ಸ್ವಾತಂತ್ರ್ಯ ಹೋರಾಟವನ್ನು ಯುವಜನತೆ ಮರೆಯಬಾರದು: ನಡಹಳ್ಳಿ
ತಾಳಿಕೋಟೆ13: ತಮ್ಮ ಸರ್ವಸ್ವವನ್ನೂ ಸಮರ್ಿಸಿ ಸ್ವಾತಂತ್ರ-್ಯ ಸಂಗ್ರಾಮದಲ್ಲಿ ಭಾಗಿಯಾದ ಸ್ವಾತಂತ್ರ-್ಯ ಸೇನಾನಿಗಳ ಜೀವನಗಾಥೆಯು ಇಂದಿನ ಯುವಪೀಳಿಗೆಗೆ ಅರಿತುಕೊಳ್ಳುವ ಅವಶ್ಯಕತೆ ಇದೆ. ಸ್ವಾತಂತ್ರ್ಯ ನಮಗೆ ಸುಮ್ಮನೆ ಸಿಕ್ಕಿಲ್ಲ. ಸ್ವಾತಂತ್ರ-್ಯ ಚಳುವಳಿಯ ವಿವಿಧ ತೊರೆಗಳನ್ನು ನಾವು ಅರಿತುಕೊಳ್ಳಬೇಕು ಎಂದು ಮುದ್ದೇಬಿಹಾಳ ಶಾಸಕ,ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಅವರು ಪಟ್ಟಣದ ವಿಕಾಸ್ ಪಬ್ಲಿಕ್ ಸ್ಕೂಲ್‌ದಲ್ಲಿ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಸ್ವಾತಂತ್ರ-್ಯಕ್ಕಾಗಿ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಪೂರ್ಣ ಸ್ವರಾಜ್ಯ, ಆಝಾದ್ ಹಿಂದ್ ಫೌಜ್‌ರ ದಿಲ್ಲಿ ಚಲೋ, ಕ್ವಿಟ್ ಇಂಡಿಯಾ ಚಳುವಳಿ, ಮಂಗಲ್ ಪಾಂಡೆ, ತಾತ್ಯಾ ಟೋಪಿ, ರಾಣಿ ಲಕ್ಷಿ-್ಮ ಬಾಯಿ, ಚಂದ್ರಶೇಖರ್ ಆಝಾದ್, ಭಗತ್ ಸಿಂಗ್‌ರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. ಇತಿಹಾಸವನ್ನು ಅರಿಯದವರು ಇತಿಹಾಸವನ್ನು ಸೃಷ್ಠಿಸಲಾರರು. ಈ ನಿಟ್ಟಿನಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶದೆಲ್ಲಡೆ ನಡೆದ ಸ್ವಾತಂತ್ರ-್ಯ ಹೋರಾಟ ಚಳುವಳಿಗಳನ್ನು ಸ್ಮರಿಸುವ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದರ ಮೂಲಕ ಸ್ವಾಂತಂತ್ರ ಸೇನಾನಿಗಳ ಪರಿಚಯ ಮಾಡಿಕೊಡಲಾಗುವದು ಎಂದರು.
ಸಾಹಿತಿ ಅಶೋಕ ಹಂಚಲಿ ಮಾತನಾಡಿ, ಸ್ವಾತಂತ್ರ-್ಯ ಸಿಕ್ಕು 75 ನೇ ವರ್ಷದ ಅಂಗವಾಗಿ ಪಟ್ಟಣದಲ್ಲಿ ಆಜಾದಿ ಕಿ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಿ, ಸ್ವಾತಂತ್ರ ಹೋರಾಟಗಾರರಿಂದ ನಾವು ಸ್ಪೂರ್ತಿಯನ್ನು ಪಡೆದಿದ್ದು, ಸ್ವಾಂತಂತ್ರ ಚಳುವಳಿಗಳ ಕುರಿತು ಮೆಲುಕು ಹಾಕಿದರು.
ಸಾನಿಧ್ಯವನ್ನು ದೇವಪುರ ಜಡಿಶಾಂತಲಿಂಗೇಶ್ವರ ಸಂಸ್ಥಾನಮಠದ ಶಿವಮೂರ್ತಿ ಶಿವಾಚಾರ್ಯರು, ಬ್ಯಾಡಗಿಹಾಳದ ಸಿದ್ರಾಮೇಶ್ವರ ಸ್ವಾಮಿಗಳು ಸಾನಿಧ್ಯವಹಿಸಿದ್ದರು. ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ರಾಮನಗೌಡ ಬಾಗೇವಾಡಿ ಅಧ್ಯಕ್ಷತೆ ವಹಿಸಿದ್ದರು. ಆದ್ಯಾತ್ಮಕ ಚಿಂತಕಿ ಕಾಶಿಬಾಯಿ ಭಂಟನೂರ, ಖ್ಯಾತ ವೈಧ್ಯ ಡಾ.ವಿ.ಎಸ್.ಕಾರ್ಚಿ, ಯುವ ಉದ್ಯಮಿ ವಿರೇಶ ಪಾಟೀಲ, ಡಿಸಿಸಿ ಬ್ಯಾಂಕ ನಿರ್ದೇಶಕ ಸೋಮನಗೌಡ ಬಿರಾದಾರ, ನಿವೃತ್ತ ಪ್ರಾಧ್ಯಾಪಕ ಪ್ರೋ.ಶೇಷಾಚಲ ಹವಾಲ್ದಾರ, ಪುರಸಭೆ ಸದಸ್ಯ ಜಯಸಿಂಗ ಮೂಲಿಮನಿ, ಶಫಿಕ ಮುರಾಳ, ರಾಜೇಂದ್ರ ಕುಮಾರ ನಾಯಕ, ನಾಗಣ್ಣ ಶಾಬಾದಿ, ನೀಲಮ್ಮ ನಾಗರಬೆಟ್ಟ, ಪುರಸಭೆ ಮುಖ್ಯಾಧಿಕಾರಿ ರಮೇಶ ನಾಯಕ, ಸುಭಾಸ ಬಿರಾದಾರ ಸೇರಿದಂತೆ ಇತರರು ಇದ್ದರು
ವಿಕಾಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮಹಾಂತೇಶ ಮುರಾಳ ಸ್ವಾಗತಿಸಿದರು. ಸಾಹೇಬಗೌಡ ಬಿರಾದಾರ ನಿರೂಪಿಸಿದರು. ಅಶೋಕ ಸಜ್ಜನ ವಂದಿಸಿದರು.