ಜೂನ 27 ರಿಂದ ಯರಗಟ್ಟಿ ಗ್ರಾಮದೇವಿ ಜಾತ್ರೆ
ಯರಗಟ್ಟಿ 26: ಇಲ್ಲಿನ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವ ಜೂನ 27 ದಿಂದ 5 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.
ಪ್ರತಿ 5 ವರ್ಷಕ್ಕೆ ಒಮ್ಮೆ ನಡೆಯುವ ಶ್ರೀ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವ ಯರಗಟ್ಟಿ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಿದೆ. ಎಲ್ಲ ಬೀದಿಗಳು ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿವೆ.
ಜು. 27 ಬೆಳಿಗ್ಗೆ 9 ಕ್ಕೆ ದೇವಿಯರನ್ನು ಸೀಮೆಯಿಂದ ಭವ್ಯ ಮೆರವಣಿಗೆ ಮೂಲಕ ಪುರ್ರವೇಶ ಮಾಡಲಾಗುವುದು.
ಜೂ. 28 ರಂದು ಬೆಳಿಗ್ಗೆ ಹೋಮ ಮಹಾಪೂಜೆ ನಡೆಯುವದು. ಸಂಜೆ 7 ಕ್ಕೆ ನೂತನ ಶಾಸಕ ವಿಶ್ವಾಸ ವೈದ್ಯ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮ ನಂತರ ಜಾನಪದ ಕಲಾವಿದ ಶಬ್ಬರ ಡಾಂಗೆ ತಂಡದಿಂದ ರಸಮಂಜರಿ ನಡೆಯುವದು.
ಜೂ. 29 ಬೆಳಿಗ್ಗೆ ಉಡಿ ತುಂಬುವದು, ರಾತ್ರಿ 9 ಕ್ಕೆ ಚವಡಕಿ ಪದಗಳು ಇರುತ್ತವೆ. 30 ರಂದು ಬೆಳಿಗ್ಗೆ ವಿಶೇಷ ಪೂಜೆ, ಉಡಿ ತುಂಬುವ ಕಾರ್ಯ ನಡೆಯಲಿದೆ. ರಾತ್ರಿ 8 ಕ್ಕೆ ದೇವಿಯರ ಹೊನ್ನಾಟ ಪ್ರಾರಂಭವಾಗಿ ಇಡಿದಿನ ರಾತ್ರಿ ನಡೆಯುವದು. ಇದಕ್ಕೆ ಹೊನ್ನಾದ ವಿಶೇಷ ವಾದ್ಯಮೇಳವು ಸಾತ ನೀಡಲಿದೆ.
ಜುಲೈ 01 ರಂದು ಮತ್ತೆ ಹೊನ್ನಾಟದ ಮೂಲಕ ಪಾದಗಟ್ಟಿ ತಲುಪುವುದು ನಂತರ ದೇವಿಯರನ್ನು ಸೀಮೆಗೆ ಕಳುಹಿಸುವ ಕಾರ್ಯಗಳು ನಡೆಯಲಿವೆ.