ತಾಳಿಕೋಟಿ

ಅ.5 ರಿಂದ ಯುವಜನರ ಸಂಕಲ್ಪ ನಡಿಗೆ : ಆಲಮಟ್ಟಿಯಿಂದ ತಾಳಿಕೋಟೆಯವರೆಗೆ ಪಾದಯಾತ್ರೆ

ಅ.5 ರಿಂದ ಯುವಜನರ ಸಂಕಲ್ಪ ನಡಿಗೆ : ಆಲಮಟ್ಟಿಯಿಂದ ತಾಳಿಕೋಟೆಯವರೆಗೆ ಪಾದಯಾತ್ರೆ


ತಾಳಿಕೋಟೆ 27:ದೇಶಕ್ಕೆ ಸಾಕಂತ್ರ-್ಯ ಬಂದು 75 ವರ್ಷ ಆಗುತ್ತಿರುವ ಹಿನ್ನೆಲೆ ದೇಶ ಅಮೃತ ಮಹೋತ್ಸವ ಆಚರಿಸುವ ಈ ಸಂದರ್ಭದಲ್ಲಿ ಆ.5 ರಿಂದ 8 ದಿನಗಳ ಕಾಲ ನಿತ್ಯ ತಲಾ 10 ಕಿಮೀನಂತೆ 75 ಕೀಮಿ ಅಂತರದವರೆಗೆ ಆಲಮಟ್ಟಿಯಿಂದ ತಾಳಿಕೋಟೆವರೆಗೆ ಯುವಜನರ ಸಂಕಲ್ಪ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ, ಶಾಸಕ ಎ.ಎಸ್‌..ಪಾಟೀಲ ನಡಹಳ್ಳಿ ಹೇಳಿದರು. 

ಅವರು ಪಟ್ಠಣದಲ್ಲಿ ನಡೆದ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯರ ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣ ಮಹೋತ್ಸವ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು, ಅ.5 ರಂದು ಆಲಮಟ್ಟಿಯ ಹರ್ಡೆಕರ್ ಮಂಜಪ್ಪನವರ ಸ್ಮಾರಕದಲ್ಲಿ ನಡಿಗೆಗೆ ಚಾಲನೆ ನೀಡಲಾಗುತ್ತದೆ. ನಡಿಗೆಯ ಮಾರ್ಗ ಮಧ್ಯೆ ಅಲ್ಲಲ್ಲಿ ದೇಶಕ್ಕಾಗಿ ಅರೆ​‍್ಣಗೈದವರ ಸ್ಮರಣೆ ನಡೆಯುತ್ತದೆ. ನಡಿಗೆಯಲ್ಲಿ ಪಾಲ್ಗೊಳ್ಳುವ ಯುವಜನರಿಗೆ ಬಿಳಿ ಸಮವಸ್ತ್ರ, ತ್ರೀವರ್ಣ ಮಾದರಿಯ ಟೋಪಿ, ರಾಷ್ಟ್ರಧ್ವಜ ನೀಡಲಾಗುತ್ತದೆ. ಸಂಕಲ್ಪ ನಡಿಗೆಯ ಅ.12 ರಂದು ತಾಳಿಕೋಟೆಯಲ್ಲಿ ಅಂತ್ಯಗೊಳ್ಳುತ್ತದೆ. ಇದರ ಮಧ್ಯೆ ಅ.8 ರಂದು ಮುದ್ದೇಬಿಹಾಳಕ್ಕೆ ಬರುತ್ತದೆ. ಕಾಲೇಜು, ಹೈಸ್ಕೂಲ್ ವಿದ್ಯಾರ್ಥಿಗಳು, ನಾಗರೀಕರು ಪಾಲ್ಗೊಳ್ಳುತ್ತಿದ್ದಾರೆ. 12ರಂದು ತಾಳಿಕೋಟೆಯಲ್ಲಿ 13ರಂದು ನಾಲತವಾಡದಲ್ಲಿ 14ರಂದು ಮುದ್ದೇಬಿಹಾಳದಲ್ಲಿ ಅತ್ಯದ್ಭುತ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ದೇಶದ ವಿವಿಧೆಡೆಯ 300 ಜನ ಕಲಾವಿದರು, ದೆಹಲಿ, ಬೆಂಗಳೂರು, ರಾಜಸ್ಥಾನ, ಮುಂಬೈನ ವಿಶೇಷ ಕಲಾವಿದರನ್ನು ಈಗಾಗಲೇ ಬುಕ್ ಮಾಡಲಾಗಿದೆ. ದೇಶದಲ್ಲಿ ಎಷ್ಟು ಸಂಗೀತ ಕಾರ್ಯಕ್ರಮ ನೀಡಿದವರಿದ್ದಾರೆಯೋ ಅವರೆಲ್ಲರೂ ಇಲ್ಲಿಗೆ ಬರಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕದ ರೂಪಕಗಳು ನಡೆಯುತ್ತವೆ. ಕಾರಿನ ಎಲ್ಲ ಹಿರಿಯರು ಸೇರಿ ಜವಾಬ್ದಾರಿವಹಿಸಿಕೊಂಡು. ಯಶಸ್ವಿಗೊಳಿಸಬೇಕು. ನನಗೆ ಸಾಹಿತ್ಯದ ಹುಚ್ಚು ಇರೋದರಿಂದ ಚಿಂದೋಡಿ ಬಂಗಾರೇಶ ಅವರೊಡಗೂಡಿ ನಾನೇ ಸಾಹಿತ್ಯ ರಚಿಸಿ ದೇಶಭಕ್ತಿ ಗೀತೆ ಹಾಡಿಸಿದ್ದೇನೆ. ಭವಿಷ್ಯದ ನಾಡ ಕಟ್ಟುವ ಯುವಕರಲ್ಲಿ ದೇಶದ ಕಿಚ್ಚು ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ನಡಿಗೆಯಾದ್ಯಂತ ನನ್ನದಾಗಲಿ ಅಥವಾ ಪಕ್ಷದ ನಾಯಕರದಾಗಲಿ ಯಾವುದೇ ಪೋಸ್ಟ್‌ರಗಳು, ಭಾವಚಿತ್ರಗಳು ಇರುವದಿಲ್ಲ. ದೇಶಕ್ಕಾಗಿ ವೀರ ಮರಣ ಅರ​‍್ಿಸಿದ ಸೈನಿಕರು, ಸ್ವಾತಂತ್ರ ಹೋರಾಟಗಾರರ ಭಾವಚಿತ್ರಗಳು, ಪೊಸ್ಟ್‌ರಗಳು ಇರಲಿವೆ ಎಂದರು. 

ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ 11 ರಿಂದ 17 ರವರೆಗೆ ಹರ್ ಫರ್ ತಿರಂಗಾ ಪ್ರತಿ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸೋ ಸಂಕಲ್ಪವನ್ನು ಯಶಸ್ವಿಗೊಳಿಸಲಾಗುತ್ತದೆ. ಮತಕ್ಷೇತ್ರ ವ್ಯಾಪ್ತಿಯಲ್ಲಿ 1 ಲಕ್ಷ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸೋ ಕಾರ್ಯ ನಡೆಯಲಿದೆ ಎಂದರು. 

ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯರು ಮಾತನಾಡಿ. ಯುವಜನ ಸಂಕಲ್ಪ ನಡಿಗೆ ಕಾರ್ಯಕ್ರಮವನ್ನು ಶ್ಲಾಘಿಸಿ, ದೇಶ ಭಕ್ತಿ ಮೂಡಿಸುತ್ತಿರುವ ಕಾರ್ಯ ಆಗಬೇಕಿದೆ. ಅಂತಹ ಕಾರ್ಯ ಮಾಡುತ್ತಿರುವ ಎ.ಎಸ್‌.ಪಾಟೀಲರು ಅಭಿನಂದನಾರ್ಹರು ಎಂದರು. 


ಸುದ್ದಿ ಓದಿ