ಶಿಗ್ಗಾವ್

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಸಂಶಯಾಸ್ಪದ: ಖಾಜಿ

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಸಂಶಯಾಸ್ಪದ: ಖಾಜಿ

ಶಿಗ್ಗಾವಿ 6: ಇತ್ತೀಚೆಗೆ ನಡೆದಿದ್ದ ಭಾರತೀಯ ಯುವ ಕಾಂಗ್ರೆಸ್ ಚುನಾವಣೆಯ ರಾಜ್ಯ ಮತ್ತು ಜಿಲ್ಲಾವಾರು ಫಲಿತಾಂಶ ಫೆ. 4ರಂದು ಪ್ರಕಟವಾಗಿದ್ದು ಜಿಲ್ಲೆಯ ಅಧÀ್ಯಕ್ಷರ ಆಯ್ಕೆಯ ಫಲಿತಾಂಶವು ಅಕ್ರಮ ನಡೆದು ಸಂಶಯಕ್ಕೆ ಆಸ್ಪದ ಮಾಡಿಕೊಟ್ಟಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ತಹಮೀದ್‍ಖಾಜಿ ಆರೋಪಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಅತಿ ಹೆಚ್ಚು ಮತÀ ಗಳಿಸಿ ಗೆಲುವು ಸಾಧಿಸಿದ ನಿಷ್ಠಾವಂತ ಕಾರ್ಯಕರ್ತರನ್ನು ಪದಾಧಿಕಾರಿಗಳನ್ನಾಗಿ ಪರಿಗಣಿಸದೇ ವಾಮಮಾರ್ಗದ ಮೂಲಕ ಹಿರಿಯರ ಹಸ್ತಕ್ಷೇಪದಿಂದ ಹಾವೇರಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದರು.

ಇದೇ ಮೊದಲ ಬಾರಿಗೆ ಮೊಬೈಲ್ ಯ್ಯಾಪ್ ಮೂಲಕ ಯುವ ಕಾಂಗ್ರೆಸ್ ಸದಸ್ಯರ ನೋಂದಣಿ ಮತ್ತು ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಜ.12ರಿಂದ ಮೂರು ದಿನ ಜಿಲ್ಲಾವಾರು ಮತದಾನ ನಡೆದಿತ್ತು. ಕೆಲ ದಿನಗಳ ನಂತರ ಫಲಿತಾಂಶ ಘೋಷಣೆ ಮಾಡಲಾಗಿತ್ತು. ಆದರೆ, ರಾಜ್ಯ ಯುವ ಕಾಂಗ್ರೆಸ್ ಚುನಾವಣೆ ಉಸ್ತುವಾರಿ ಸಮಿತಿ ಫೆ.4 ರಂದು ಎರಡನೇ ಬಾರಿ ಫಲಿತಾಂಶ ಘೋಷಣೆ ಮಾಡಿ ಫಲಿತಾಂಶವನ್ನು ಅದಲು ಬದಲು ಮಾಡಲಾಗಿದೆ. ಮೊದಲನೆಯ ಫಲಿತಾಂಶದ ಘೋಷಣೆಯಲ್ಲಿ ಯಾವುದೇ ಮತ ತಿರಸ್ಕ್ರತಗೊಂಡಿರಲಿಲ್ಲ. ಆದರೆ, ಎರಡನೇ ಫಲಿತಾಂಶದಲ್ಲಿ 424 ಮತಗಳನ್ನು ತಿರಸ್ಕ್ರತಗೊಳಿಸಿ ಫಲಿತಾಂಶವನ್ನು ಅದಲು ಬದಲು ಮಾಡಲಾಗಿದೆ ಎಂದು ಆರೋಪಿಸಿರುವ ತಹಮೀದ್ ಖಾಜಿ, ಜಿಲ್ಲೆಯ ಕಾಂಗ್ರೆಸ್ ನಾಯಕರು ಈಗಾಗಲೇ ಆಯ್ಕೆಯಾಗಿದ್ದ ನಿಷ್ಠಾವಂತ ಕಾರ್ಯಕರ್ತರ ಬದಲಾಗಿ ತಮಗೆ ಬೇಕಾದ ಮುಖಂಡರ ಸಂಬಂಧಿಕರಿಗೆ ಮಣೆ ಹಾಕಿದೆ. ಈ ಕುರಿತು ಯುವ ಕಾಂಗ್ರೆಸ್ ರಾಷ್ಟ್ರೀಯ ಘಟಕಕ್ಕೂ ದೂರು ನೀಡಲಾಗಿದೆ. ಶೀಘ್ರ ಜಿಲ್ಲೆ ಕಾಂಗ್ರೆಸ್ ನಾಯಕರು ತಪ್ಪನ್ನು ಸರಿಪಡಿಸಿ ಚುನಾವಣೆಯಲ್ಲಿ ಹೆಚ್ಚು ಮತ ಪಡೆದ ಅರ್ಹರನ್ನು ಪದಾಧಿಕಾರಿಗಳನ್ನಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಬಂಕಾಪುರ ಶಹರ ಘಟಕದ ಅಧ್ಯಕ್ಷ ರಾಜೇಶ ಕಮ್ಮಾರ, ಅಬ್ದುಲ್ ಮಜೀದ ಕೊಲ್ಲಾಪುರ, ಆರ್ ಜಿ ಪಾಟೀಲ, ಮಂಜುನಾಥ ಮಣ್ಣಣ್ಣವರ, ಮಹ್ಮದನದೀಮ್ ಅರಳಿಕಟ್ಟಿ, ಇಬ್ರಾಹಿಂ ಚಳ್ಯಾಳ, ಮಹಮ್ಮದ ಖಾಸಿಮ ಲಾಲಾನವರ, ತಾಜುದ್ದೀನ್ ತಂಭಾಕವಾಲೆ ಮತ್ತಿತರರು ಉಪಸ್ಥಿತರಿದ್ದರು.

ಸವಣೂರಿನ 171, ಶಿಗ್ಗಾವಿಯ 151, ಹಾನಗಲ 102 ಮತಗಳನ್ನು ಉದ್ದೇಶಪೂರ್ವಕ ತಿರಸ್ಕರಿಸಲಾಗಿದೆ. 997 ಮತಪಡೆದ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. 693 ಮತಪಡೆದ ನನ್ನನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆಮಾಡಲಾಗಿದೆ. ತಿರಸ್ಕೃತಗೊಂಡ ಶಿಗ್ಗಾವಿ, ಸವಣೂರ, ಹಾನಗಲ ತಾಲೂಕಾ ಮತಗಳು ನನ್ನ ಅವಿರತ ಪರಿಶ್ರಮದಿಂದ ಸದಸ್ಯತ್ವ ಪಡೆದವರಾಗಿದ್ದು, ಆ ಮತಗಳು ತಿರಸ್ಕಾರಗೊಳ್ಳದೆ ಇದ್ದರೆ 11 ನೂರಕ್ಕಿಂತಲು ಹೆಚ್ಚು ಅಧಿಕ ಮತ ಪಡೆದು ನಾನೇ ಅಧ್ಯಕ್ಷ ಸ್ಥಾನ ಅಲಂಕರಿಸುತ್ತಿದ್ದೆ. ಆದ್ದರಿಂದ ಮತಗಳ ಮರು ಏಣಿಕೆ ನಡೆಯಬೇಕು.

ಮೊಹಮ್ಮದ ತಹಮಿದ ಖಾಜಿ 

ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ.



ಸುದ್ದಿ ಓದಿ