ಯಕ್ಷಗಾನ ಕಾರ್ಯಕ್ರಮ
ಯರಗಟ್ಟಿ12 : ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಆವರಣದಲ್ಲಿ ಹೊಟೇಲ ಮಾಲಕರ ಹಾಗೂ ಬಾರ್ ಮಾಲಕರ ಮತ್ತು ಎಸ್. ಕೆ. ಫೌಂಡೇಶನ್, ಪಾನ್ ಶಾಪ್ ಮಾಲಕರ ಸಂಘದಿಂದ ಏರ್ಪಡಿಸಿದ್ದ ಯಕ್ಷಗಾನ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಸದರಿ ಕಾರ್ಯಕ್ರಮದ ಸಾನಿಧ್ಯವನ್ನು ಗಣಪತಿ ಮಹಾರಾಜರು ವಹಿಸಿದ್ದರು, ಅಧ್ಯಕ್ಷತೆಯನ್ನು ಜೆ. ರತ್ನಾಕರ ಶೆಟ್ಟಿ, ಅಥಿತಿಗಳಾಗಿ ಯಕ್ಷಗಾನ ಬಾಗವತರಾದ ಸಾದಾಶಿವ ಆಮಿನ, ವಿಶಾಲಗೌಡ ಪಾಟೀಲ, ಮೋಹನ ಹಾದಿಮನಿ, ರವಿ ಶೆಟ್ಟಿ, ಭಾಸ್ಕರ ಹಿರೇಮೆತ್ರಿ, ಶಿವಾನಂದ ಕರಿಗೊಣ್ಣವರ, ರಾಜೇಂದ್ರ ಶೆಟ್ಟಿ, ಕೃಷ್ಣಮೂರ್ತಿ ತೋರಗಲ್, ಸುದಾಕರ ಶೆಟ್ಟಿ, ವಸಂತ ಶೆಟ್ಟಿ, ಹೇಮಂತ ದೇವರಡ್ಡಿ, ಸೇರಿದಂತೆ ಅನೇಕರು ಇದರು.