ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಕರು ಕೈ ಜೋಡಿಬೇಕು: ವಿಶ್ವಾರಾದ್ಯ ಶ್ರೀ
ಶಿಗ್ಗಾವಿ 11: ಜೀವನ ಸ್ಥಿರವಲ್ಲ ಕತ್ತಲು ಮತ್ತು ಬೆಳಕು ಜೀವನದಲ್ಲಿ ಇದೆ ನಾವು ಹುಟ್ಟಿನಿಂದ ಇಲ್ಲಿಯವರೆಗೆ ಏನು ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದೇವೆ ಎನ್ನುವುದನ್ನು ಅರ್ಥ ಮಾಡಿಕೊಂಡು ಸಾಗಬೇಕು, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಕರು ಕೈ ಜೋಡಿಬೇಕು ಎಂದು ಹಿರೇಮಣಕಟ್ಟಿಯ ಮುರಘೇಂದ್ರಮಠದ ವಿಶ್ವಾರಾದ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಕುನ್ನೂರು ಗ್ರಾಮದಲ್ಲಿ ಬಂಧುಗಳಿಂದ ಆಯೋಜಿಸಲಾದ 13ನೇ ವರ್ಷದ ಗಣಪತಿ ವಿಸರ್ಜನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು, ಅರೋಗ್ಯ ಯುತಜೀವನ ಸಾಗಿಸಲು ಉತ್ತಮ ಕೆಲಸ ಕಾರ್ಯಗಳನ್ನು ಮಾಡಬೇಕು, ಸಮಾಜಕ್ಕೆ ನಾವು ಏನು ಕೊಡುತ್ತೇವೆ ಅದು ನಮಗೆ ದಕ್ಕುತ್ತವೆ ಏನು ಬಿತ್ತುತ್ತೇವೆ ಅದನ್ನು ಬೆಳೆಯುತ್ತೇವೆ, ಪಡೆಯುತ್ತೇವೆ ಹಾಗಾಗಿ ಒಳ್ಳೆಯದನ್ನು ಬಿತ್ತಿ ಒಳ್ಳೆಯದನ್ನು ಬೆಳೆಯಿರಿ ಅದನ್ನು ಸಮಾಜಕ್ಕೆ ಹಂಚಿ ಎಂದು ಭಕ್ತರಿಗೆ ಮಾರ್ಗದರ್ಶನ ನೀಡಿದರು.
ವಿಜ್ಞಾನಯುಗ ಆರಂಭವಾಗಿದೆ ಆ ನಿಟ್ಟಿನಲ್ಲಿ ಜಗತ್ತು ಗಣನೀಯ ವೇಗ ಪಡೆದುಕೊಂಡಿದೆ ಹಾಗಂತ ಆಸೆಗಳಿಗೆ ಬಿದ್ದುಆರೋಗ್ಯ ಹಾಳು ಮಾಡಿಕೊಳ್ಳದೆ ಇರುವುದರಲ್ಲಿ ಸಂತೋಷ ಪಡುವಗುಣ ಬೆಳೆಸಿಕೊಳ್ಳಿ. ಪರಮಾತ್ಮಯಾವ ಬೇಧ ಭಾವಗಳಿಲ್ಲದೆ ಎಲ್ಲರಿಗೂ ಗಾಳಿ ಬೆಳಕು ಸಮಾನವಾಗಿ ನೀಡಿದ್ದಾನೆ ನಾವೆಲ್ಲಾ ಭೇದ ಭಾವಗಲಿಲ್ಲದೆ ಪ್ರಕೃತಿಆಸ್ವಾದಿಸಬೇಕು, ನಮ್ಮ ನಾಡಿನ ಸಂಸ್ಕೃತಿ ಅಳಿಯದಂತೆ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವೆ.ಮೂ.ಸೋಮಯ್ಯ ಹಿರೇಮಠ ಅವರ ಅಧ್ಯಕ್ಷತೆಯನ್ನು ವಹಿಸಿದ್ದರು ಬಸವರಾಜ ಶಿಗ್ಗಾಂವ ಜನಪದ ಕಲಾ ತಂಡದಿಂದ ಜನಪದ ಗೀತೆಗಳನ್ನು ಪ್ರಸ್ತುತಪಡಿಸಿದರು.
ಕೆಸಿಸಿ ಬ್ಯಾಂಕ್ ನೂತನ ನಿರ್ದೇಶಕ ಸಂಗಮೇಶ್ವರ ಕಂಬಾಳಿಮಠ ಮಾತನಾಡಿ ಇಂದಿನ ದಿನದಲ್ಲಿ ಡಿಜೆ ಸಂಸ್ಕೃತಿನ್ನು ದೂರ ಮಾಡಿಜಾನಪದ ಹಾಗೂ ಶ್ರೀಗಳ ಆಶೀರ್ವಚನದಿಂದ ನಮ್ಮ ಜೀವನವು ಮುಕ್ತಿಯತ್ತ ಸಾಗಲು ಸುಗಮವಾಗುತ್ತದೆ ಎಂದರು.
ವ್ಯವಸಾಯ ಸೇವಾ ಸಹಕಾರಿ ಪತ್ತಿನ ಸಂಘದ ಕಾರ್ಯದರ್ಶಿ ಸುರೇಶ ಬೆಂಡಿಗೇರಿ, ಡಾ.ಕೆ.ಸಿ. ಪಾಟೀಲ, ಪತ್ರಕರ್ತರಾದ ಬಿ.ಎಸ್.ಹಿರೇಮಠ, ಸೇರಿದಂತೆ ಹಲವರು ಮಾತನಾಡಿದರು,
ಗ್ರಾ.ಪಂ ಮಾಜಿಅಧ್ಯಕ್ಷ ಸದಸ್ಯರಾದ ಮಹೇಶ ಚಿಕ್ಕವೀರಮಠ, ಹಿರೇಬೆಂಡಿಗೇರಿ ಗ್ರಾ.ಪಂ. ಉಪಾಧ್ಯಕ್ಷ ಪಕ್ಕೀರಯ್ಯ ಹಿರೇಮಠ, ಜೈನ್ ಸಮಾಜದ ಪಂಡಿತರಾದ ನಾಗರಾಜ ಉಪಾಧ್ಯಾಯ, ಅಜುಮನ್ ಸಮೀತಿಯ ಮಾಜಿಅಧ್ಯಕ್ಷ ಆಸ್ಪಕಲಿ ಮತ್ತೇಖಾನ, ಶಿವರುದ್ರಯ್ಯ ಹಿರೇಮಠ, ಬಸನಗೌಡ ಜೇಕಿನಕಟ್ಟಿ, ಎಂ.ಎಸ್.ಹಿರೇಮಠ, ಸಹದೇವಪ್ಪ ಬೀರವಳ್ಳಿ, ಕಲ್ಲಪ್ಪ ಅಗಸೀಮನಿ, ಹನುಮಂತಪ್ಪ ಕ್ಷೌರದ, ರುದ್ರ್ಪ ಕಾಳಿ, ಸಹದೇವಪ್ಪ ಮಲ್ಲಾಡದ, ಸೇರಿದಂತೆ ಹಲವರು ಉಪಸ್ಥಿತರಿದ್ದರು.