ರಾಷ್ಟ್ರ ನಿರ್ಮಾಣದಲ್ಲಿ ಯುವಪಡೆಯ ಸಮಾಜಮುಖಿ ಕಾರ್ಯಗಳು ಪ್ರಮುಖವಾಗುತ್ತವೆ:ರಡ್ಡೇರ
ತಾಳಿಕೋಟೆ:ಯೋಜನೆ ಮತ್ತು ಯೋಚನೆ ಸರಿಯಾದ ದಿಕ್ಕಿನಲ್ಲಿ ಸಾಗಿದಾಗ ಮಾತ್ರ ಸಂಸ್ಥೆಗಳು ಯಶಸ್ವಿಯಾಗುತ್ತವೆ. ರಾಜಕೀಯ ಹಿಡಿತದಲ್ಲಿರದೇ ಸ್ವತಂತ್ರವಾಗಿ ಕಾರ್ಯನಿರ್ವಹಿಸಿದ ಹಲವು ಸಂಸ್ಥೆಗಳು ಉನ್ನತ ಸ್ಥಾನದಲ್ಲಿ ಇವೆ ಎಂದು ಹುಬ್ಬಳ್ಳಿಯ ವರದಶ್ರೀ ಫೌಂಡೇಶನ್ ಸಂಸ್ಥಾಪಕ ಮಲ್ಲಿಕಾರ್ಜುನ ರಡ್ಡೇರ ಹೇಳಿದರು.
ಅವರು ಪಟ್ಟಣದ ವಿಠ್ಠಲ ಮಂದಿರದಲ್ಲಿ ನಡೆದ ಪರಿಶ್ರಮ ಗೆಳೆಯರ ಬಳಗ(ರಿ), ವಿವಿಧೋದ್ದೇಶಗಳ ಸೇವಾ ಸಮಿತಿ ಪ್ರಾರಂಭೋತ್ಸವ ಹಾಗೂ ಗುರು ವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ಸಂಸ್ಥೆ ಕಟ್ಟುವಲ್ಲಿ ತ್ಯಾಗ ಇರಬೇಕು. ಯಾವುಧೇ ಸಮಾಜಮುಖಿ ಕಾರ್ಯ ಮಾಡುವಾಗ ಸ್ವಯಂ ಸೇವಕರು ಸಂಪೂರ್ಣವಾಗಿ ತೊಡಗಿಕೊಳ್ಳಬೇಕು. ಪರೋಪಕಾರ ಧರ್ಮವನ್ನು ಮರೆಯಬಾರದು. ರಾಜಕೀಯ ಪಕ್ಷಗಳು ಹಿಡಿತದಿಂದ ಸಂಸ್ಥೆಗಳ ಹೋಗಬಾರದು. ಯಾವ ಸಂಘಟನೆ ಹಾಗೂ ಸಂಸ್ಥೆಗಳು ರಾಜಕೀಯ ಹಿಡಿತದಲ್ಲಿ ಇವೆಯೋ ಅವುಗಳು ಯವುದೇ ಬೆಳವಣಿಗೆ ಕಂಡಿಲ್ಲ. ಸಂಘಟನೆ ಮಾಡುವಲ್ಲಿ ನಾನು ಎನ್ನುವ ಭಾವವನ್ನು ಬಿಟ್ಟು ಕಾರ್ಯನಿರ್ವಹಿಸಿ ಎಂದರು.
ಸಾನ್ನಿಧ್ಯವನ್ನು ವಹಿಸಿ ಮಾತನಾಡಿದ ಗುಂಡಕನಾಳ ಬೃಹನ್ಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನೂತನವಾಗಿ ಹುಟ್ಟಿಕೊಂಡಿರುವ ಪರಿಶ್ರಮ ಗೆಳೆಯರ ಬಳಗ ಹೆಸರಿಗೆ ತಕ್ಕಂತೆ ಪರಿಶ್ರಮ ಹಾಕಿ ಬಡ ವಿದ್ಯಾರ್ಥಿಗಳಿಗೆ, ಪಟ್ಟಣದ ಅಭಿವೃದ್ಧಿಗೆ ನೆರವಾಗಿ ಮಾದರಿ ಸಂಸ್ಥೆಯಾಗಿ ಬೆಳೆಯಲಿ ಎಂದು ಹಾರೈಸಿದರು. ಸನ್ಮಾನಿತ ಶಿಕ್ಷಕರ ಪರವಾಗಿ ಮಾತನಾಡಿದ ಬಿ.ಎಂ.ಅರಮನಿ, ನಿಷ್ಕಾಮ ಕರ್ಮ ಗೆಳೆಯರ ಬಳಗ ಇದು ಇದು ಸಮಾಜದ ಸೇವೆ, ಕುಟುಂಬದ ಸೇವೆ ವಿಶಾಲವಾದ ಗೂವದು, ನಾವು ಎಲ್ಲರಿಗೂ ವಿದ್ಯೆ ನೀಡಿದ್ದೇವೆ. ಎಂದರು.
ಪರಿಶ್ರಮ ಬಳಗದ ಅಧ್ಯಕ್ಷ ಪರಶುರಾಮ ಹಂಚಾಟೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣದ ಪಾಂಡುರಂಗ ವಿಠ್ಠಲ ದೇವಸ್ಥಾನದ ಅಧ್ಯಕ್ಷ ವಿ.ಎ.ಹಜೇರಿ ಇದ್ದರು. ಗುರು ವಂದನಾ ಕಾರ್ಯಕ್ರಮದಲ್ಲಿ ತಮ್ಮ ವಿದ್ಯಾ ಗುರುಗಳಾದ ಆರ್.ಆರ್.ಬಡಿಗೇರ, ಎಂ.ಎಸ್.ಬಿರಾದಾರ, ಎಸ್.ಡಿ.ಕರಜಗಿ, ಸಿ.ವಿ.ಮೆಣಸಿನಕಾಯಿ, ಶಿಕ್ಷಕಿಯರಾದ ಬಿ.ಆರ್.ಬಿರಾದಾರ, ಆರ್.ಕೆ.ಭುಸಾರೆ ಹಾಗೂ ಎಂ.ಆರ್.ಕುಲಕರ್ಣಿ ಅವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಪ್ರಕಾಶ ಸುರಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಸ್.ಕೇಸಾಪುರ ಸ್ವಾಗತಿಸಿದರು. ರಾಜಶೇಖರ ಹಿರೇಮಠ ನಿರೂಪಿಸಿದರು. ಅಂಬರೀಶ ಬಾಕಲಿ ವಂದಿಸಿದರು. ಕಾರ್ಯಕ್ರಮದಲ್ಲಿ ಪರಿಶ್ರಮ ಗೆಳೆಯರ ಬಳಗದ ಆಡಳಿತ ಮಂಡಳಿ ಸದಸ್ಯರು ಸಮಿತಿಯ ಸದಸ್ಯರು ಹಾಗೂ ಪ್ರಮುಖರು ಇದ್ದರು.