ಯರಗಟ್ಟಿ

ಯರಗಟ್ಟಿ ಸರಕಾರಿ ಪದವಿ ಕಾಲೇಜ್ ಪ್ರವೇಶ ಆರಂಭ

ಯರಗಟ್ಟಿ ಸರಕಾರಿ ಪದವಿ ಕಾಲೇಜ್ ಪ್ರವೇಶ ಆರಂಭ

ಯರಗಟ್ಟಿ 22: ಕಳೆದ ಹದಿನೈದು ವರ್ಷಗಳಿಂದ ಯರಗಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಉನ್ನತ ಶಿಕ್ಷಣವನ್ನು ನೀಡುತ್ತಿರುವ ಪಟ್ಟಣದ ಸಿ.ಎಂ. ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25ನೆಯ ಸಾಲಿನ ಬಿ.ಎ, ಬಿ.ಕಾಂ. ಹಾಗೂ ಬಿ.ಎಸ್‌.ಸಿ. ಪ್ರಥಮ ವರ್ಷಕ್ಕೆ ಪ್ರವೇಶಗಳು ಆರಂಭಗೊಂಡಿವೆ.ನಗರದ ಜನಜಂಗುಳಿಯಿಂದ ಅನತಿ ದೂರದ ಆಹ್ಲಾದಕರ ವಾತಾವರಣದ ಕಾಲೇಜು ವಿದ್ಯಾಭ್ಯಾಸಕ್ಕೆ ಸೂಕ್ತವಾಗಿದೆ. ಜೊತೆಗೆ ನುರಿತ, ಕ್ರಿಯಾಶೀಲ ಅಧ್ಯಾಪಕರು ನಿರಂತರ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಗಳ ಮೂಲಕ ವಿದ್ಯಾರ್ಥಿಗಳ ಪ್ರಗತಿಗೆ ಅನವರತ ಪ್ರಯತ್ನಿಸುತ್ತಿದ್ದಾರೆ. ಪಠ್ಯ ಬೋಧನೆಯೊಂದಿಗೆ ನಿಯಮಿತವಾಗಿ ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳ ಸವಾಂರ್ಗೀಣ ಪ್ರಗತಿಗೆ ಶ್ರಮವಹಿಸಲಾಗುತ್ತಿದೆ. ಪರಿಣಾಮವಾಗಿ ತಾಲೂಕು, ಜಿಲ್ಲೆ ಮಾತ್ರವಲ್ಲದೆ ರಾಜ್ಯಮಟ್ಟದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭೆಯು ಅನಾವರಣಗೊಳ್ಳುತ್ತಿದೆ. ಕಥೆ, ಕವಿತೆ, ಚಿತ್ರ ರಚನೆಯಂತಹ ಸೃಜನಾತ್ಮಕ ವ್ಯಕ್ತಿತ್ವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದ ವೇದಿಕೆಗಳಲ್ಲಿ ಕವಿತೆ ವಾಚನ, ಪ್ರಬಂಧ ಮಂಡನೆ ಮಾಡುತ್ತಿದ್ದಾರೆ. 

ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಬಿ.ಇಡಿ, ಎಂ.ಎ, ಎಂ.ಕಾಂ, ಪಿಎಚ್‌.ಡಿ. ಸೇರಿದಂತೆ ಉನ್ನತ ವ್ಯಾಸಂಗದಲ್ಲಿ ತೊಡಗಿದ್ದಾರೆ.ಆಧುನಿಕ ಸ್ಪರ್ಧಾತ್ಮಕ ಯುಗದ ಪ್ರವೇಶಕ್ಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಮಧ್ಯಾಹ್ನದ ಅವಧಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಪರಿಣಾಮವಾಗಿ ಹಲವು ವಿದ್ಯಾರ್ಥಿಗಳು ಎಸ್‌.ಎಲ್‌.ಇ.ಟಿ, ಎನ್‌.ಇ.ಟಿ ಸೇರಿದಂತೆ ರಾಜ್ಯ, ರಾಷ್ಟ್ರಮಟ್ಟದ ಅರ್ಹತಾ ಪರೀಕ್ಷೆ ಉತ್ತೀರ್ಣರಾಗಿದ್ದಾರೆ. ಪೊಲೀಸ್ ಕಾನಿಸ್ಟೇಬಲ್, ಸೈನಿಕ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕ, ದ್ವಿ.ದ.ಸ, ಪ್ರ.ದ.ಸ. ದಂತಹ ಸರಕಾರಿ ನೌಕರಿಗಳೊಂದಿಗೆ ಖಾಸಗಿ ಕಂಪನಿಗಳು ಮತ್ತು ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.ಪಾಲಕರು ತಮ್ಮ ಮಕ್ಕಳ ಸವಾಂರ್ಗೀಣ ಪ್ರಗತಿಗಾಗಿ ಸ್ಥಳೀಯವಾಗಿ ಲಭ್ಯವಿರುವ ಗುಣಮಟ್ಟದ ಪದವಿ ಶಿಕ್ಷಣಕ್ಕಾಗಿ ಮಹಾವಿದ್ಯಾಲಯದಲ್ಲಿ ದಾಖಲಾತಿ ಪಡೆಯಿರಿ ಎಂದು ಪ್ರಾಂಶುಪಾಲರಾದ ಪ್ರೊ. ಆರ್‌.ಎಸ್‌. ಮರಿಗೌಡರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ