಪ್ಪ ಡೊಂಬರಕೊಪ್ಪ ಉದ್ಯಮಿ ಹೇಮಂತಕುಮಾರ ಮುಂತಾದವರು ಉಪಸ್ಥಿತರಿದ್ದರು. 

ಶಾಸಕರ ಹಾಗೂ ಕೆರೆ ಅಭಿವೃದ್ದಿ ಸಮಿತಿಯಿಂದ ಕೆರೆ ಅಭಿವೃದ್ದಿಯ ನಾಮ ಫಲಕ ಅನಾವರಣಗೊಳಿಸಿ ಇದೇ ಸಂದರ್ಭದಲ್ಲಿ ಕೆರೆಗೆ ಭಾಗಿನ ಅಪರ್ಿಸಲಾಯಿತು. ಕೆರೆ ಅಭಿವೃದ್ದಿ ಸಮೀತಿಯ ಪದಾಧಿಕಾರಿಗಳು, ಗ್ರಾಂ.ಪಂ ಸದಸ್ಯರು, ಯೋಜನೆಯ ಸೇವಾ ಪ್ರತಿನಿಧಿಗಳು, ಒಕ್ಕೂಟದ ಸದಸ್ಯರು, ಗ್ರಾಮಸ್ಥರು, ಕುಂಭ ಹೊತ್ತ ಮುತೈದೆಯರು ಪಾಲ್ಗೊಂಡಿದ್ದರು. ಹಲವಾರು ಸಾಧಕರನ್ನು ಸತ್ಕರಿಸಲಾಯಿತು. 

ಸಂಸ್ಥೆಯ ಮೇಲ್ವಚಾರಕ ಪರಶುರಾಮ ಸ್ವಾಗತಿಸಿದರು. ವಿಜಯಕುಮಾರ ನಿರೂಪಿಸಿದರು. ಕೃಷಿ ಮೇಲ್ವಚಾರಕ ರವಿ ಆರ್ ಗೊಂಡ ವಂದಿಸಿದರು.  

 

 

ಸುದ್ದಿ ಓದಿ