ಶಿಗ್ಗಾವ್

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಯೋಗ ತರಬೇತಿ ಶಿಬಿರ

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಯೋಗ ತರಬೇತಿ ಶಿಬಿರ

ಶಿಗ್ಗಾವಿ/ಗೊಟಗೋಡಿ : ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ರ್ಟೀಯ ಯೋಗ ದಿನಾಚರಣೆಯ ಅಂಗವಾಗಿ ದಿನಾಂಕ 17-06-2022 ರಿಂದ ದಿನಾಂಕ 21-06-2022 ರ ವರೆಗೆ ಯೋಗ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. 

ಪಟ್ಟಣದ ಮಾಮ್ಲೆದೇಸಾಯಿ ಶಾಲೆಯ ಯೋಗ ಶಿಕ್ಷಕ ಕೆ.ಎಚ್‌.ಬಂಡಿವಡ್ಡರ ಅವರು ಯೋಗದ ಪ್ರಾತ್ಯಕ್ಷೀಕೆ ನೀಡಲಿದ್ದಾರೆ.  ವಿಶ್ವವಿದ್ಯಾಲಯದ ಬೋಧಕರು ಮತ್ರು ಬೋಧಕೇತರರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಆಸಕ್ತ ಜನಪದ ಕಲಾವಿದರು,  ಸಾರ್ವಜನಿಕರು ಶಿಭಿರದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕೆಂದು ವಿಶ್ವವಿದ್ಯಾಲಯ ಪ್ರಕಟಣೆಗೆ ತಿಳಿಸಿದೆ. 


ಸುದ್ದಿ ಓದಿ