ದುರ್ಗಾದೇವಿ ಜಾತ್ರಾ ಮಹೋತ್ಸವದಲ್ಲಿ ಕುಸ್ತಿ ಪಂದ್ಯ
ಶಿಗ್ಗಾವಿ 01: ತಾಲೂಕಿನ ಐತಿಹಾಸಿಕ ಬಂಕಾಪೂರ ಮುನವಳ್ಳಿ ಗ್ರಾಮದ ತೋಪಿನ ದುರ್ಗಾ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಕುಸ್ತಿ ಪಂದ್ಯಗಳು ಜರುಗಿದವು. ಜಾತ್ರಾ ಮಹೋತ್ಸವ ಸಮಿತಿ ಕೊರೊನಾ ಇರುವ ಕಾರಣ ಭಕ್ತರ ಹಾಗೂ ಕುಸ್ತಿ ಸ್ಪರ್ಧಾಳುಗಳ ಒತ್ತಾಯದ ಮೇರೆಗೆ ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡಿ ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿದರು. ಪೊಲೀಸ್ ಇಲಾಖೆ ಸೂಕ್ತ ಬಂದು ಬಸ್ತ ವ್ಯವಸ್ಥೆ ಮಾಡಿದರು. ಬಿಜೆಪಿ ಮುಖಂಡ ಉಮೇಶ ಅಂಗಡಿ ಮತ್ತು ಕಾಂಗ್ರೆಸ್ ವಕ್ತಾರ ಮಂಜುನಾಥ ಮಣ್ಣಣ್ಣವರ ಸೇರಿದಂತೆ ಕುಸ್ತಿ ಸ್ಪರ್ಧಾಳುಗಳು ಉಪಸ್ಥಿತರಿದ್ದರು.