ಗೋಕಾಕ್

ಯುವತಿಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ: ನಿರ್ದೇಶಕ ರಾಹುಲ್

ಯುವತಿಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ: ನಿರ್ದೇಶಕ ರಾಹುಲ್

ಗೋಕಾಕ: ಇಂದಿನ ತ್ವರಿತವಾಗಿ ಬೆಳೆಯುತ್ತಿರುವ ಸಮಾಜದಲ್ಲಿ ಯುವತಿಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು, ಕುಟುಂಬ ನಿರ್ವಹಣೆ ಪುರುಷರಿಂದ ಮಾತ್ರ ಸಾದ್ಯಾವಾಗುತ್ತಿಲ್ಲ ಕಾರಣ ಕುಟುಂಬದ ನಿರ್ವಹಣೆ ಜೊತೆಗೆ ಸಮಾಜದ ಅಭಿವೃದ್ಧಿಗೆ ಯುವತಿಯರು ಕೈಜೊಡಿಸಬೇಕೆಂದು ಸತೀಶ ಶುಗರ್ಸ ನಿರ್ದೇಶಕ ರಾಹುಲ್ ಜಾರಕಿಹೊಳಿ ಅಭಿಪ್ರಾಯಪಟ್ಟರು. 

ಗೊಕಾಕ ನಗರದ ಎನ್ ಎಸ್ ಎಪ್ ಕಾಲೇಜಿನಲ್ಲಿ ವಿಹಾನ ಸಂಸ್ಥೆ, ರೂರಲ್ ಶೋರಸ್ ಸಂಸ್ಥೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ 4 ತಿಂಗಳ ಕೌಶಲ್ಯ ತರಬೇತಿಯ ಸಮಾರೋಪ ಹಾಗೂ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಮಹಿಳೆಯರು ಕೂಡಾ ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿ ಸಮಾನವಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ನಗರ ಪ್ರದೇಶಗಳಲ್ಲಿ ಯುವತಿಯರಿಗೆ ಸಾಕಷ್ಟು ಅವಕಾಶಗಳಿರುತ್ತವೆ ಆದರೆ ಗ್ರಾಮೀಣ ಭಾಗದ ಯುವತಿಯರಿಗೆ ಈ ರೀತಿಯ ತರಬೇತಿಗಳನ್ನು ಆಯೋಜಿಸುತ್ತಿರುವುದು ಸಂತಸ ತಂದಿದೆ ಎಂದರು.

ವಿಹಾನ್ ಸಂಸ್ಥೆಯ ದಕ್ಷೀಣ ವಲಯದ ಮುಖ್ಯ ಅಧಿಕಾರಿ ಶರ್ಲಿನ್ ಎ ಮಾತನಾಡಿ ವಿಹಾನ ಸಂಸ್ಥೆಯು ಸ್ಥಳಿಯ ಸ್ವಯಂ ಸೇವಾ ಸಂಸ್ಥೆಗಳ ಸಹಾಯದಿಂದ  ಯುವತಿಯರಿಗೆ ಹಲವಾರು ಕೋರ್ಸಗಳ ಮೂಲಕ ತರಬೇತಿಗಳನ್ನು ನೀಡಿ ಅವರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸುತ್ತಿದೆ ಅದರ ಸದುಪಯೋಗವನ್ನು ಯುವತಿಯರು ಪಡೆದುಕೊಂಡು ಸಮಾಜದಲ್ಲಿ ಉತ್ತಮ ಸ್ಥಾನಮಾನ ಹೊಂದಬೇಕೆಂದರು.

ಇನ್ನೋರ್ವ ಅತಿಥಿಗಳಾದ ಹೋಮ್ ನರ್ಸಿಂಗ್  ತರಬೇತಿಯ ತರಬೇತುದಾರರಾದ ರಾಜಶ್ರೀ ಮುತಾಲಿಕ ದೇಸಾಯಿ ಮಾತನಾಡಿ ಸಮಾಜದಲ್ಲಿ ಸ್ತ್ರೀಯರು ದುಡಿಯುವುದು ಅನಿವಾರ್ಯವಾಗಿದೆ ಇಂತಹ ಕೌಶಲ್ಯ ತರಬೇತಿಗಳನ್ನು ಪಡೆಯುವ ಮೂಲಕ ಸ್ವಯಂ ಉದ್ಯೋಗ ಮಾಡಿಕೊಂಡು ಅಥವಾ ಉದ್ಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದರು.

ಕಾರ್ಯಕ್ರಮದಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನದ ಜುಬೇರ ಎಂ, ಮಹಿಳಾ ಕಲ್ಯಾಣ ಸಂಸ್ಥೆಯ ಸುರೇಖಾ ಡಿ ಪಾಟೀಲ ತರಬೇತುದಾರರಾದ ಅರ್ಚನಾ ಬಡಿಗೇರ, ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ನಿರ್ಮಲಾ ಸಿ ನೀರೂಪಿಸಿದರು ರೇಖಾ ಬೆನಿವಾಡ ವಂದಿಸಿದರು.ತರಬೇತಿ ಪಡೆದ 108 ಜನ ಯುವತಿಯರಿಗೆ ಪ್ರಮಾಣಪತ್ರ ನೀಡುವುದರೋಂದಿಗೆ ಆಯ್ದ ಯುವತಿಯರಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ನಿಡಿದರು 

ಸುದ್ದಿ ಓದಿ