ಯರಗಟ್ಟಿ

ಯುವಕರು ಸುಶಿಕ್ಷಿತರಾಗಿ ಸಾಧನೆಯ ಉತ್ತುಂಗಕ್ಕೆರಬೇಕು: ಈರಯ್ಯ ಮಠಪತಿ

ಯುವಕರು ಸುಶಿಕ್ಷಿತರಾಗಿ ಸಾಧನೆಯ ಉತ್ತುಂಗಕ್ಕೆರಬೇಕು: ಈರಯ್ಯ ಮಠಪತಿ

ಯರಗಟ್ಟಿ 16: ಬ್ರಿಟಿಷರ ವಿರುದ್ದ ಸಂಘಟನಾತ್ಮಕ ಹೋರಾಟ ಮಾಡುವದರೊಂದಿಗೆ ಯರವಾಡ ಜೈಲು ವಾಸಿಯಾಗಿದ್ದ ಗ್ರಾಮದ ನೂರಾರು ಸ್ವಾತಂತ್ರ್ಯ ಹೋರಾಟಗಾರರ ಆದರ್ಶ ಜೀವನ ಮಂದಿನ ಪೀಳಿಗೆಗೆ ತತ್ವಾದರ್ಶಗಳು ಅನುಕರಣೆಯಾಗಲೆಂದು ಮುರಗೋಡ ಠಾಣೆಯ ಸಿಪಿಐ ಈರಯ್ಯ ಮಠಪತಿ ಹೇಳಿದರು.  

ಸೋಮವಾರ ಸಮೀಪದ ಹೊಸೂರ ಗ್ರಾಮದಲ್ಲಿ ಮಧ್ಯರಾತ್ರಿ ಹಮ್ಮಿಕೊಂಡಿದ್ದ ಅಖಂಡ ಭಾರತ ಸಂಕಲ್ಪದಿನ ಹಾಗೂ ಗ್ರಾಮದ 215 ಕ್ಕೂ ಹೆಚ್ಚಿನ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮದ ಯುವಕರು ಉತ್ತಮ ರೀತಿಯಲ್ಲಿ ಸುಶಿಕ್ಷಿತರಾಗಿ ತಮ್ಮ ಜೀವನದಲ್ಲಿ ಸಾಧನೆಯ ಉತ್ತುಂಗಕ್ಕೆರಬೇಕೆಂದರು. ಬೈಲಹೊಂಗಲದ ಸಿಪಿಐ ಪಿ.ಎಸ್‌.ಸಾಲಿಮಠ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ಭಾರತ ಬ್ರೀಟಿಷರ ದಾಸ್ಯದಿಂದ ಮುಕ್ತವಾಗಿದೆ. ಅವರು ತಂದು ಕೊಟ್ಟ ಸ್ವಾತಂತ್ರ್ಯವನ್ನು ಪ್ರತಿಯೊಬ್ಬರು ಗೌರವಿಸೋಣ, ದೇಶದ ರಕ್ಷಣೆ ಕಾನೂನು ಸುವ್ಯವಸ್ಥೆಯ ಪಾಲನೆ ನಮ್ಮಲ್ಲರ ಕರ್ತವ್ಯವಾಗಿದೆ ಎಂದರು.      

ನ್ಯಾಯವಾದಿ ಎಫ್‌.ಎಸ್‌.ಸಿದ್ದನಗೌಡರ ಮಾತನಾಡಿ, 1905 ರಲ್ಲಿ ರಾಷ್ಟ್ರಾಭಿಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬ್ರೀಟಿಷರ್ ವಿರುದ್ದ ಹೋರಾಟ ಮಾಡಿ ಯರವಾಡ ಜೈಲುವಾಸ ಅನುಭವಸಿದ ಸ್ವಾತಂತ್ರ್ಯ ಹೊರಾಟಗಾರರನ್ನು ಪ್ರತಿಯೊಬ್ಬರು ಸ್ಮರಣೆ ಮಾಡಬೇಕಾಗಿದೆ. ಗ್ರಾಮಸ್ಥರ ಹೋರಾಟದ ಮನೋಭಾವನೆ ಕಂಡು ಗ್ರಾಮಕ್ಕೆ ಗಾಂಧೀಜಿ ಅಗಮಿಸಿ 91 ವರ್ಷವಾಗಿದೆ. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಆಗಮಿಸಿ 90 ವರ್ಷ ಸಂದಿದೆ. ಬಾಲಗಂಗಾಧರ ತಿಲಕರು ಗ್ರಾಮಕ್ಕೆ ಬಂದು 118 ವರ್ಷ ಸಂದಿರುವ ಪ್ರಯುಕ್ತ ಪ್ರತಿ ವರ್ಷ ಗ್ರಾಮದ  ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಅಗಸ್ಟ್‌ 14 ರಂದು ಮಧ್ಯರಾತಿ ್ರ12 ಘಂಟೆಗೆ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ್ಯೋತ್ಸವ ಆಚರಿಸುತ್ತಾ ಬಂದಿರುವದು ನಮ್ಮೂರಿನ ಹೆಮ್ಮೆ. ಸ್ವಾತಂತ್ರ್ಯ ಹೋರಾಟದಲ್ಲಿ ಗ್ರಾಮದ ಹೆಣ್ಣು ಮಕ್ಕಳು ಪಾಲ್ಗೊಂಡಿರುವದು ಈ ಗ್ರಾಮದ ವಿಶೇಷವಾಗಿದ್ದು  215ಕ್ಕೂ ಹೆಚ್ಚು ಸ್ವಾತಂತ್ರ್ಯದ ಹೋರಾಟದಲ್ಲಿ ಪಾಲ್ಗೊಂಡಿರುವದು ನಮಗೆಲ್ಲ ಆದರಣಿಯ ಎಂದರು.   ಧ್ವಜಾರೋಹಣ ನೆರವೇರಿಸಿದ ಸರ್ಕಾರಿ ವೈದ್ಯಾಧಿಕಾರಿ ಡಾ. ರವೀಂದ್ರ ಜಕನೂರ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಈ ಗ್ರಾಮಕ್ಕೆ 3 ಮಹಾನ್ ನಾಯಕರು ಆಗಮಿಸಿದ ಇತಿಹಾಸ ಹೊಂದಿದ ಹೊಸೂರಿನಲ್ಲಿ ಇಷ್ಟೊಂದು ಅದ್ದೂರಿಯಾಗಿ ಪ್ರತಿವರ್ಷ ಮಧ್ಯರಾತ್ರಿ ಧ್ವಜಾರೋಹಣ ಕಾರ್ಯಕ್ರಮ ನಡೆಯುತ್ತಿರುವದು ಗ್ರಾಮದ ಗೌರವವನ್ನು ಹೆಚ್ಚಿಸಿದೆ ಎಂದರು. ಪ್ರಕಾಶ ಬಾಳೆಕುಂದರಗಿ, ಮಹಾಂತೇಶ ಮತ್ತಿಕೊಪ್ಪ, ಸೋಮಲಿಂಗಪ್ಪ ಇಂಗಳಗಿ, ಮಾತನಾಡಿದರು. 

ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ  ವಾರಸುದಾರರಾದ, ಈಶ್ವರಚಂದ್ರ ಇಂಗಳಗಿ, ಗುರುಪಾದ ಕಳ್ಳಿ,  ದತ್ತು ಕುಲಕರ್ಣಿ, ಮಡಿವಾಳಪ್ಪ ಕೋಟಗಿ, ಮಹಾಂತೇಶ ಕಮತಗಿ, ಮಹಾಂತೇಶ ಹುರಕಡ್ಲಿ, ವೀರಣಗೌಡ ಸಂಗಣ್ಣವರ, ಮಲ್ಲಿಕಾರ್ಜುನ ಬೋಳೆತ್ತಿನ, ಈರಣ್ಣ ಸಂಪಗಾಂವ, ರತ್ನವ್ವ ಗಾಣಿಗೇರ, ಮಲ್ಲವ್ವ ಸುತಗಟ್ಟಿ, ಮುಶೆಪ್ಪ ಜಡಿ, ಗಂಗಾಧರ ಮೂಗಬಸವ, ಸಂಜು ಪಾಟೀಲ, ಬಸವರಾಜ ಪೇಂಟೆದ, ಮಡಿವಾಳಪ್ಪ ಕಮತಗಿ, ಸುರೇಶ ಬಾಳೆಕುಂದರಗಿ, ಗುರುಸ್ವಾಮಿ ಹೊಸಪೇಠಿಮಠ, ರಾಚ್ಚಪ್ಪ ಬೋಳೆತ್ತಿನ, ಸೋಮಲಿಂಗಪ್ಪ ಹುದ್ದಾರ, ಗೌಡಪ್ಪ ಹೊಸಮನಿ, ಮಲ್ಲಿಕಾರ್ಜುನ ವಕ್ಕುಂದ, ಸೋಮಶೇಖರ್ ವಣ್ಣುರ, ಉಮೇಶ ಬೋಳೆತ್ತಿನ,  ದಿಲಾವಾರ ದುಪದಾಳ, ಮುನಿರ ಶೇಖ, ಈರಣ್ಣ ಬೆಂಡಿಗೇರಿ, ನಿಂಗಪ್ಪ ಆರೇರ, ಸೋಮಲಿಂಗಪ್ಪ ಚಳಕೊಪ್ಪ, ಶಂಕರ ಬಡಿಗೇರ, ಕಲ್ಲಪ್ಪ ಚಳಕೊಪ್ಪ,  ಮಂಜು ಪೇಂಟೆದ, ಬಸವರಾಜ ಮೂಗಬಸವ, ರಮೇಶ ವಕ್ಕುಂದು ಹಾಗೂ ಇತರರನ್ನು ಸತ್ಕರಿಸಿಲಾಯಿತು.  

ಕಾರ್ಯಕ್ರಮದ ವೇದಿಕೆಯ ಮೇಲೆ ಗ್ರಾಪಂ ಸದಸ್ಯರು ಇದ್ದರು. ಬಸವರಾಜ ಬಾಳೆಕುಂದರಗಿ ವಂದೇ ಮಾತರಂ ಹೇಳಿ ಕಾರ್ಯಕ್ರಮ ನಿರೂಪಿಸಿದರು. ಎಸ್‌.ಕೆ.ಮೆಳ್ಳಿಕೇರಿ ಸ್ವಾಗತಿಸಿದರು.ದುಂಡಯ್ಯ ಹೀರೆಮಠ, ಉಮೇಶ ಸಂಗೋಳ್ಳಿ, ಈರಣ್ಣ ಚಿಕ್ಕೊಪ್ಪ, ಸಂಜು ಚಿಕ್ಕೊಪ್ಪ, ಮಲ್ಲಿಕಾರ್ಜುನ ಕಂಬಾರ, ಮಲ್ಲಿಕಾರ್ಜುನ ಕರಡಿಗುದ್ದಿ, ಉಮೇಶ ಕಮತಗಿ,ಗೌಸ ಮುಲ್ಲಾ, ಬಸವರಾಜ ಬೂದಿಹಾಳ, ಪುಟ್ಟು ಕಲ್ಲೇದ,ಮಲ್ಲಿಕಾರ್ಜುನ ಚಿಕ್ಕೊಪ್ಪ, ಮಲ್ಲಿಕಾರ್ಜುನ ಕಮತಗಿ, ಸೊಮಪ್ಪ ವಕ್ಕುಂದ, ಪ್ರಕಾಶ್ ಹುರಕಡ್ಲಿ, ಹಾಗೂ ನೂರಾರು ಸಂಖ್ಯೆಯಲ್ಲಿ ದೇಶಭಕ್ತರು ಸೇರಿದ್ದರು. ಮುರಗೋಡ ಠಾಣೆಯ ಪೋಲಿಸರು ಬಂದುಬಸ್ತ ಒದಗಿಸಿದ್ದರು. 


ಸುದ್ದಿ ಓದಿ