ಘಟಪ್ರಭಾ, ರಾಯಬಾಗ ನಿಲ್ದಾಣಗಳಿಗೆ ಯಶವಂತಪುರ, ಪಂಡರಪುರ ಎಕ್ಸ್ಪ್ರೆಸ್ ರೈಲ ನಿಲುಗಡೆ: ಈರಣ್ಣ ಕಡಾಡಿ
ಘಟಪ್ರಭಾ,14: ಪಂಢರಪುರದ ಪಾಂಡುರಂಗನ ದರ್ಶನಕ್ಕೆ ತೆರಳುವ ಜಿಲ್ಲೆಯ ಭಕ್ತರ ಬಹುದಿನಗಳ ಬೇಡಿಕೆಯಾಗಿದ್ದ ಯಶವಂತಪುರ, ಪಂಡರಪುರ ಎಕ್ಸ್ಪ್ರೆಸ್ ರೈಲನ್ನು ಘಟಪ್ರಭಾ ಹಾಗೂ ರಾಯಬಾಗ ನಿಲ್ದಾಣಗಳಿಗೆ ನಿಲುಗಡೆ ಕಲ್ಪಸುವಂತೆ ಕೇಂದ್ರ ರೈಲ್ವೆ ಸಚಿವರನ್ನು ವಿನಂತಿಸಲಾಗಿತ್ತು. ನನ್ನ ಮನವಿಯನ್ನು ಪರಿಗಣಿಸಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಈ ಭಾಗದ ಭಕ್ತರಿಗೆ ಅನುಕೂಲ ಕಲ್ಪಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿ ಘಟಪ್ರಭಾ ಮತ್ತು ರಾಯಬಾಗ ನಿಲ್ದಾಣಗಳಲ್ಲಿ ನಿಲುಗಡೆಗೆ ಆದೇಶ ಮಾಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಬುಧವಾರ ಆ.14 ರಂದು ನವದೆಹಲಿಯ ರೈಲು ಭವನದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾಗಿ, ನಿಲುಗಡೆ ಆದೇಶ ಪತ್ರಿಯನ್ನು ಪಡೆದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ರೈಲು ಸಂಖ್ಯೆ 16541 ಯಶವಂತಪುರ-ಪಂಡರಪೂರ ಹಾಗೂ ರೈಲು ಸಂಖ್ಯೆ 16542 ಪಂಡರಪೂರ-ಯಶವಂತಪುರ ಈ ರೈಲು ಘಟಪ್ರಭಾ ಹಾಗೂ ರಾಯಬಾಗ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ. ಪಂಢರಪುರಕ್ಕೆ ಹೊಗುವ ಪ್ರಯಾಣಿಕರು ಈ ರೈಲು ಸೇವೆಯ ಸದುಪಯೋಗ ಪಡಿಸಿಕೊಳ್ಳಕೊಳ್ಳಬೇಕು. ನನ್ನ ಮನವಿಗೆ ಸ್ಪಂದಿಸಿ ಘಟಪ್ರಭಾ ಮತ್ತು ರಾಯಬಾಗ ನಿಲ್ದಾಣಗಳಲ್ಲಿ ನಿಲುಗಡೆಗೆ ಆದೇಶ ನೀಡಿದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಈ ಭಾಗದ ಜನತೆಯ ಪರವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.