ಕಾರವಾರ

ಯಡಿಯೂರಪ್ಪ ಕೊನೆಗೂ ಬರಲಿಲ್ಲ : ಜುಲೈ ತಿಂಗಳಲ್ಲಿ ಮೂರು ಸಲ ಫಿಕ್ಸ ಆಗಿತ್ತು ಸಿಎಂ ಪ್ರವಾಸ

ಯಡಿಯೂರಪ್ಪ ಕೊನೆಗೂ ಬರಲಿಲ್ಲ : ಜುಲೈ ತಿಂಗಳಲ್ಲಿ ಮೂರು ಸಲ ಫಿಕ್ಸ ಆಗಿತ್ತು ಸಿಎಂ ಪ್ರವಾಸ

ಕಾರವಾರ : ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ  ಅವರ  ಉತ್ತರ ಕನ್ನಡ ಜಿಲ್ಲೆಯ ಪ್ರವಾಸ ಜುಲೈ ತಿಂಗಳಲ್ಲೇ ಮೂರು ಸಲ ಫಿಕ್ಸ ಆಗಿತ್ತು. ಆದರೆ ಯಡಿಯೂರ​‍್ಪ ಅವರು ತಮ್ಮ ಹುದ್ದೆಗೆ ರಾಜೀವನಾಮೆ ನೀಡಿದ್ದಾರೆ. ಕಾರ್ಯಕ್ರಮ ನಿಗದಿಯಾದಂತೆ ಯಡಿಯೂರ​‍್ಪ ಅವರು ಬಂದಿದ್ದರೆ  ಕಾರವಾರದ ಮೆಡಿಕಲ್  ಕಾಲೇಜು ಅಧೀನದ 160 ಕೋಟಿ ರೂ.ವೆಚ್ಚದ ಆಸ್ಪತ್ರೆಗೆ ಅಡಿಗಲ್ಲು ಬಿದ್ದಿರುತ್ತಿತ್ತು. ಹಾಗೆ ಸಿಎಂ ಆಗಮನಕ್ಕೆ ಇನ್ನೂ ಮೂರು ಕಾಮಗಾರಿಗಳು ಕಾದಿದ್ದವು. ಎರಡು ಕಟ್ಟಡಗಳು ಉದ್ಘಾಟನೆಗೆ ಕಾದಿದ್ದವು. ಆದರೆ ಇದು ಸಾಧ್ಯವಾಗಲೇ ಇಲ್ಲ. ಶಾಸಕಿ ರೂಪಾಲಿ ನಾಯ್ಕರ ಕನಸು ಸಿಎಂ ಯಡಿಯೂರ​‍್ಪ ಅವರ ಕೈಯಿಂದ ಅನೇಕ ಕಾಮಗಾರಿಗಳಿಗೆ ಚಾಲನೆ ನೀಡುವುದಾಗಿತ್ತು. ಈ ಮೂಲಕ ತನ್ನ ರಾಜಕೀಯ ವಿರೋಧಿಗಳಿಗೆ ಉತ್ತರ ಹೇಳುವ ತಂತ್ರವೂ ಶಾಸಕಿಯ ಮುಂದಿತ್ತು, ಅವರ ದುರಾದೃಷ್ಟವೂ ಅಥವಾ ಯಡಿಯೂರ​‍್ಪ ಅವರ ದುರಾದೃಷ್ಟವೋ ಅವರೇ ಉತ್ತರ ಕನ್ನಡಕ್ಕೆ ಮಂಜೂರಿ ಮಾಡಿದ ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡುವ ಅವಕಾಶ ಸಿಗಲಿಲ್ಲ. ಕಾರವಾರ ಬಂದರು ವಿಸ್ತರಣೆ, ಅಲೆತಡೆಗೋಡೆ ಕಾಮಗಾರಿ ಹಾಗೂ ಹೊನ್ನಾವರ ಬಂದರು ಕಾಮಗಾರಿಗಳು ವಿವಾದ ಸ್ವರೂಪ ಪಡೆದವು. ಜಿಲ್ಲೆಯಲ್ಲಿ ನೆರೆಯಿಂದ 104 ಗ್ರಾಮಗಳ 16 ಸಾವಿರ ಜನ ಸಂಕಷ್ಟಕ್ಕೆ ಸಿಲುಕಿದರು. ನೂರಾರು ಎಕರೆ ಕೃಷಿ ಭೂಮಿ, ತೋಟಗಾರಿಕಾ ಭೂಮಿ ನೆರೆಯಿಂದ ಹಾಳಾಗಿದ್ದು , ಅಕ್ಷರ ಸಹ ಜಿಲ್ಲೆಯ ಜನ ಕಷ್ಟದಲ್ಲಿದ್ದರು. ರಾಷ್ಟ್ರಿಯ ಹೆದ್ದಾರಿ 63- ಅರಬೈಲ್, ಚಾಪೂಲಿ ಹತ್ತಿರ ಅಣಶಿ ರಾಜ್ಯ ಹೆದ್ದಾರಿ,  ಕೈಗಾ -ಇಳಕಲ್ಲ ರಾಜ್ಯ ಹೆದ್ದಾರಿಯ ಕಳಚೆ ಬಳಿ ಧರೆ ಹಾಗೂ ಗುಡ್ಡ ಕುಸಿದು ರಸ್ತೆ ಸಂಚಾರದ ಜೀವನಾಡಿಯೇ ನಿಂತು ಹೋಗಿದೆ. ಇಂಥ ಕಷ್ಟಕರ ಸಮಯದಲ್ಲಿ ಸಿಎಂ ರಾಜೀನಾಮೆ ನೀಡಿದ್ದು, ಜಿಲ್ಲೆ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದೆ.  

ಜುಲೈ 16 ಸಿಎಂ ಬರಬೇಕಿತ್ತು: 

ಯಡಿಯೂರ​‍್ಪ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ಕಳೆದ ವರ್ಷ ಜುಲೈನಲ್ಲಿ ಉತ್ತರ ಕನ್ನಡ ಪ್ರವಾಸ ನಿಗದಿಯಾಗಿತ್ತು. ಹವಾಮಾನ ವೈಪರಿತ್ಯ ಕಾರಣ ಪ್ರವಾಸ ರದ್ದಾಯಿತು. ಇದೇ ಜುಲೈ 16 ರಂದು ಕಾರವಾರ ಮೆಡಿಕಲ್ ಕಾಲೇಜು ಅಧೀನ ಅಸ್ಪತ್ರೆಯ ಹೊಸ ಕಟ್ಟಡಕ್ಕೆ ಶಂಕು ಸ್ಥಾಪನೆ,  9.80 ಕೋಟಿ ವೆಚ್ಚದ ಕಾರವಾರ ಸರ್ಕ್ಯೂಟ್ ಹೌಸ್ ನಿರ್ಮಾಣ, 5 ಕೋಟಿ ವೆಚ್ಚದದಲ್ಲಿ ಮಾಲಾದೇವಿ ಕ್ರೀಡಾಂಗಣ ಸುಧಾರಣೆ ಕಾಮಗಾರಿ, 4 ಕೋಟಿ ವೆಚ್ಚದಲ್ಲಿ ಕಾರವಾರದ ಲೋಕೋಪಯೋಗಿ ಇಲಾಖೆಯ ವಿಭಾಗ ಕಚೇರಿ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಬೇಕಿತ್ತ. ಕಾರ್ಯಕ್ರಮಕ್ಕೆ ಶಾಮಿಯಾನ ಸಾಮಾಗ್ರಿ ಸಹ ಮಾಲಾದೇವಿ ಕ್ರೀಡಾಂಗಣದಲ್ಲಿ ಹಾಕಲಾಗಿತ್ತು. ಅತೀ ಮಳೆ ಹಾಗೂ ಮೋಡದ ವಾತಾವರಣ ಕಾರಣ ಕಾರ್ಯಕ್ರಮ ರದ್ದಾಗಿ, ಜುಲೈ 23ಕ್ಕೆ ಕಾರ್ಯಕ್ರಮ ಮರು ನಿಗದಿಯಾಯಿತು. ಪ್ರಗತಿ ಪರೀಶೀಲನೆಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಎಲ್ಲಾ ದಾಖಲೆ ಸಿದ್ಧತೆ, ಪ್ರಜೆಂಟೇಶನ್ ರೆಡಿ ಮಾಡಿಕೊಂಡಿದ್ದರು. ಅತೀ ಮಳೆಯ ಕಾರಣ ಮತ್ತೆ ಕಾರ್ಯಕ್ರಮ ಮುಂದೂಡಲಾಯಿತು. ಜು.26ಕ್ಕೆ ಕಾರ್ಯಕ್ರಮ ಮತ್ತೆ ನಿಗದಿಯಾಗಿ ಸಿಎಂ ಅಧಿಕಾರಿಗಳಿಗೆ ಸೂಚನೆ ಸಹ ನೀಡಿದ್ದರು. ಜು.25ಕ್ಕೆ ಬೆಳಗಾವಿಗೆ ಬಂದಿದ್ದ, ಮುಖ್ಯಮಂತ್ರಿ ಯಡಿಯೂರ​‍್್ 30 ನಿಮಿಷ ಕಾರವಾರಕ್ಕೆ ಬಂದಿದ್ದರೆ, 200 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ಸಿಗುತ್ತಿದ್ದವು. ಹಾಗೆ ಪೂರ್ಣಗೊಂಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಟ್ಟಡ ಉದ್ಘಾಟನೆಯಾಗುತ್ತಿತ್ತು. ಈಗ ಈ ಎಲ್ಲಾ ಕಾಮಗಾರಿಗಳಿಗೆ ನೆನಗುದಿಗೆ ಬಿದ್ದಿವೆ. ನೂತನ ಸಿಎಂ ನೇಮಕದ ನಂತರ ಈ ಕಾಮಗಾರಿಗಳಿಗೆ ಚಾಲನೆ ಕೊಡುವ ಅನಿವಾರ್ಯತೆ ಇದ್ದು, ಅಲ್ಲಿಯತನಕ ಕಾಯಬೇಕಿದೆ.  

ಶಾಸಕರಿಗೆ ಅಪ್ತರಾಗಿದ್ದ ಮುಖ್ಯಮಂತ್ರಿ ಯಡಿಯೂರ​‍್ಪ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಕಾರವಾರ ಕ್ಷೇತ್ರಕ್ಕೆ ಕೊಂಚ ಹಿನ್ನೆಡೆಯಾಗಿರುವುದು ಮಾತ್ರ ಸತ್ಯ. ಕಾರವಾರ ಕ್ಷೇತ್ರದ ಕಾಮಗಾರಿಗಳಿಗೆ ನೇರ ಮುಖ್ಯಮಂತ್ರಿಯ ಬಳಿ ಹೋಗಿ ಕೆಲಸ ಮಾಡಿಕೊಂಡು ಬರುತ್ತಿದ್ದ ಶಾಸಕಿ ರೂಪಾಲಿ ನಾಯ್ಕಗೆ ಸಹ ರಾಜಕೀಯ ಹಿನ್ನೆಡೆಗೆ ಕಾರಣಾವಾಗಿದೆ.  

ಮುಖ್ಯಮಂತ್ರಿ ಯಡಿಯೂರ​‍್ಪ ಅವರ ಕಾರವಾರ ಭೇಟಿಯ ಪ್ರವಾಸ  ಕಾರ್ಯಕ್ರಮ ಒಂದೇ ತಿಂಗಳಲ್ಲಿ ಮೂರು ಸಲ ಕಾರ್ಯಕ್ರಮ ನಿಗದಿಯಾಗಿ, ಮೂರು ಸಲ ರದ್ದಾದದ್ದು ಮಾತ್ರ ವಿಪರ್ಯಾಸವೇ ಸರಿ. 


ಸುದ್ದಿ ಓದಿ