ರಾಣೆಬೆನ್ನೂರ

ಪುಣ್ಯದ ಕಾರ್ಯದಲ್ಲಿ ಯುವಕರು ಭಾಗವಹಿಸಿ: ಲಮಾಣಿ

ಪುಣ್ಯದ ಕಾರ್ಯದಲ್ಲಿ ಯುವಕರು ಭಾಗವಹಿಸಿ: ಲಮಾಣಿ

ರಾಣೇಬೆನ್ನೂರ 08: ಪ್ರಸ್ತುತ ದಿನಗಳಲ್ಲಿ ಯುವಕರು  ಓದಿನ ಕಡೆ ನಿರಾಸಕ್ತಿ ತೋರಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಮಯ ವ್ಯತ್ಯಯ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭಾವಂತ ಯುವಕರಿದ್ದಾರೆ, ಅವರು ತಮ್ಮ ಯೌವನವನ್ನು ಅಲ್ಲಲ್ಲಿ ಕಾಲ ಹರಣ ಮಾಡುವದರ ಬದಲು ಸೈನ್ಯಕ್ಕೆ ಸೇರಿಕೊಂಡರೆ ಅವರ ಜೀವನಕ್ಕೆ ಅರ್ಥ ಸಿಗುತ್ತದೆ ಎಂದು ನಿವೃತ ಯೋಧ ನೂಲೇಶ ಲಮಾಣಿ ಹೇಳಿದರು.

ರಾಣೆಬೆನ್ನೂರ ತಾಲೂಕಿನ ಹನಮಾಪುರ ತಾಂಡಾದ ಗಿಡ್ಡಪ್ಪ ಹಾಗೂ ಸಕ್ರವ್ವ ದಂಪತಿಗಳ ಮಗನಾದ ನೂಲೇಶ ಲಮಾಣಿ ಭಾರತೀಯ ಸೇನೆಯಲ್ಲಿ ಸತತ 17ವರ್ಷ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಇಂದು ಆಗಮಿಸಿದ ನೂಲೇಶ ಲಮಾಣಿ ಅವರಿಗೆ ರಾಣೆಬೆನ್ನೂರ ರೈಲ್ವೆ ನಿಲ್ದಾಣದಿಂದ ಭವ್ಯವಾದ ಸ್ವಾಗತ ಕೊರಲಾಯಿತು. 

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದಿನ ಯುವಕರು ಅನೇಕ ಪದವಿಗಳನ್ನು ಪಡೆದುಕೊಂಡರು ಉದ್ಯೋಗವಿಲ್ಲದೇ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಳ್ಳುವುದು, ಕೆಲವರು ದುಶ್ಚಟಗಳಿಗೆ ಬಿದ್ದು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ, ಇನ್ನು ಕೆಲವರು ಕೆಲಸವಿಲ್ಲದೇ ಮಾನಸಿಕ ಖಿನ್ನತಗೆ ಒಳಗೊಳ್ಳುತ್ತಿರುವುದು ನೊಡಿದರೆ ತುಂಬಾ ನೋವಾಗುತ್ತದೆ ಎಂದು ವಿಷಾಧವ್ಯಕ್ತಪಡಿಸಿದರು. 

ದೇಶಸೇವೆ ಮಾಡುವುದು ಪುಣ್ಯದ ಕೆಲಸ. ಎಲ್ಲರು ತಮ್ಮ ಮಕ್ಕಳನ್ನು ಡಾಕ್ಟರ್, ಇಂಜಿನಿಯರ್, ಶಿಕ್ಷಕ ವೃತ್ತಿಯ ಜೊತೆ ಜೊತೆಗೆ ಪ್ರತಿ ಕುಟುಂಬದಿಂದ ಮನೆಗೊಬ್ಬರಂತೆ  ದೇಶ ಸೇವೆಗೆ ಕಳಿಸಲು ಮುಂದಾದಾಗ ಮಾತ್ರ ದೇಶದ ಸಮಗ್ರ ರಕ್ಷಣೆಯ ಜೊತೆಗೆ ಆತ್ಮಸಂತೃಪ್ತಿ ಹೊಂದಿ ದೇಶ ಸೇವೆ ಮಾಡಿದ ಮಾನಸಿಕ ತೃಪ್ತಿಯ ಜೊತೆಗೆ ಸಮಾಜದಲ್ಲಿ ಅತ್ಯಂತ ಪ್ರೀತಿ ವಿಶ್ವಾಸ ಮತ್ತು ಗೌರವಕ್ಕೆ ಪಾತ್ರರಾಗಲು ಸಾಧ್ಯವಾಗುತ್ತದೆ ಎಂದ ಅವರು, ತಮ್ಮ ಹಿರಿಯ ಆಸೆಯಂತೆ ಅಂದು ನಾನು ದೇಶ ಸೇವೆಗೆ ಮುಂದಾಗಿದ್ದೆ ಇಂದು ಸೇವೆಯಿಂದ ನಿವೃತ್ತಿಗೊಂಡು ಭಾರತ ಮಾತೆಯ ಜನ್ಮದಾತೆಯ ಮಡಿಲಿಗೆ ಬಂದಿದ್ದೇನೆ. ಜನರು ತಮಗೆ ನೀಡುತ್ತಿರುವ ಪ್ರೀತಿ,ವಿಶ್ವಾಸ ಮತ್ತು ಗೌರವದಿಂದಾಗಿ ಅತ್ಯಂತ ಭಾವುಕನಾಗಿದ್ದೇನೆ ಎಂದರು. 

ವಿದ್ಯಾಬ್ಯಾಸ ಮುಗಿದ ನಂತರ ಯುವಕರಿಗೆ ದೇಶ ಸೇವೆ ಮಾಡಲು ಸಾಕಷ್ಟು ಅವಕಾಶಗಳಿದ್ದು, ಆರ್ಮಿ, ಬಿ.ಎಸ್.ಎಫ್, ಸಿ.ಆರ್.ಪಿ.ಎಫ್, ಸಿ.ಐ.ಎಸ್.ಎಫ್, ಐ.ಟಿ.ಬಿ,ಪಿ, ನೇವಿ, ಏರ್‍ಫೋರ್ಸ್ ಹೀಗೆ ವಿವಿಧ ತುಕಡಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ. ಗ್ರಾಮದಲ್ಲಿನ ಅರ್ಹತೆ ಹೊಂದಿದ ಯುವಕರಿಗೆ ಸೈನ್ಯಕ್ಕೆ ಸೇರಲು ಉತ್ತೇಜನ ಹಾಗೂ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದೆ ನನ್ನ  ಜೀವನದ ಮುಂದಿನ ಗುರಿಯಾಗಿದೆ ಎಂದರು.

ಯೋಧ ನೂಲೇಶ್ ಮತ್ತು ಅವರ ಧರ್ಮಪತ್ನಿ  ಅವರನ್ನು ನಗರದ ಪ್ರಮುಖ ಬಿದಿಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಪೋಲಿಸ್ ಅಧಿಕಾರಿಗಳು, ವಿವಿಧ ಹಳ್ಳಿಗಳಿಂದ ಆಗಮಿಸಿದ ಯೋಧರು ಕುಟುಂಬಗಳು, ಸೇನಾ ಅಭಿಮಾನಿಗಳು, ವಿವಿಧ ಸಂಘಟನೆಗಳು, ರೈತರು, ರಾಜಕೀಯ ಮುಖಂಡರು, ನಿವೃತ ಯೋಧರು, ಯುವಕರು ಹೂಗುಚ್ಚ ನೀಡಿ ಸ್ವಾಗತಿಸಿದರು. 

ಸೇವೆ: ಅಂದು ಪಿ.ಯು.ಸಿ ಶಿಕ್ಷಣ ಮುಗಿಸಿ 2002ರಲ್ಲಿ ಸೇನೆಗೆ ನೇಮಗೊಂಡು, ಪಂಜಾಬ್, ರಾಜಸ್ಥಾನ, ಹರಿಯಾಣ, ಜಮ್ಮು ಕಾಶ್ಮಿರ, ಸಿಯಾಚಿನ್, ಅರುಣಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸಿದ ಅವರು ಬೆಂಗಳೂರುನಲ್ಲಿಯೂ ಸಹ ಸೇವೆ ಮಾಡಿ, ಪಾಕಿಸ್ತಾನ ವಿರುದ್ದ ಸರ್ಜಿಕಲ್ ಸ್ಟ್ರೈಕ್ ದಾಳಿಯಲ್ಲಿ ಭಾಗಿಯಾಗಿ ಶತ್ರು ರಾಷ್ಟ್ರಗಳೊಂದಿಗೆ ಸೇಣಸಾಡಿ 17 ವರ್ಷ ಸೇವೆ ಸಲ್ಲಿಸಿದ ನೂಲೇಶ ಅವರು ಸೇನೆಯ ಅಧಿಕಾರಿಯಾಗಿ ನೇಮಕಗೊಂಡು ಇದೀಗ  ನಿವೃತ್ತಿ ಹೊಂದಿದ್ದಾರೆ.

ಗಣ್ಯರಿಂದ ಯೋಧನಿಗೆ ಅದ್ದೂರಿ ಸ್ವಾಗತ: ಜಿಲ್ಲಾ ಪಂಚಾಯತ್ ಸದಸ್ಯ ಮಾರುತಿ ರಾಥೋಡ, ಎಪಿಎಂಸಿ ಸದಸ್ಯ ರಾಮಣ್ಣ ನಾಯಕ್, ಪಿ.ಎಸ್.ಐ ಪ್ರಭು ಕೆಳಗಿನಮನಿ, ರಾಮಣ್ಣ ಲಮಾಣಿ, ಕೃಷ್ಣಮೂರ್ತಿ ನಾಯಕ, ಪರಮೇಶ ಲಮಾಣಿ, ಚಂದ್ರು ಶಿಡೇನೂರ, ಶಿವಪ್ಪ ಲಮಾಣಿ, ಗಂಗಾಧರ ನಾಯಕ, ಗಿರಿಶ್ ಲಮಾಣಿ, ಪುಟ್ಟಪ್ಪ ಲಮಾಣಿ, ಮಂಜಪ್ಪ ಲಮಾಣಿ ಬೀರಪ್ಪ ಲಮಾಣಿ, ಪ್ರಕಾಶ ಬುರಡಿಕಟ್ಟಿ, ವೆಂಕಟೇಶ ಲಮಾಣಿ, ಲೋಕೇಶ ಲಮಾಣಿ, ಪ್ರಕಾಶ ಲಮಾಣಿ, ಆಟೋ ಚಾಲಕರು, ಗ್ರಾಮಸ್ಥರು, ವಿವಿಧ ಸಂಘಟನೆಯವರು ನಿವೃತ್ತ ಯೋಧನಿಗೆ ಅದ್ದೂರಿಯಾಗಿ ಸ್ವಾಗತಿಸಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ತಮ್ಮ ಸ್ವಗ್ರಾಮ ಹನಮಾಪುರ ತಾಂಡಾದಲ್ಲಿಯೂ ಸಹ ತಮ್ಮ ಗ್ರಾಮದ ಹೆಮ್ಮೆಯ ಪುತ್ರನಿಗೆ ಗ್ರಾಮಸ್ಥರು ಸಾಮೂಹಿಕವಾಗಿ ಯೋಧನಿಗೆ ತಿಲಕವಿಟ್ಟು ಹಬ್ಬದೋಪಾದಿಯಲ್ಲಿ ತಳಿರು ತೋರಣಗಳನ್ನು ಸಿಂಗರಿಸಿ ಭಾರತ್ ಮಾತಾಕೀ ಜೈ, ಜಯಘೋಷಗಳೊಂದಿಗೆ  ಅದ್ದೂರಿಯಾಗಿ ಸ್ವಾಗತ ಕೋರಿದರು. ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಯೋಧನಿಗೆ ಸನ್ಮಾನಿಸಿ ಮಾತನಾಡಿದರು. ಉಪನ್ಯಾಸಕ ಪುಟ್ಟಪ್ಪ ಲಮಾಣಿ,. ಗಂಗಾಧರ ನಾಯಕ, ಕಾಂತೇಶರೆಡ್ಡಿ ಗೊಡಿಹಾಳ ಸೇರಿದಂತೆ ಅನೇಕ ಗಣ್ಯರು, ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.

ಸುದ್ದಿ ಓದಿ