ರಾಣೆಬೆನ್ನೂರ

ಅಭಯಾರಣ್ಯದಲ್ಲಿ ಯುವ ಜೀವನ ಕೌಶಲ್ಯ, ಸಾಮರ್ಥ್ಯ ಶಿಬಿರ

ಅಭಯಾರಣ್ಯದಲ್ಲಿ ಯುವ ಜೀವನ ಕೌಶಲ್ಯ, ಸಾಮರ್ಥ್ಯ ಶಿಬಿರ

ರಾಣೆಬೆನ್ನೂರು 11:  ನಗರ ಹೊರವಲಯ ಗಂಗಾಜಲ ಕೃಷ್ಣಮೃಗ ಅಭಯಾರಣ್ಯದಲ್ಲಿ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಮತ್ತು ಬೆಂಗಳೂರು   ಟೆರೆ ಡೆಸ್ ಹೋಮ್ಸ್‌ ಸಂಸ್ಥೆಯು, ಯುವಕ-ಯುವತಿಯರಿಗಾಗಿ ಮೂರು ದಿವಸಗಳ ಕಾಲ  ಜೀವನ ಕೌಶಲ್ಯ ಹಾಗೂ ಸಾಮರ್ಥ್ಯ  ತರಬೇತಿ ಕಾರ್ಯಾಗಾರವು, ಆಯೋಜಿಸಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ಸಂಸ್ಥೆಯ  ತಜ್ಞ ಸಂಜೀವ್ ಕುಮಾರ್ ಅವರು ಮಾತನಾಡಿ, ಬದುಕಿನಲ್ಲಿಒಂದಿಲ್ಲ ಒಂದು ರೀತಿಯಲ್ಲಿ ಹಲವು ಬಗೆಯ  ಸಮಸ್ಯೆಗಳು ಇರುವುದು ಬರುವುದು ಸಹಜ. ಸಮಸ್ಯೆಗಳ ಬಗ್ಗೆ ಚಿಂತಿಸದೆ.ಅದರ ಪರಿಹಾರದ ಬಗ್ಗೆ ಚಿಂತನೆ ನಡೆಸಿದರೆ,  ಸಮಾಜದಲ್ಲಿ ವ್ಯಕ್ತಿತ್ವವನ್ನು ರೂಪಿಸಿಕೊಂಡು ಬದುಕಿ, ಬಾಳಲು ಸಾಧ್ಯವಾಗುವುದು ಎಂದರು.ಯುವ ಜನಾಂಗದೇಶದ ಭವಿಷ್ಯ, ಭವಿಷ್ಯದ ಭದ್ರತೆ ಜೊತೆಗೆ ವ್ಯಕ್ತಿಗತ ಭದ್ರತೆಯು ಅಗತ್ಯ, ಈ ಹಿನ್ನೆಲೆಯಲ್ಲಿ, ಜೀವನ ಕೌಶಲ್ಯವನ್ನು ನೀಡುವ  ಇಂತಹ ಶಿಬಿರಗಳು ಬದುಕಿನ ಹೊಸ ಭರವಸೆಗಳನ್ನು ಹುಟ್ಟಿಸಿ, ಇತರರಂತೆ ನಾವು ಸಹ  ಜೀವನ ಸಾಗಿಸಬೇಕು ಎನ್ನುವ ಮಹಾ ಪ್ರೇರಣೆ ಇದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ವನಸಿರಿ ಸಂಯೋಜನಾಧಿಕಾರಿ ಎಸ್‌ಎಡಿ ಬಳಿಗಾರ್ ಅವರು, ಸಾರ್ವಜನಿಕ ಸೇವೆಗೆ ತೊಡಗಿಸಿಕೊಂಡಿರುವ ಸಂಸ್ಥೆಯು  ಸಾಮಾಜಿಕ,ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಓದ್ಯೋಗಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತದೆ . ಎಂದರು. ಕಾರ್ಯಾಗಾರದಲ್ಲಿ ಜಿಲ್ಲೆ, ಬ್ಯಾಡಗಿ, ಹಿರೆಕೇರೂರ ಹಾಗೂ ರಾಣೇಬೆನ್ನೂರು ನಗರದ ವಿವಿಧ ಕಾಲೇಜಿನ ಮತ್ತು ಕೊಳಚೆ ಪ್ರದೇಶಗಳ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಾಗಾರವನ್ನು ರೋಟರಿ ಸಂಸ್ಥೆಯ ಅಧ್ಯಕ್ಷ ಡಾ ಎಂ ಎಂ ಅನಂತ ರೆಡ್ಡಿ ಉದ್ಘಾಟಿಸಿ ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿ ರಾಮಚಂದ್ರ.ಜಿ.ಎಸ್ ,  ಛಾಯಾಗ್ರಾಹಕ ನಾಮದೇವ ಕಾಗದಗಾರ,  ಮಂಜುನಾಥ ಬಿದರಿ, ತರನುಮ್ ಖತೀಬ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ