ಗೋಕಾಕ್

ಅಧ್ಯಕ್ಷರಾಗಿ ಯಲ್ಲಾಲಿಂಗ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಆಯ್ಕೆ

ಅಧ್ಯಕ್ಷರಾಗಿ ಯಲ್ಲಾಲಿಂಗ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಆಯ್ಕೆ

ಬೆಟಗೇರಿ 06: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಯಲ್ಲಾಲಿಂಗ ದೇಯನ್ನವರ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಪೇದನ್ನವರ ಜ.4 ರಂದು ಅವಿರೂಧವಾಗಿ ಆಯ್ಕೆಯಾಗಿದ್ದಾರೆ.  

ಸಂಘದ ಆಡಳಿತ ಮಂಡಳಿಗೆ ಚುನಾಯಿತಗೊಂಡ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಈ ವೇಳೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ನೂತನ ಅಧ್ಯಕ್ಷ ಯಲ್ಲಾಲಿಂಗ ದೇಯನ್ನವರ, ಉಪಾಧ್ಯಕ್ಷ ಮಲ್ಲಿಕಾರ್ಜುನ ಪೇದನ್ನವರ  ಅವರನ್ನು ಸತ್ಕರಿಸಲಾಯಿತು. ಚುನಾವಣಾಧಿಕಾರಿಯಾಗಿ ಎಸ್‌.ಎ.ದೊಡಮನಿ ಕಾರ್ಯನಿರ್ವಹಿಸಿದರು. 

ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಅರ್ಜುನ ದೇಯನ್ನವರ, ಈಶ್ವರ ಮುಧೋಳ, ಲಕ್ಕಪ್ಪ ಚಂದರಗಿ, ಹನುಮಂತ ಸವತಿಕಾಯಿ, ಈರಣ್ಣ ಬಳಿಗಾರ, ಬಸವರಾಜ ದಂಡಿನ, ಅಶೋಕ ಕೋಣಿ, ಭೀಮಶೆಪ್ಪ ದೇಯಣ್ಣವರ, ಬಸಪ್ಪ ದೇಯನ್ನವರ, ಕೆಂಪಣ್ಣ ಪೇದನ್ನವರ, ಸಿದ್ಧಾರೂಢ ಸವತಿಕಾಯಿ, ಭೀಮಶೆಪ್ಪ ಚಂದರಗಿ,  ಬಸಪ್ಪ ತೋಟಗಿ, ಮಹಾಂತೇಶ ಮಾಳೇದ, ಅಜ್ಜಪ್ಪ ಪೇದನ್ನವರ, ಸಂಘದ ಆಡಳಿತ ಮಂಡಳಿಗೆ ಆಯ್ಕೆಗೊಂಡ ನೂತನ ಸದಸ್ಯರು ಸೇರಿದಂತೆ ಸ್ಥಳೀಯ ರಾಜಕೀಯ ಮುಖಂಡರು, ಯುವಕರು, ಅಭಿಮಾನಿಗಳು, ಇತರರು ಇದ್ದರು. 


ಸುದ್ದಿ ಓದಿ