ಸಾಧನೆಗೆ ಯೋಗ ಅವಶ್ಯ: ಮಂಜುನಾಥ ಕುನ್ನೂರ
ಶಿಗ್ಗಾವಿ 22: ಸಾಧನೆಗೆ ಯೋಗ ಅವಶ್ಯ, ತಲೆತಲಾಂತರದಿಂದ ಬಂದ ಯೋಗವನ್ನು ನಾವು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.
ಸೋಮವಾರ ಪಟ್ಟಣದ ಸಂಗನಬಸವ ಮಂಗಲ ಭವನದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಭಾಜಪ ವತಿಯಿಂದ ಹಮ್ಮಿಕೊಂಡ ಯೊಗ ಶಿಭಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಾನವನ ವಿಕಾಸವಾಗಬೇಕಾದರೆ ಕೆಲವು ಘಂಟೆಗಳಲ್ಲಿ ಏನಾದರೂ ಸಾಧಿಸಬೇಕೆಂದರೆ ಅದಕ್ಕೆ ಯೋಗದಿಂದ ಸಾದ್ಯ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ, ಯೋಗದಿಂದ ದೇಹದ ಮೇಲಿನ ಎಲ್ಲ ಹಿಡಿತ ಸಾಧಿಸಲು ಸಾದ್ಯ ಎಂದರು.
ಭಾಜಪ ತಾಲೂಕಾದ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ರೋಗಮುಕ್ತ ಜೀವನಕ್ಕೆ ಜೀವನಕ್ಕೆ ಯೋಗ ಅವಶ್ಯ ಎಂದರು.
ಶಿಭಿರದ ಸಾನಿದ್ಯವಹಿಸಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ ಯೋಗದಲ್ಲಿ ಎಲ್ಲವೂ ಇದೆ, ಶಿವಯೋಗದಿಂದ ನಾವು ಶಾಂತಿ ಪಡೆದರೆ ದೇಹಕ್ಕೂ ಯೋಗ ಶಿಭಿರ ಅವಶ್ಯ, ಧರ್ಮದಲ್ಲಿ ಏನಾದರೂ ಸಾಧಿಸಬೇಕೆಂದರೆ ಯೊಗ ಅವಶ್ಯವಾಗಿ ಬೇಕು, ದೇಶದಲ್ಲಿ ವಿಷಮ ಸ್ಥಿತಿಯನ್ನ ಮನುಷ್ಯ ಸೃಷ್ಟಿ ಮಾಡಿಕೊಂಡಿದ್ದಾನೆ ಅದನ್ನ ಅಳಿಸುವ ಶಕ್ತಿ ಈ ಯೋಗಕ್ಕೆ ಇದೆ, ಒತ್ತಡದ ಜೀವನದಲ್ಲಿ ನಾವು ಅದನ್ನೆಲ್ಲಾ ಮರೆತ ಭಾಗವಾಗಿ ಈ ಕೋರೋನಾದಂತಹ ಶಕ್ತಿ ನಮ್ಮನ್ನ ಆಳುತ್ತಿದೆ ಆದ್ದರಿಂದ ರೋಗ ನಿರೋಧಕ ಶಕ್ತಿ ಬೇಕೆಂದರೆ ಯೋಗವೂ ಅವಶ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಯೋಗ ಕಲಾವಿದೆ ಶೋಬಾ ಅಳಗವಾಡಿ ಯೋಗ ಶಿಬಿರ ನಡೆಸಿಕೊಟ್ಟರು, ನಂತರ ಅವರನ್ನು ಮಹಿಳಾ ಮೋರ್ಚಾದಿಂದ ಸನ್ಮಾನಿಸಲಾಯಿತು.
ಶಿಬಿರದಲ್ಲಿ ಪುರಸಭೆ ಅದ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಉಪಾದ್ಯಕ್ಷ ಮಂಜುನಾಥ ಬ್ಯಾಹಟ್ಟಿ, ರೇಣುಕನಗೌಡ ಪಾಟೀಲ, ಬಸನಗೌಡ ರಾಮನಗೌಡ್ರ, ಹನುಮಂತಪ್ಪ ಹರಿಜನ, ಪ್ರತಿಕ ಕೋಳೆಕಾರ, ಕಾಶೀನಾತ ಕಳ್ಳಿಮನಿ, ಶಿವರಾಜ ರಾಯಣ್ಣವರ, ವಿನಯ ಮುಂಡಗೋಡ, ರತ್ನಾ ಬನ್ನಿಕೊಪ್ಪ, ನಿರ್ಮಲಾ ಯಡಪ್ಪನವರ, ಗೀತಾ ಹೊಸಮನಿ, ಸುಷ್ಮಿತಾ ರೆಡ್ಡಿ, ಹನುಮಂತಪ್ಪ ಗುಳೇದ, ಸಚಿನ ಮಡಿವಾಳರ, ಚೇತನ ಕಲಾಲ ಹಾಗೂ ಸತ್ಯ ಸೇವಾ ಸಮಿತಿಯ ಸದಸ್ಯರು ಹಾಗೂ ಶಿಭಿರಾರ್ಥಿಗಳು ಹಾಜರಿದ್ದರು.