ಯೋಗದಿಂದ ಏಕಾಗ್ರತೆ ಹೆಚ್ಚುತ್ತದೆ : ಹೆಗ್ಗಣ್ಣವರ
ಯರಗಟ್ಟಿ 13: ಯೋಗ ನಮಗೆ ಉತ್ತಮ ಆರೋಗ್ಯವನ್ನು ಕೊಡುವುದರ ಜೊತೆಗೆ ಉತ್ಕೃಷ್ಟವಾದ ಜೀವನವನ್ನು ಕೊಡುತ್ತದೆ. ಯೋಗದಿಂದ ಮನಸ್ಸು ಅತ್ತಿತ್ತ ಹರಿದಾಡುವುದು ನಿಲ್ಲುತ್ತದೆ, ಏಕಾಗ್ರತೆ ಹೆಚ್ಚುತ್ತದೆ ಎಂದು ಸವದತ್ತಿ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ ಹೇಳಿದರು.
ಅವರು ಸಮೀಪದ ಮುನವಳ್ಳಿ ಪಟ್ಟಣದ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಕರ್ನಾಟಕ ಯೋಗಾಸನಕ್ರೀಡಾ ಸಂಸ್ಥೆ, ಬೆಳಗಾವಿ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆ ಹಾಗೂ ಪಟ್ಟಣದ ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರದ ಸಹಯೋಗದಲ್ಲಿ ಜರುಗಿದ ಬೆಳಗಾವಿ ವಿಭಾಗ ಮಟ್ಟದ ಯೋಗಾಸನ ಸ್ಪರ್ಧೆ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಸಮಾರಂಭ ಉಪ್ಪಿನಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ, ಮುರುಘೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಏಷಿಯನ್ ಯೋಗಾ ಕ್ರೀಡಾ ಸಂಸ್ಥೆಯ ರಾಜ್ಯಾಧ್ಯಕ್ಷ ಡಾ. ಎಂ. ನಿರಂಜನಮೂರ್ತಿ ಮಾತನಾಡಿ ಕ್ರಿಕೆಟ್, ಕಬಡ್ಡಿ, ಖೋಖೋ, ಹಾಕಿ ಆಟಗಳಿಗೆ ಸಿಕ್ಕಷ್ಟು ಹೆಚ್ಚಿನ ಪ್ರಚಾರ ಯೋಗಾಸನಕ್ಕೆ ಸಿಗದಿರುವುದು ಖೇದಕರ, ಪ್ರಧಾನಿ ನರೇಂದ್ರ ಮೋದಿಯವರು ಯೋಗವನ್ನು ಭಾರತದಿಂದ ಇಡೀ ವಿಶ್ವಕ್ಕೆ ಒಯ್ಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು.
ಎನ್. ಪರಶುರಾಮಪ್ಪ, ಅರುಣಗೌಡ ಪಾಟೀಲ, ಶಂಕರ ಗಯ್ಯಾಳಿ, ಸಂಜೀವಕುಮಾರ ತುಳಜಣ್ಣವರ, ಆರ್.ಎಚ್.ಪಾಟೀಲ, ಆರತಿ ಪಡಸಲಗಿ, ಮೋಹನ ಕಾಮಣ್ಣವರ, ಬಿ.ಬಿ.ಹುಲಿಗೊಪ್ಪ, ಗಂಗಾಧರ ಗೊರಾಬಾಳ, ಶ್ರೀಶೈಲ ಅಶೋಕ ಸಂಕಣ್ಣವರ, ದಾನಪ್ಪ ಗದಗಿನ, ಪರಶುರಾಮ ಕದಂ, ಎಂ.ಎ.ಕಮತಗಿ, ಈರಣ್ಣ ಸಂಕಣ್ಣವರ, ಕೆ.ಬಿ.ನಲವಡೆ, ಎಂ.ಎಚ್.ಪಾಟೀಲ, ಜಗದೀಶ ಹಿರೇಮಠ, ಶೇಖರ ಮುಪ್ಪಿನವರಮಠ, ಶಂಕರ ಅಪ್ಪೋಜಿ ಸೇರಿದಂತೆ ಇತರರು ಇದ್ದರು.