ನಿಮ್ಮ ಋಣ ತೀರಿಸಲು ಬದ್ಧನಾಗಿರುವೆ ಶಾಸಕ ಸೋಮನಗೌಡ
ತಾಳಿಕೋಟಿ 19: ನನ್ನ ಮೇಲೆ ವಿಶ್ವಾಸವಿರಿಸಿ ನನಗೆ ನಿಮ್ಮ ಸೇವೆ ಮಾಡುವ ಅವಕಾಶ ಕೊಟ್ಟಿದ್ದೀರಿ. ಪ್ರಾಮಾಣಿಕವಾಗಿ ನನ್ನ ಕರ್ತವ್ಯವನ್ನು ನಿರ್ವಹಿಸಿ ನಿಮ್ಮೆಲ್ಲರ ಋಣವನ್ನು ತೀರಿಸಲು ನಾನು ಬದ್ಧನಾಗಿದ್ದೇನೆ ಎಂದು ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ತಿಳಿಸಿದರು.ಮಂಗಳವಾರ ಮತಕ್ಷೇತ್ರದ ಮಾರ್ಕಬ್ಬಿನಹಳ್ಳಿ ಕ್ರಾಸದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಎಸ್.ಎಚ್.ಡಿ.ಪಿ. ಸಹಯೋಗದಲ್ಲಿ ಉಪವಿಭಾಗ ಸಿಂದಗಿ ಇವರು ಹಮ್ಮಿಕೊಂಡ 2021-22ನೇ ಸಾಲಿನ ರಾಜ್ಯ ಅಭಿವೃದ್ಧಿ ಯೋಜನೆ ಹಂತ -4ರ ಘಟ್ಟ 2 ರ ಅಡಿಯಲ್ಲಿ ರಾಜ್ಯ ಹೆದ್ದಾರಿ 41 ದ ಕಿ.ಮೀ. 93.60-100.23 ರವರೆಗಿನ ರಸ್ತೆ ಅಭಿವೃದ್ಧಿಯ ಸಾತಿಹಾಳ-ದೇ.ಹಿಪ್ಪರಗಿ ವರೆಗಿನ 6.91 ಕಿ.ಮೀ. 1100=00 ಲಕ್ಷ ಮೊತ್ತದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಸ್ತೆ ದೀರ್ಘಾವಧಿಯವರೆಗೆ ಉತ್ತಮ ಗುಣಮಟ್ಟದ್ದಾಗಿರುವಂತೆ ನೋಡಿಕೊಳ್ಳಬೇಕೆಂದು ನಾನು ಗುತ್ತಿಗೆದಾರರಿಗೆ ಆದೇಶಿಸುತ್ತೇನೆ. ಕಳಪೆ ಕಾಮಗಾರಿಗೆ ಅವಕಾಶ ನೀಡಿ ನಾನು ರಸ್ತೆ ನುಂಗುವ ಶಾಸಕನೆಂದು ಕರೆಯಿಸಿಕೊಳ್ಳಲು ಬಯಸುವದಿಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇನೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ನನಗೆ ಬೇಕು ಎಂದರು.ಬಿಜೆಪಿ ಪ್ರಧಾನ ಕಾರ್ಯದರ್ಶಿ ರಮೇಶ ಮಸಿಬನಾಳ, ಗಣ್ಯರಾದ ಎಂ.ಆರ್. ಪಾಟೀಲ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ತಾರಾನಾಥ ರಾಠೋಡ ಮಾತನಾಡಿದರು.ಮಂಡಲ ಪ್ರದಾನ ಕಾರ್ಯದರ್ಶಿ ಭೀಮನಗೌಡ ಲಚ್ಯಾಣ, ಗ್ರಾ.ಪಂ. ಅಧ್ಯಕ್ಷ ಮಹಾಂತಗೌಡ ಪಾಟೀಲ, ಬಿ.ಕೆ. ಪಾಟೀಲ, ಶ್ರೀಶೈಲ ರೂಡಗಿ, ಅಶೋಕಗೌಡ ಪಾಟೀಲ, ಮುಖ್ಯೋಪಾಧ್ಯಾಯಿನಿ ಉಮಾದೇವಿ, ಅಬ್ದುಲ್ ಬಳಗಾನೂರ, ಗುತ್ತಿಗೆದಾರ ಎಸ್.ಎಚ್. ಪಾಟೀಲ (ಪಡಗಾನೂರ), ಶರಣಗೌಡ ಪಾಟೀಲ ಇದ್ದರು