12ರಂದು ಹನುಮಂತ ದೇವರ ಓಕುಳಿ
ಯರಗಟ್ಟಿ: ಪಟ್ಟಣದಲ್ಲಿ ಸತತ ಎರಡು ವರ್ಷ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಕಂಗೆಟ್ಟಿರುವ ರೈತರು ಮೇ 12ರಂದು ಪಟ್ಟಣದ ಹನುಮಂತ ದೇವರ ಓಕುಳಿ ಆಚರಿಸಲು ತೀರ್ಮಾನಿಸಿದ್ದಾರೆ.
ಪ್ರತಿ ವರ್ಷ ಕೊಪ್ಪರಗಿಯಲ್ಲಿ ನೀರು ತುಂಬಿ ಓಕುಳಿ ಆಡುತ್ತಿದ್ದರು. 25 ವರ್ಷಗಳ ಹಿಂದೆ ಓಕುಳಿ ಹೊಂಡವನ್ನು ಮುಚ್ಚಿ ವೆಂಕಟೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಿರ್ಮಿಸಲಾಗಿತ್ತು. ಆದರೆ ಈ ಬಾರಿ ಮಳೆ ಆಗದ ಕಾರಣ ಪಟ್ಟಣದ ಗುರುಹಿರಿಯರು ಮಳೆಗಾಗಿ ಪ್ರಾರ್ಥಿಸಿ ಓಕುಳಿ ಹೊಂಡವನ್ನು ನಿರ್ಮಾಣ ಮಾಡಿ ಅದರಲ್ಲಿ ನೀರು ತುಂಬಿ ಆಡಲಾಗುವುದು. ಪಟ್ಟಣದ ಎಲ್ಲ ಸಮಾಜದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ದೇವಸ್ಥಾನದ ಹಿರಿಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎನ್. ಕೆ. ಹುಚ್ಚರಡ್ಡಿ, ಎಚ್. ಎಲ್. ವಜ್ರಮಟ್ಟಿ, ಗುಂಡುಗೌಡ ಮಿಕಲಿ, ರಮೇಶ ಪಾಟೀಲ, ಗೀರೀಶ ಪಾಟೀಲ, ಹನಮಂತ ವಜ್ರಮಟ್ಟಿ, ಹನಮಂತ ಹಳ್ಳಿಂಡಿ, ಆಕಾಶ ಚಪರದ, ರವಿ ದೇವರಡ್ಡಿ, ವಿಠ್ಠಲ ಶಿವಾಪೂರ, ಅರುಣ ಗಂಗರಡ್ಡಿ, ಪಾಂಡುಗೌಡ ಪಾಟೀಲ, ಗೋವಿಂದ ದೇವರಡ್ಡಿ, ಶ್ರೀನಿವಾಸ ವಜ್ರಮಟ್ಟಿ, ಎಚ್. ಎಸ್. ದೇವರಡ್ಡಿ ಸೇರಿದಂತೆ ಅನೇಕರು ಇದ್ದರು.