ರಾಣೆಬೆನ್ನೂರ

ಯುವಕರು ಭವಿಷ್ಯದ ರೂವಾರಿಗಳು ಇತಿಹಾಸ ಅರಿತು ಸಾಗಬೇಕು: ನೇಕಾರ

ಯುವಕರು ಭವಿಷ್ಯದ ರೂವಾರಿಗಳು ಇತಿಹಾಸ ಅರಿತು ಸಾಗಬೇಕು:  ನೇಕಾರ
ರಾಣೀಬೆನ್ನೂರ ಮಾರುತಿ ನಗರದ ಸ್ವಾಮಿ ವಿವೇಕಾನಂದ ಯೋಗ ಕೇಂದ್ರದಲ್ಲಿ ನಡೆದ ಭಗತ್‍ಸಿಂಗ್, ರಾಜಗುರು, ಸುಖದೇವ್ ಅವರ ಬಲಿದಾ

ರಾಣೇಬೆನ್ನೂರು 24: ಇಲ್ಲಿನ ಮಾರುತಿ ನಗರದ ಸ್ವಾಮಿ ವಿವೇಕಾನಂದ ಯೋಗ ತರಬೇತಿ ಕೇಂದ್ರದ ಆಶ್ರಯದಲ್ಲಿ ಮಂಗಳವಾರ  ಭಗತ್‍ಸಿಂಗ್, ರಾಜಗುರು ಮತ್ತು ಸುಖದೇವ್ ಇವರ ಬಲಿದಾನ ದಿವಸ ಯುವ ಮಾಹಿತಿ ಜಾಗೃತಿ ಕಾರ್ಯಕ್ರಮವು ಅತ್ಯಂತ ಸರಳವಾಗಿ ನೆರವೇರಿಸಲಾಯಿತು. ವೀರ ಯೋಧರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದ ಕೇಂದ್ರದ ಅಧ್ಯಕ್ಷ ಯೋಗ ಸಾಧಕ ಪಾಂಡುರಂಗಪ್ಪ ಪೂಜಾರ ಅವರು ಅಧ್ಯಕ್ಷತೆ ವಹಿಸಿದ್ದರು. 

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶಿಕ್ಷಕ ವಾಸಪ್ಪ ನೇಕಾರ ಅವರು ಮಾತನಾಡಿ ಭಾರತ ದೇಶ ಬಹುಮುಖಿ ಸಮಾಜ ವನ್ನು ಹೊಂದಿದ ಏಕೈಕ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇಂದು ನಾವೆಲ್ಲರೂ ಶಾಂತಿ, ನೆಮ್ಮದಿ ಮತ್ತು ಭಾವೈಕ್ಯತೆಯಿಂದ ಬದುಕನ್ನು ಸಾಗಿಸುತ್ತಾ ಇರಬೇಕಾಗಿದ್ದರೆ ನಮ್ಮ ವೀರಯೋಧರು ಸ್ವಾತಂತ್ರಯೋಧರು ಮಾಡಿದ ತ್ಯಾಗ ಬಲಿದಾನದವೇ ಪ್ರಮುಖ ಕಾರಣವಾಗಿದೆ. ಭವಿಷ್ಯದ ಯುವಜನಾಂಗವು ದೇಶದ ಮತ್ತು ಭವ್ಯ ಭಾರತದ ಇತಿಹಾಸವನ್ನು ಅರಿತುಕೊಂಡು ಮುನ್ನಡೆದಾಗ ಮಾತ್ರ ಮತ್ತಷ್ಟು ಅಭಿವೃದ್ಧಿಪಡಿಸಲು ಸಾಧ್ಯವಾಗುವುದು ಎಂದ ಅವರು ನಿತ್ಯದ ಬದುಕಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಅಳವಡಿಸಿಕೊಂಡು ಸಾಗಬೇಕು ಎಂದರು. 

ಕಾರ್ಯಕ್ರಮದಲ್ಲಿ ನಿಸ್ಸೀಮಪ್ಪ ಕುಸಗೂರ. ಸುರೇಶ ಅರ್ಕಾಚಾರಿ, ಚಂದ್ರಕಾಂತ ಅತಡಕರ, ನೇತ್ರಮ್ಮ ಹಮ್ಮಗಿ, ಚಂದನಾ ಅಮಾಸಿ ಸೇರಿದಂತೆ ಯೋಗ ಕೇಂದ್ರದ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ